ಜಾಖೂ ದೇವಾಲಯವು ಶಿಮ್ಲಾದಲ್ಲಿರುವ ಪುರಾತನ ದೇವಾಲಯವಾಗಿದ್ದು, ಹಿಂದೂ ದೇವತೆ ಹನುಮಂತನಿಗೆ ಸಮರ್ಪಿತವಾಗಿದೆ. ಇದು ಶಿಮ್ಲಾದ ಅತಿ ಎತ್ತರದ ಶಿಖರವಾದ ಜಾಖೂ ಗುಡ್ಡದ ಮೇಲೆ ಸ್ಥಿತವಾಗಿದೆ. ಪ್ರತಿ ವರ್ಷ, ದಸರಾದಂದು ಒಂದು ಉತ್ಸವವನ್ನು ನಡೆಸಲಾಗುತ್ತದೆ. 1972 ಕ್ಕಿಂತ ಮೊದಲು ಈ ಉತ್ಸವವನ್ನು ಅನಾಡೇಲ್‌ನಲ್ಲಿ ನಡೆಸಲಾಗುತ್ತಿತ್ತು. ರಾಮಾಯಣದ ಪ್ರಕಾರ, ಲಕ್ಷ್ಮಣನನ್ನು ಪುನರುಜ್ಜೀವನಗೊಳಿಸಲು ಸಂಜೀವನಿ ಮೂಲಿಕೆಯನ್ನು ಹುಡುಕುವಾಗ ಹನುಮಂತನು ವಿಶ್ರಾಂತಿ ಪಡೆಯಲು ಈ ಸ್ಥಳದಲ್ಲಿ ನಿಂತನು. 4 ನವೆಂಬರ್ 2010 ರಂದು ಜಾಖೂ ಹನುಮಾನ್ ದೇವಸ್ಥಾನದಲ್ಲಿ 108 ಅಡಿ ಎತ್ತರದ ದೈತ್ಯ ವಿಗ್ರಹವನ್ನು ಅನಾವರಣಗೊಳಿಸಲಾಯಿತು. ನಡಿಗೆ, ಕುದುರೆ, ಟ್ಯಾಕ್ಸಿ ಅಥವಾ ರಜ್ಜುಪಥದ ಮೂಲಕ ಈ ದೇವಾಲಯವನ್ನು ತಲುಪಬಹುದು. ಜಾಖೂ ರಜ್ಜುಪಥವು ವೈಮಾನಿಕ ಎತ್ತುಗವಾಗಿದ್ದು ಶಿಮ್ಲಾದ ಮಧ್ಯಭಾಗದ ಹತ್ತಿರವಿರುವ ಒಂದು ಬಿಂದುವನ್ನು ದೇವಾಲಯಕ್ಕೆ ಜೋಡಿಸುತ್ತದೆ. == ಛಾಯಾಂಕಣ == == ಉಲ್ಲೇಖಗಳು ==