ಝಲ್ಕರಿಬಾಯಿ ಅವರು (೨೨ ನವೆಂಬರ್ ೧೮೩೦ - ೫ ಏಪ್ರಿಲ್ ೧೮೫೮) ಮಹಿಳಾ ಸೈನಿಕರಾಗಿದ್ದು, ಅವರು ೧೮೫೭ ರ ಭಾರತೀಯ ದಂಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರು ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯ ಮಹಿಳಾ ಸೈನ್ಯದಲ್ಲಿ ಸೇವೆ ಸಲ್ಲಿಸಿದರು. ಇವರು ಅಂತಿಮವಾಗಿ ಝಾನ್ಸಿ ರಾಣಿಗೆ ಪ್ರಮುಖ ಸಲಹೆಗಾರರ ಸ್ಥಾನಕ್ಕೆ ಏರಿದರು. ಝಾನ್ಸಿ ಮುತ್ತಿಗೆಯ ಸಂದರ್ಭದಲ್ಲಿ ಇವರು ರಾಣಿಯ ವೇಷ ಧರಿಸಿ ಅವಳ ಪರವಾಗಿ ಹೋರಾಡಿದರು. ರಾಣಿಗೆ ಕೋಟೆಯಿಂದ ಸುರಕ್ಷಿತವಾಗಿ ತಪ್ಪಿಸಿಕೊಳ್ಳಲು ಅನುವು ಮಾಡಿಕೊಟ್ಟರು. == ಜೀವನ == ಝಾನ್ಸಿ ಬಳಿಯ ಭೋಜ್ಲಾ ಗ್ರಾಮದಲ್ಲಿ, ೨೨ ನವೆಂಬರ್ ೧೮೩೦ ರಂದು ರೈತ ಸಾದೋವಾ ಸಿಂಗ್ ಮತ್ತು ಜಮುನಾದೇವಿ ದಂಪತಿಗೆ ಝಲ್ಕರಿಬಾಯಿ ಅವರು ಜನಿಸಿದರು. ಯೌವನದ ವಯಸ್ಸಿನಲ್ಲಿರುವ ಇವರ ಮೇಲೆ ಹುಲಿ ದಾಳಿ ಮಾಡಿದಾಗ ಅದನ್ನು ನಿಂತ ನೆಲದಲ್ಲಿಯೆ ಕೊಡಲಿಯಿಂದ ಕೊಂದರು ಎಂದು ಹೇಳಲಾಗುತ್ತದೆ. ಇವರು ಒಮ್ಮೆ ಕಾಡಿನಲ್ಲಿ ಚಿರತೆಯನ್ನು, ದನಗಳನ್ನು ಮೇಯಿಸಲು ಬಳಸುತ್ತಿದ್ದ ಕೋಲಿನಿಂದ ಕೊಂದಿದ್ದರು ಎಂದು ವರದಿಯಾಗಿದೆ. ಝಲ್ಕರಿಬಾಯಿಯವರು ಲಕ್ಷ್ಮೀಬಾಯಿಗೆ ಅಸಾಧಾರಣವಾದ ಹೋಲಿಕೆಯನ್ನು ಹೊಂದಿದ್ದರು. ಇದರಿಂದಾಗಿ ಅವರನ್ನು ಸೇನೆಯ ಮಹಿಳಾ ವಿಭಾಗಕ್ಕೆ ಸೇರಿಸಲಾಯಿತು. == ಸೇನಾ ಸೇವೆ == ರಾಣಿಯ ಸೈನ್ಯದಲ್ಲಿ ಇವರು ಶೀಘ್ರವಾಗಿ ಉನ್ನತ ದರ್ಜೆಯನ್ನು ಏರಿದರು. ತಮ್ಮದೇ ಆದ ಸೈನ್ಯದಲ್ಲಿ ಆಜ್ಞಾಪಿಸಲು ಪ್ರಾರಂಭಿಸಿದರು. ೧೮೫೭ ರ ದಂಗೆಯ ಸಮಯದಲ್ಲಿ, ಜನರಲ್ ಹಗ್ ರೋಸ್ ದೊಡ್ಡ ಸೈನ್ಯದೊಂದಿಗೆ ಝಾನ್ಸಿಯ ಮೇಲೆ ದಾಳಿ ಮಾಡಿದರು. ರಾಣಿಯು ತನ್ನ ೧೪,೦೦೦ ಸೈನಿಕರೊಂದಿಗೆ ಸೈನ್ಯವನ್ನು