ಛೋಯಿಲಾ ಜಾಲರಿ ಮೇಲೆ ಸುಟ್ಟ ಮಸಾಲೆಭರಿತ ಎಮ್ಮೆ ಮಾಂಸವನ್ನು ಹೊಂದಿರುವ ಒಂದು ವಿಶಿಷ್ಟ ನೇವಾರಿ ಖಾದ್ಯವಾಗಿದೆ. ಈ ಖಾದ್ಯವು ಸಾಂಪ್ರದಾಯಿಕವಾಗಿ ಎಮ್ಮೆ ಮಾಂಸದಿಂದ ಜನಪ್ರಿಯವಾಗಿದೆಯಾದರೂ, ಇತ್ತೀಚಿನ ದಿನಗಳಲ್ಲಿ ಕುರಿಮಾಂಸ, ಕೋಳಿಮಾಂಸ, ಬಾತುಕೋಳಿ ಮಾಂಸ ಮತ್ತು ಅಣಬೆಯನ್ನು ಕೂಡ ಬಳಸಲಾಗುತ್ತಿದೆ. ಸಾಮಾನ್ಯವಾಗಿ ಛಿಯುರಾದೊಂದಿಗೆ (ಅಕ್ಕಿಯ ತೆಳು ಬಿಲ್ಲೆಗಳು) ತಿನ್ನಲ್ಪಡುವ ಈ ಖಾದ್ಯವು ಬಹಳ ಖಾರ, ಬಿಸಿ ಮತ್ತು ಬಾಯಿಯಲ್ಲಿ ನೀರು ಬರಿಸುವಂಥದ್ದಾಗಿರುತ್ತದೆ. ನೇವಾರಿ ಸಮುದಾಯದಲ್ಲಿ ಹಬ್ಬಗಳ ಸಂದರ್ಭದಲ್ಲಿ ಇದನ್ನು ಹಲವಾರು ಇತರ ಘಟಕಾಂಶಗಳೊಂದಿಗೆ ಆಹಾರದ ಅಗತ್ಯ ಭಾಗವೆಂದು ಪರಿಗಣಿಸಲಾಗುತ್ತದೆ. ಇದು ಸಮಯ್ ಬಜಿ ಖಾದ್ಯದ ಮುಖ್ಯವಾದ ಘಟಕಾಂಶ ಕೂಡ ಆಗಿದೆ. == ಉಲ್ಲೇಖಗಳು ==