ಜಕ್ಕಲವಡಿಕೆ - ಇದು ಕರ್ನಾಟಕದ ಚಿತ್ರದುರ್ಗಜಿಲ್ಲೆಯ ಮೊಳಕಾಲ್ಮೂರುತಾಲೂಕಿನ ಒಂದು ಕುಗ್ರಾಮದ ಹೆಸರು. ಇದು ಪ್ರಸಿದ್ಧ ಅಶೋಕನ ಶಾಸನಗಳಿರುವ ಸಿದ್ಧಾಪುರದ ಹತ್ತಿರವಿದೆ. ಇದರ ಹೆಸರಿನ ಉತ್ಪತಿಯ ಬಗ್ಗೆ ಅನೇಕ ಅಭಿಪ್ರಾಯಗಳಿವೆ. == ಹೆಸರಿನ ಉತ್ಪತಿ == ಅವುಗಳೆಂದರೆ - ೧)ಜಕ್ಕಲವಡಿಕೆ = ಜಗ + ಕಲ + ವಾಡಿ = ಕಲಾ ಜಗತ್ತಿನ ಮನೆ.( ). ಇದರ ಪ್ರಕಾರ ಈ ಪ್ರದೇಶ ಪ್ರಾಚೀನ ಕಲೆಗೆ ಸಂಭಂದಪಟ್ಟಂತಿದೆ. ೨)ಜಕ್ಕಲವಡಿಕೆ = ಜಕ್ಕ + ಅಳವಡಿಕೆ = ಯತ್ತಿನ ಗಾಡಿಯ ಜಕ್ಕದ ಅಳವಡಿಕೆ.( ). ಇದರ ಪ್ರಕಾರ ಈ ಪ್ರದೇಶ ಯತ್ತಿನ ಗಾಡಿಯ ತಯಾರಿಕೆಗೆ ಸಂಭಂದಪಟ್ಟಂತಿದೆ. ೩)ಜಕ್ಕಲವಡಿಕೆ = ಜಕ್ಕಲ + ಅಡಿಕೆ = ಒಂದು ರೀತಿಯ ಅಡಕೆ.( ). ಇದರ ಪ್ರಕಾರ ಈ ಪ್ರದೇಶ ಅಡಿಕೆ ಮಾರಾಟಕ್ಕೆ ಸಂಭಂದಪಟ್ಟಂತಿದೆ. ೪)ಜಕ್ಕಲವಡಿಕೆ = ಜಕ್ಕಲ + ವಾಡಿ = ಜಕ್ಕಲ ಮುನಿಯ ಆಶ್ರಮ.( ). ಇದರ ಪ್ರಕಾರ ಈ ಪ್ರದೇಶ ಜಕ್ಕಲ ಮುನಿಯ ಆಶ್ರಮಕ್ಕೆ ಸಂಭಂದಪಟ್ಟಂತಿದೆ. ೫)ಜಕ್ಕಲವಡಿಕೆ = ಜಗಳ + ವಾಡಿಕೆ = ಜಗಳವಾಡುವ ಸ್ಥಳ.( ). ಇದರ ಪ್ರಕಾರ ಈ ಪ್ರದೇಶ ಯುದ್ಧಕ್ಕೆ ಸಂಭಂದಪಟ್ಟಂತಿದೆ. ಹೀಗೆ ಹಲವಾರು ರೀತಿಯ ಅರ್ಥಗಳು ಇದಕ್ಕೆ ಬರಬಹುದು.