ಚೌಮೀನ್ ಜೋರಾಗಿ ಕಲಕಿ ಕರಿಯಲಾಗುವ ಚೈನೀಸ್ ನೂಡಲ್‍ಗಳ ಖಾದ್ಯವಾಗಿದೆ. ಇದು ತರಕಾರಿಗಳು ಮತ್ತು ಕೆಲವೊಮ್ಮೆ ಮಾಂಸ ಅಥವಾ ಟೋಫ಼ುವನ್ನು ಹೊಂದಿರುತ್ತದೆ. ಈ ಖಾದ್ಯವು ಚೈನಾದ ವಲಸಗಿರಾದ್ಯಂತ ಜನಪ್ರಿಯವಾಗಿದೆ ಮತ್ತು ವಿದೇಶದಲ್ಲಿನ ಬಹುತೇಕ ಚೈನೀಸ್ ರೆಸ್ಟೊರೆಂಟ್‍ಗಳ ಖಾದ್ಯಪಟ್ಟಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇದು ವಿಶೇಷವಾಗಿ ಭಾರತ, ನೇಪಾಳ, ಯುಕೆ, ಮತ್ತು ಅಮೇರಿಕದಲ್ಲಿ ಜನಪ್ರಿಯವಾಗಿದೆ. ಭಾರತದಲ್ಲಿ, ಇದನ್ನು ಕೊಲ್ಕತ್ತಾದಲ್ಲಿನ ಚೀನಿ ಜನರು ಪರಿಚಯಿಸಿದರು. ಸಾಮಾನ್ಯವಾಗಿ ಇದನ್ನು ಹಾಗೆಯೇ ಅಥವಾ ಗ್ರೇವಿಯೊಂದಿಗೆ ನೀಡಲಾಗುತ್ತದೆ. ಸಸ್ಯಾಹಾರಿ ಆಹಾರಕ್ಕೆ ಹೊಂದಿ ತೃಪ್ತಿಪಡಿಸಲು ತರಕಾರಿ ಚೌಮೀನ್ (ವೆಜ್ ಚೌಮೀನ್) ಎಂಬ ಒಂದು ಭಾರತೀಯ ವಿಧವಿದೆ. ಇದು ಎಲೆಕೋಸು, ಕಳಲೆ, ಬಟಾಣಿ, ಹಸಿರು ಮೆಣಸಿನಕಾಯಿ ಮತ್ತು ಗಜ್ಜರಿಯೊಂದಿಗೆ ನೂಡಲ್ಸ್‌ನ್ನು ಹೊಂದಿರುತ್ತದೆ. ನವ ದೆಹಲಿ ಪ್ರದೇಶದಲ್ಲಿ, ನೂಡಲ್ಸ್ ಮತ್ತು ತರಕಾರಿಗಳ ಮಿಶ್ರಣದ ಜೊತೆಗೆ ಚೌಮೀನ್ ಕೆಲವೊಮ್ಮೆ ಪನೀರ್‌ನ್ನು ಒಳಗೊಂಡಿರಬಹುದು. == ಉಲ್ಲೇಖಗಳು ==