ರಾಗ ಜೈಜೈವಂತಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಖಮಾಜ್ ಥಾಟ್‍ನಲ್ಲಿ ಬಳಕೆಯಲ್ಲಿರುವ ಒಂದು ರಾಗ. ಗುರು ಗ್ರಂಥ ಸಾಹಿಬ್, ಪ್ರಕಾರ ಈ ರಾಗವು ಬಿಲಾವಲ್ ಮತ್ತು ಸೋರಥ್ ಎಂಬ ಎರಡು ರಾಗಗಳ ಮಿಶ್ರಣ.ಯಾವುದೇ ಪ್ರಾಚೀನ ಭಾರತೀಯ ಶಾಸ್ತ್ರೀಯ ಗ್ರಂಥಗಳು ಈ ರಾಗವನ್ನು ಪ್ರಸ್ಥಾಪಿಸಿಲ್ಲ ಹಾಗೂ ಗ್ರಂಥ ಸಾಹಿಬ್‍ನಲ್ಲಿ ಉಲ್ಲೇಖಿತವಾಗಿರುವ ರಾಗಮಾಲೆಯಲ್ಲಿ ಕೂಡಾ ಇದರ ಹೆಸರಿಲ್ಲ. == ವೈಶಿಷ್ಟ್ಯಗಳು == ರಾಗ ಜೈಜೈವಂತಿ ರಾತ್ರಿವೇಳೆಯ ಪ್ರಥಮ ಪ್ರಹರದ ರಾಗ ಮತ್ತು ಇದನ್ನು ಸಂಜೆ ಆರರಿಂದ ಒಂಭತ್ತು ಗಂಟೆಯ ಅವಧಿಯಲ್ಲಿ ಹಾಡುತ್ತಾರೆ. ಇದು ಗ್ರೀಷ್ಮ ಋತು ಅಥವಾ ಬೇಸಿಗೆಯಲ್ಲಿ ಹಾಡಲ್ಪಡುವ ರಾಗ. ಈ ರಾಗವನ್ನು ಗುರು ತೇಜ್ ಬಹಾದೂರ್ ರಚಿಸಿದರೆಂದು ಹೇಳಲಾಗಿದೆ. == ಸಂಯೋಜನೆ == ಆರೋಹ: ರಿ ಗ(ಕೋಮಲ್) ರಿ ಸ, ರಿ ಗ(ಶುದ್ಧ), ಮ, ಪ ಧ ಪ, ನಿ ಸ ಅವರೋಹ: ಸ ನಿ(ಕೋವಲ್) ಧ ಪ, ಧ ಮಾ ಗ ರಿ, ರಿ ಗ(ಕೋಮಲ್) ರಿ ಸ "ಸಾಧ್ಯ ಸಂಯೋಜನೆಗಳು" ನಿ ಸ ಧ ನಿ(ಕೋಮಲ್) ರಿ,ರಿ ಗ(ಕೋಮಲ್)ರಿ ಸ, ಪ ರಿ ಗ(ಕೋಮಲ್)ರಿ ಸ, ಮ ಪ ನಿ(ಶುದ್ಧ) ರಿ (ತಾರ ಸಪ್ತಕ) ನಿ(ಕೋಮಲ್) ಧ ಪ, ಧ ಮ ಗ ರಿ,ರಿ ಗ(ಕೋಮಲ್)ರಿ ಸ == ಜನಪ್ರಿಯ ಹಾಡುಗಳು == ಕರ್ನಾಟಕ ಸಂಗೀತದಲ್ಲಿ ಇದನ್ನು ದ್ವಜವಂತಿ ಎಂದು ಕರೆಯುತ್ತಾರೆ. == ಉರ್ದು == ದಿಲ್ ಕಾ ದಿಯಾ ಜಲಾಯ (ಚಿತ್ರ: ಕೋಯಲ್ (1959), ಗಾಯಕ: ನೂರ್ ಜಹಾನ್ (ದಿವಂಗರ), ಸಂಯೋಜಕ: ಖ್ವಾಜಾ ಖುರ್ಷಿದ್ ಅನ್ವರ್) == ಹಿಂದಿ == ಮನ್ ಮೋಹನ ಬರೇ ಝೂಟೆ (ಚಿತ್ರ: ಸೀಮಾ (1955), ಗಾಯಕಿ: ಲತಾ ಮಂಗೇಶ್ಕರ್) == ತಮಿಳು == ಅಂಬೇ ಸುಗಮಾ (ಸಂಗೀತ: ಎ. ಆರ್. ರಹಮಾನ್ , ಸಾಹಿತಿ:ವೈರಮುತ್ತು ,ಗಾಯಕರು: ಶ್ರೀನಿವಾಸ್, ಸಾಧನಾ ಸರ್ಗಂ) == ಮಲಯಾಳಂ == ಒರು ನೇರಂ ಎಂಕಿಲಮ್ (ಗಾಯಕರು:ಯೇಸುದಾಸ್,ಚಿತ್ರಾ) == ==