ಜಪಪುಷ್ಪಇದರ ವೈಜ್ಞಾನಿಕ ಹೆಸರು ಹೈಬಿಸ್ಕಸ್ ರೊಸ-ಸಿನೆನ್ಸಿಸ್. ಆಡುಮಾತಿನಲ್ಲಿಚೀನೀ ದಾಸವಾಳ, ಚೀನಾ ಗುಲಾಬಿ, ಹವಾಯಿಯನ್ ದಾಸವಾಳ,ಮ್ಯಾಲೋ ಗುಲಾಬಿಎಂದುಕರೆಯಲಾಗುತ್ತದೆ. ಇದು ಉಷ್ಣವಲಯದಲ್ಲಿ ಬೆಳೆಯುವ ಹೂಬಿಡುವ ಸಸ್ಯವಾಗಿದೆ. ಜಪಪುಷ್ಪವನ್ನು 1753ರಲ್ಲಿ ಕಾರ್ಲ್‍ಲಿನ್ನಿಯಸ್‍ ಅವರ ಸ್ಪೀಸೀಸ್ ಪ್ಲಾಂಟರಮ್ನಲ್ಲಿ ಹೆಸರಿಸಲಾಯಿತು. ರೋಸಾ-ಸಿನೆನ್ಸಿಸ್ ಲ್ಯಾಟಿನ್ ಪದವಾಗಿದ್ದುಇದರ ಅರ್ಥಚೀನಾದ ಗುಲಾಬಿ ಎಂದು ಆದರೆ ಜಪಪುಷ್ಪಕ್ಕು ನಿಕಟ ಸಂಬಂಧವಿಲ್ಲ. == ವಿವರಣೆ == ಜಪಪುಷ್ಪ ನಿತ್ಯಹರಿದ್ವರ್ಣ ಪೊದೆಯಾಗಿದೆ.ಸಸ್ಯದಗಾತ್ರ 1-3 ಮೀ, 3-9 ಅಡಿಇರುತ್ತದೆ.ಇದು 5ದಳದ ಹೂವನ್ನು ಹೊಂದಿರುತ್ತದೆ.ರೂಟ್‍ ಒಂದು ಕವಲೊಡೆದ ಡ್ಯಾಪ್‍ ರೂಟ್‍ ಆಗಿದೆ. ಕಾಂಡವು ವೈಮಾನಿಕ, ನೆಟ್ಟಗೆ, ಹಸಿರು ಸಿಲಿಂಡಕಾರದ ಮತ್ತು ಶಾಖೆಯಂತಿದೆ.ಎಲೆಯು ಸರಳವಾಗಿದ್ದು ಎಲೆಯ ಆಕಾರ ಅಂಡಾಕಾರವಾಗಿದೆ. ತುದಿ ತೀವ್ರವಾಗಿರುತ್ತದೆ.ಈ ಗಿಡಗಳಿಗೆಗಿಡ ಹೇನುಗಳು ಹಾನಿ ಮಾಡುತ್ತವೆ. == ಹೂವಿನ ಲಕ್ಷಣಗಳು == ಸಂಪೂರ್ಣ ದ್ವಿಲಿಂಗಿ*ಇದು ವರ್ಷ ಪೂರ್ತಿ ಅರಳುತ್ತದೆ. ಜಪಪುಷ್ಪಅದರಗಾತ್ರ ಮತ್ತು ಕೆಂಪು ಬಣ್ಣ ಹೊರತಾಗಿಯು ಹಕ್ಕಿಗಳಿಗೆ ಆಕರ್ಷಕವಾಗಿದೆ. ಇದಕ್ಕೆಗಿಡ ಹೇನುಗಳು ಹಾನಿ ಮಾಡುತ್ತವೆ. == ವೈಜ್ಞಾನಿಕ ವರ್ಗೀಕರಣ == ಸಾಮ್ರಾಜ್ಯ: ಪ್ಲಾಂಟ ಕುಟುಂಬ: ಮಾಲ್ವಸಿಯೆ ಲಿಂಗ : ಹೈಬಿಸ್ಕಸ್ ಜಾತಿ: ರೋಸಾ ಸಿನೆನ್ಸಿಸ್ == ಹೂ ಬಣ್ಣಗಳು == ನೀಲಿ ಹೂವು ಕಿತ್ತಳೆ ಹೂವು ಗುಲಾಬಿ ಹೂವು ಪರ್ಪಲ್ ಹೂವು*ಬಿಳಿ ಹೂವು