ಜಿಬೂಟಿ (ಅರಾಬಿಕ್‌ನಲ್ಲಿ جيبوتي ), ಅಧಿಕೃತವಾಗಿ ಜಿಬೂಟಿ ಗಣರಾಜ್ಯವೆಂದು ಕರೆಲ್ಪಡುವ ಈ ನಾಡು ಪೂರ್ವ ಆಫ್ರಿಕಾದಲ್ಲಿನ ಒಂದು ಸಾರ್ವಭೌಮ ರಾಷ್ಟ್ರವಾಗಿದೆ. ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಗಳ ತೀರದಲ್ಲಿರುವ ಜಿಬೂಟಿಯ ಉತ್ತರದಲ್ಲಿ ಎರಿಟ್ರಿಯ; ಪಶ್ಚಿಮ ಮತ್ತು ದಕ್ಷಿಣದಲ್ಲಿ ಇಥಿಯೋಪಿಯ ಮತ್ತು ಆಗ್ನೇಯದಲ್ಲಿ ಸೋಮಾಲಿಯ ದೇಶಗಳಿವೆ. ಜಿಬೂಟಿಯ ಕೆಂಪು ಸಮುದ್ರದ ತೀರದಿಂದ ೨೦ ಕಿ.ಮೀ. ಆಚೆಗೆ ಅರೇಬಿಯ ಜಂಬೂದ್ವೀಪವಿದೆ.