ಜಂಬೆ( )ಭಾರತ,ಮ್ಯಾನ್ಮಾರ್,ಕಾಂಬೋಡಿಯಾಮತ್ತು ಥೈಲ್ಯಾಂಡ್ ದೇಶಗಳಲ್ಲಿ ವ್ಯಾಪನೆ ಇರುವ ಮರ.ಕರ್ನಾಟಕದಲ್ಲಿ ಪರ್ಣಪಾತಿಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. == ಸಸ್ಯಶಾಸ್ತ್ರೀಯ ವರ್ಗೀಕರಣ == ಇದು ಲೆಗುಮಿನೋಸೆ ಕುಟುಂಬದ ಮಿಮೋಸಿಯೆ ಉಪ ಕುಟುಂಬದಲ್ಲಿದೆ.ಸಸ್ಯಶಾಸ್ಟ್ರೀಯ ಹೆಸರು ಕ್ಸೈಲಿಯ ಕ್ಸೈಲೋಕಾರ್ಪ ಎಂದಾಗಿದೆ.ತುಳು ಬಾಷೆಯಲ್ಲಿ 'ತಿರುವೆ' ಎಂದು ಕರೆಯುತ್ತಾರೆ. ಕೆಲವು ಕಡೆ ಕರೆಯುತ್ತಾರೆ. == ಸಸ್ಯದ ಗುಣಲಕ್ಷಣಗಳು == ಇದು ಮದ್ಯಮದಿಂದ ದೊಡ್ಡ ಪ್ರಮಾಣದ ಮರ.ಅಂದಾಜು ೧೨೦ ಅಡಿಗಳ ವರೇಗೂ ಬೆಳೆಯುತ್ತದೆ.ಎಲೆಗಳು ದ್ವಿಲತಾ ಸಂಯುಕ್ತ ಪರ್ಣಿಗಳು(-).ತೊಗಟೆ ನಯವಾಗಿದ್ದು,ಅಸಮಾನ ಹೊಪ್ಪಳಿಕೆಗಳಾಗಿ ಕಳಚುವುದು.ದಾರುವು ಅತಿ ಗಡಸು,ಕಂದುಕೆಂಪು ಬಣ್ಣ.ಬಲಯುತವಾಗಿ ಬಹಳ ಕಾಲ ಬಾಳಿಕೆ ಬರುತ್ತದೆ. == ಉಪಯೋಗಗಳು == ಇದರ ಚೌಬೀನೆಯನ್ನು ಗೃಹ ನಿರ್ಮಾಣದಲ್ಲಿ ಬಳಸುತ್ತಾರೆ.ಇದರ ಸೌದೆ,ಇದ್ದಿಲುಕೂಡಾ ಉತ್ತಮ ದರ್ಜೆಯದಾಗಿದ್ದು,ಕಬ್ಬಿಣದ ತಯಾರಿಕೆಯಲ್ಲಿ ಉಪಯೋಗಿಸಲ್ಪಡುತ್ತದೆ.ಇದರ ಚಕ್ಕೆಯು ಜಂತುನಾಶಕ. == ಅಧಾರ ಗ್ರಂಥಗಳು == ೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