ಕೆಂಪು ಹೂವು ಹಳದಿ ಹೂವು == ಹವಾಮಾನ == ಮೆಡಿಟರೇನಿಯನ್ ಹವಾಮಾನ ಉಷ್ಣವಲಯ ಹವಾಮಾನ == ಉಪಯೋಗಗಳು == ಜಪಪುಷ್ಪ ಹೂವುಗಳು ಖಾದ್ಯವಾಗಿಯು ಬಳಕೆಯಾಗುತ್ತದೆ. ಪೆಸಿಫಿಕ್ ದ್ವೀಪಗಳಲ್ಲಿ ಸಲಾಡ್‍ಗಳಲ್ಲಿ ಬಳಸಲಾಗುತ್ತದೆ.ಕೂದಲ ಆರೈಕೆಯಲ್ಲೂಇದು ಸಹಾಯಕಾರಿಯಾಗಿದೆ.ಭಾರತದ ಕೆಲವು ಭಾಗಗಳಲ್ಲಿ ಬೂಟುಗಳನ್ನು ಬೆಳಗಿಸಲು ಇದನ್ನು ಬಳಸಲಾಗುತ್ತದೆ.ಇನ್ನೂದೇವರ ಪೂಜೆಗಳಿಗೆ ಕೆಂಪು ಹೂ ವಿಶೇಷವಾಗಿದೆ.ಇಂಡೋನೇಷ್ಯಾದಲ್ಲಿ ಈ ಹೂವುಗಳನ್ನು ಕೆಂಬಂಗ್ ಸೆಪಟುಎಂದುಕರೆಯಲಾಗುತ್ತದೆ.ಇದುಅಕ್ಷರಶಃ ಶೂ ಹೂ ಎಂದುಅರ್ಥ.ಜಪಪುಷ್ಪ ಹಲವಾರು ವೈದಕೀಯಗುಣವನ್ನು ಹೊಂದಿದೆ. ಇದು ಚರ್ಮದ ಆರೈಕೆಯಲ್ಲಿ ಸಹಾಯಕರಿ.ಇದನ್ನುಅಲಂಕಾರಿಕ ಸಸ್ಯವಾಗಿ ವ್ಯಾಪಾಕವಾಗಿ ಬೆಳೆಸಲಾಗುತ್ತಿದೆ. == ಬೆಳೆಸುವ ಸ್ಥಳ == ಇದು ಉಷ್ಣವಲಯದ ನಿತ್ಯಹರಿದ್ವರ್ಣ ಪೊದೆ ಸಸ್ಯವಾಗಿದೆ.ಬಿಸಿಲ ಕೊಠಡಿಗಳಲ್ಲಿ ಬೆಳೆಸಬಹುದು.ತೇವ ಸಾವಯುವ ಮಣ್ಣಿನಲ್ಲಿ ಸಮೃದ್ದವಾಗಿ ಬೆಳೆಯುತ್ತದೆ.ಇದರರೂಟ್ಸ್ ಎಂದಿಗೂ ಒಣಗದಂತೆ ನೋಡಿಕೊಳ್ಳಬೇಕು.ವಸಂತಕಾಲದಆರಂಭದಲ್ಲಿ ಈ ಗಿಡವನ್ನು ಕತ್ತರಿಸಿಕೊಳ್ಳಬಹುದು == ವಿಶೇಷತೆ == ಜಪಪುಷ್ಪಇದು ಮಲೇಷಿಯದ ರಾಷ್ಟ್ರೀಯ ಹೂವು. ಇದು ಮಲಯದಲ್ಲಿ ಬಂಗರಾಯಎಂದಯಕರೆಯಲ್ಪಡುತ್ತದೆ.12ನೆ ಶತಮನದಲ್ಲಿ ಮಲಯ ಪರ್ಯಾಯ ದ್ವೀಪದೊಳಗೆ ಪರಿಚಯಿಸಲಾಯಿತು.ಇದು 1958ರಲ್ಲಿ ರಾಷ್ಟ್ರೀಯ ಹೂವು ಆಗಿ ನಾಮ ನಿರ್ದೇಶನಗೊಂಡಿತು.1960 ಜುಲೈ 28 ರಂದು ಮಲೇಷಿಯ ಸರ್ಕಾರ ಜಪಪುಷ್ಪವನ್ನುರಾಷ್ಟ್ರೀಯ ಹೂವು ಎಂದು ಘೋಷಿಸಿತು. == ಉಲ್ಲೇಖ ==