ಜ್ಯೋತಿರ್ವರ್ಷ ಎನ್ನುವುದು ಖಗೋಳಶಾಸ್ತ್ರದಲ್ಲಿ ಉಪಯೋಗಿಸಲ್ಪಡುವ ಒಂದು ದೂರಮಾನ. ಬೆಳಕು ಒಂದು ವರ್ಷದಲ್ಲಿ ಸಾಗುವ ದೂರಕ್ಕೆ ಒಂದು ಜ್ಯೋತಿರ್ವರ್ಷವೆಂದು ಹೆಸರು. ಇನ್ನೂ ಸ್ಪಷ್ಟವಾಗಿ, ಒಂದು ಫೋಟಾನ್ (ಬೆಳಕಿನ ಕಣ) ಮುಕ್ತವಾದ ಅವಕಾಶದಲ್ಲಿ, ಯಾವುದೇ ಗುರುತ್ವ ಅಥವಾ ಅಯಸ್ಕಾಂತ ಕ್ಷೇತ್ರಗಳಿಂದ ದೂರವಿರುವಾಗ ಒಂದು ವರ್ಷದಲ್ಲಿ ಸಾಗುವ ದೂರ. ಇಂತಹ ಪರಿಸ್ಥಿತಿಯಲ್ಲಿ ಬೆಳಕಿನ ವೇಗ ಕ್ಷಣಕ್ಕೆ ಸುಮಾರು ೨.೯೯ ಲಕ್ಷ ಕಿಮೀ. ಹಾಗಾಗಿ ಒಂದು ಜ್ಯೋತಿವರ್ಷ ಸುಮಾರು ೯.೪ ಲಕ್ಷ ಕೋಟಿ ಕಿಮೀ ದೂರಕ್ಕೆ ಸಮ. ದೂರಮಾನದ ಮೂರು ಮುಖ್ಯ ಮಾನದಂಡಗಳಲ್ಲಿ ಇದು ಒಂದು. ಇನ್ನೆರಡೆಂದರೆ ಖಗೋಳ ಮಾನ ಮತ್ತು ಪಾರ್ಸೆಕ್. ಜ್ಯೋತಿರ್ವರ್ಷದ ಮಾದರಿಯಲ್ಲೇ ಉಪಯೋಗಿಸಲಾಗುವ ಇನ್ನೆರಡು ದೂರಮಾನಗಳೆಂದರೆ "ಜ್ಯೋತಿರ್ನಿಮಿಷ" ಮತ್ತು "ಜ್ಯೋತಿರ್ಕ್ಷಣ" ಇದರ ಪ್ರಕಾರ ಸೂರ್ಯ ಭೂಮಿಯಿಂದ ಸುಮಾರು 8 ಬೆಳಕಿನ ಮಿನಿಟುಗಳಷ್ಟು ದೂರದಲ್ಲಿ ಉಂಟು. ಭೂಮಿಗೆ ಸಮೀಪತಮ ನಕ್ಷತ್ರದ ದೂರ ಸುಮಾರು 4.3 ಜ್ಯೋತಿರ್ವರ್ಷ. == ಗಣಿತಶಾಸ್ತ್ರದ ಪ್ರಕಾರ == ೩,೦೦,೦೦೦ ಕಿ.ಮೀ.(ಬೆಳಕಿನ ವೇಗ ಪ್ರತಿ ಸೆಕೆಂಡಿಗೆ) ೩೬೫ (ಒಂದು ವರುಷ) ೨೪ (ದಿನ) ೬೦(ನಿಮಿಷ) ೬೦ (ಸೆಕೆಂಡು)= ೯೪,೬೦,೮೦,೦೦,೦೦,೦೦೦ ಕಿ.ಮೀ. ಜ್ಯೋತಿರ್ವರ್ಷ ದೂರದ ಮಾಪನ. ಬೆಳಕು ಒಂದು ವರ್ಷಕ್ಕೆ ಎಷ್ಟು ದೂರ ಚಲಿಸುತ್ತದೋ ಅಷ್ಟು ದೂರವೇ ಒಂದು ಜ್ಯೋತಿರ್ವರ್ಷ. ಬೆಳಕಿನ ವೇಗ ೧ ಕ್ಷಣಕ್ಕೆ ೩,೦೦,೦೦೦ ಕಿ.ಮೀ. ೧ ನಿಮಿಷ = ೬೦ ಕ್ಷಣ = ೬೦ ೩೦೦೦೦೦ = ೧,೮೦,೦೦,೦೦೦ ಕಿ.ಮೀ. ೧ ಘಂಟೆ = ೬೦ ನಿಮಿಷ = ೬೦ ೧೮೦೦೦೦೦೦ = ೧೦೮,೦೦,೦೦,೦೦೦ ಕಿ.ಮೀ. ೧ ದಿನ = ೨೪ ಘಂಟೆ = ೨೪ ೧೦೮೦೦೦೦೦೦೦ = ೨,೫೯೨,೦೦,೦೦,೦೦೦ ಕಿ.ಮೀ. ೧ ವರ್ಷ = ೩೬೫ ದಿನ = ೩೬೫ ೨೫೯೨೦೦೦೦೦೦೦ = ೯,೪೬,೦೮೦,೦೦,೦೦,೦೦೦ ಕಿ.ಮೀ. ಹಾಗಾಗಿ ೧ ಜ್ಯೋತಿರ್ವರ್ಷವೆಂದರೆ ೯ ಲಕ್ಷದ ೪೬ ಸಾವಿರದ ೮೦ ಕೋಟಿ ಕಿ.ಮೀ.ಗಳು (ಸುಮಾರು). == ನಿಖರವಾಗಿ == ಜ್ಯೋತಿರ್ವರ್ಷ ಪದದಲ್ಲಿ ತುದಿಗೆ 'ವರ್ಷ'ವೆಂದಿದ್ದರೂ ಅದು 'ಕಾಲ' ಸೂಚಕ ಪದವಲ್ಲ; ದೂರದ ಅಳತೆ ಬೆಳಕಿನ ವೇಗ (299792458 ಮೀಟರ್ /ಸೆಕೆಂಡಿಗೆ) // (365.25 ದಿನಗಳಲ್ಲಿ ಕ್ರಮಿಸುವ ದೂರ. 1 ಜ್ಯೋತಿರ್ವರ್ಷ = 946073047,25,80,800 ಮೀಟರ್ /9,46,073,04,72,580.8 ಕಿ. ಮೀಟರ್ (ನಿಖರವಾಗಿ) 1 ಜ್ಯೋತಿರ್ವರ್ಷ= 9 ಕೋಟಿ 46 ಲಕ್ಷ 073 ಕೋಟಿ, 04 ಲಕ್ಷದ,72 ಸಾವಿರದ 580.8 ಕಿ. ಮೀಟರ್.(ನಿಖರವಾಗಿ)... == ಉಲ್ಲೇಖಗಳು == == ನೋಡಿ == ಸೂರ್ಯ ಬ್ರಹ್ಮಾಂಡ ಮಹಾಸ್ಪೋಟ