ಜಿಂಬಾಬ್ವೆ (ಅಧಿಕೃತ ಹೆಸರು - ಜಿಂಬಾಬ್ವೆ ಗಣರಾಜ್ಯ) ಆಫ್ರಿಕಾ ಖಂಡ ದಕ್ಷಿಣ ಭಾಗದಲ್ಲಿ ಜಾಂಬೆಜಿ ಮತ್ತು ಲಿಂಪೋಪೋ ನದಿಗಳ ನಡುವಣ ಭಾಗದಲ್ಲಿನ ಒಂದು ರಾಷ್ಟ್ರ. ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿರುವ ಜಿಂಬಾಬ್ವೆಯ ದಕ್ಷಿಣದಲ್ಲಿ ದಕ್ಷಿಣ ಆಫ್ರಿಕಾ, ನೈಋತ್ಯದಲ್ಲಿ ಬೋಟ್ಸ್ವಾನಾ, ವಾಯವ್ಯಕ್ಕೆ ಜಾಂಬಿಯ ಮತ್ತು ಪೂರ್ವದಲ್ಲಿ ಮೊಜಾಂಬಿಕ್ ದೇಶಗಳಿವೆ. ಇಂಗ್ಲಿಷ್ ಇಲ್ಲಿನ ಅಧಿಕೃತ ಭಾಷೆಯಾಗಿದೆ. ಆದರೆ ಬಹುವಾಸಿ ಜನರು ನಾಡಿನ ಮೂಲನುಡಿಗಳಲ್ಲಿ ಒಂದಾದ ಶೋನಾ ಭಾಷೆಯನ್ನು ಬಳಸುವರು.