ಎದುರಿಸಿದಳು. ತಾತ್ಯಾ ಟೋಪೆಯನ್ನು ಈಗಾಗಲೇ ಜನರಲ್ ರೋಸ್ ಸೋಲಿಸಿದ್ದರಿಂದ ಕಲ್ಪಿಯಲ್ಲಿ ಪೇಶ್ವೆ ನಾನಾ ಸಾಹಿಬ್‌ನ ಸೈನ್ಯ ಶಿಬಿರದಿಂದ ಪರಿಹಾರಕ್ಕಾಗಿ ಅವಳು ಕಾಯುತ್ತಿದ್ದಳು. ಈ ನಡುವೆ ಕೋಟೆಯ ಒಂದು ದ್ವಾರದ ಉಸ್ತುವಾರಿ ತೆಗೆದುಕೊಂಡಿದ್ದ ಠಾಕೂರ್ ಸಮುದಾಯದ ದುಲ್ಹಾಜಿ, ದಾಳಿಕೋರರೊಂದಿಗೆ ಒಪ್ಪಂದ ಮಾಡಿಕೊಂಡು ಬ್ರಿಟಿಷ್ ಪಡೆಗಳಿಗೆ ಝಾನ್ಸಿಯ ಬಾಗಿಲುಗಳನ್ನು ತೆರೆದನು. ಬ್ರಿಟಿಷರು ಕೋಟೆಯನ್ನು ಧಾವಿಸಿದಾಗ, ಲಕ್ಷ್ಮಿಬಾಯಿ ತನ್ನ ಆಸ್ಥಾನದ ಸಲಹೆಯ ಮೇರೆಗೆ ತನ್ನ ಮಗ ಮತ್ತು ಪರಿಚಾರಕರೊಂದಿಗೆ ಕಲ್ಪಿಗೆ ಭಂಡೇರಿ ದ್ವಾರದ ಮೂಲಕ ತಪ್ಪಿಸಿಕೊಂಡಳು. ಲಕ್ಷ್ಮೀಬಾಯಿಯ ಪಲಾಯನವನ್ನು ಕೇಳಿದ ಝಲ್ಕರಿಬಾಯಿಯವರು ಜನರಲ್ ರೋಸ್ ನ ಶಿಬಿರಕ್ಕೆ ಮಾರುವೇಷದಲ್ಲಿ ಹೊರಟು ತಮ್ಮನ್ನು ತಾವು ರಾಣಿ ಎಂದು ಘೋಷಿಸಿಕೊಂಡರು. ಇದು ಇಡೀ ದಿನ ಗೊಂದಲಕ್ಕೆ ಕಾರಣವಾಯಿತು ಮತ್ತು ರಾಣಿಯ ಸೈನ್ಯಕ್ಕೆ ಹೊಸ ಪ್ರಯೋಜನವನ್ನು ನೀಡಿತು. ಇದರ ಜೊತೆಗೆ ಇವರು ರಾಣಿಯ ನಿಕಟ ವಿಶ್ವಾಸಿ ಮತ್ತು ಸಲಹೆಗಾರರಾಗಿದ್ದರು. ಲಕ್ಷ್ಮಿಬಾಯಿಯೊಂದಿಗೆ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದರು. == ಪರಂಪರೆ == ವಿವಿಧ ಕೋಲಿ/ಕೋರಿ ಸಂಘಟನೆಗಳಿಂದ ಝಲ್ಕರಿಬಾಯಿಯವರ ಮರಣ ವಾರ್ಷಿಕೋತ್ಸವವನ್ನು ಶಾಹಿದ್ ದಿವಸ್ (ಹುತಾತ್ಮರ ದಿನ) ಎಂದು ಆಚರಿಸಲಾಗುತ್ತದೆ. ಬುಂದೇಲ್‌ಖಂಡವನ್ನು ಪ್ರತ್ಯೇಕ ರಾಜ್ಯವಾಗಿ ಸ್ಥಾಪಿಸುವ ಚಳವಳಿಯು ಬುಂದೇಲಿ ಗುರುತನ್ನು ರಚಿಸಲು ಝಲ್ಕರಿಬಾಯಿಯ ದಂತಕಥೆಯನ್ನು ಬಳಸಿದೆ. ಭಾರತ ಸರ್ಕಾರದ ಅಂಚೆ ಮತ್ತು ಟೆಲಿಗ್ರಾಫ್ ಇಲಾಖೆಯು ಝಲ್ಕರಿಬಾಯಿಯನ್ನು ಚಿತ್ರಿಸಿದ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ. ಭಾರತೀಯ ಪುರಾತತ್ವ ಇಲಾಖೆಯು ಪಂಚ ಮಹಲ್‌ನಲ್ಲಿ ವಸ್ತುಸಂಗ್ರಹಾಲಯವನ್ನು ಸ್ಥಾಪಿಸುತ್ತಿದೆ. ಇದು ಝಾನ್ಸಿ ಕೋಟೆಯೊಳಗೆ ಐದು ಅಂತಸ್ತಿನ ಕಟ್ಟಡವನ್ನು ಝಲ್ಕರಿಬಾಯಿಯ ಸ್ಮರಣಾರ್ಥವಾಗಿ ಸ್ಥಾಪಿಸುತ್ತಿದೆ. ಝಲ್ಕರಿಬಾಯಿ ಅವರ ಕಾದಂಬರಿಯಲ್ಲಿ ಉಪಕಥೆಯನ್ನು ರಚಿಸಿದ ಬಿಎಲ್ ವರ್ಮಾ ಅವರು ೧೯೫೧ ರಲ್ಲಿ ಬರೆದ ಝಾನ್ಸಿ ಕಿ ರಾಣಿ ಕಾದಂಬರಿಯಲ್ಲಿ ಇವರನ್ನು ಉಲ್ಲೇಖಿಸಲಾಗಿದೆ. ಅವರು ಝಲ್ಕರಿಬಾಯಿಯನ್ನು ಕೋರಿನ್ ಮತ್ತು ಲಕ್ಷ್ಮೀಬಾಯಿಯ ಸೈನ್ಯದಲ್ಲಿ ಅಸಾಧಾರಣ ಸೈನಿಕಳು ಎಂದು ಸಂಬೋಧಿಸಿದರು. ಅದೇ ವರ್ಷದಲ್ಲಿ ಪ್ರಕಟವಾದ ರಾಮಚಂದ್ರ ಹೆರಾನ್ ಬುಂದೇಲಿ ಕಾದಂಬರಿ ಮಾತಿ, ಇವರನ್ನು "ಶೌರ್ಯ ಮತ್ತು ವೀರ ಹುತಾತ್ಮ" ಎಂದು ಚಿತ್ರಿಸಿದೆ. ಝಾನ್ಸಿಯ ಆಸುಪಾಸಿನಲ್ಲಿ ವಾಸಿಸುವ ಕೋರಿ ಸಮುದಾಯಗಳ ಮೌಖಿಕ ನಿರೂಪಣೆಗಳಿಂದ ವರ್ಮಾ ಅವರ ಕಾದಂಬರಿ ಮತ್ತು ಅವರ ಸಂಶೋಧನೆಯ ಸಹಾಯದಿಂದ ಭವಾನಿ ಶಂಕರ್ ವಿಶಾರದ್ ಅವರು ೧೯೬೪ ರಲ್ಲಿ ಝಲ್ಕರಿಬಾಯಿಯ ಮೊದಲ ಜೀವನಚರಿತ್ರೆಯನ್ನು ಬರೆದರು. ಝಲ್ಕರಿಬಾಯಿಯ ಕಥೆಯನ್ನು ಹೇಳುವ ಲೇಖಕರು ಇವಳನ್ನು ಲಕ್ಷ್ಮೀಬಾಯಿಯ ಸಮಾನ ಸ್ಥಾನದಲ್ಲಿ ಇರಿಸಲು ಪ್ರಯತ್ನಗಳು ನಡೆದಿವೆ. ೧೯೯೦ ರ ದಶಕದಿಂದ, ಝಲ್ಕರಿಬಾಯಿಯ ಕಥೆಯು ಕೋಲಿ ಹೆಣ್ತನದ ಉಗ್ರ ಸ್ವರೂಪವನ್ನು ರೂಪಿಸಲು ಪ್ರಾರಂಭಿಸಿತು. ಇದು ರಾಜಕೀಯ ಆಯಾಮವನ್ನು ಪಡೆದುಕೊಂಡಿದೆ ಮತ್ತು ಸಾಮಾಜಿಕ ಪರಿಸ್ಥಿತಿಯ ಬೇಡಿಕೆಗಳೊಂದಿಗೆ ಅವರ ಚಿತ್ರಣವನ್ನು ಪುನರ್ ನಿರ್ಮಿಸಲಾಗುತ್ತಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ೧೦ ನವೆಂಬರ್ ೨೦೧೭ ರಂದು ಭೋಪಾಲ್‌ನ ಗುರು ತೇಜ್ ಬಹದ್ದೂರ್ ಕಾಂಪ್ಲೆಕ್ಸ್‌ನಲ್ಲಿ ಝಲ್ಕರಿಬಾಯಿಯ ಪ್ರತಿಮೆಯನ್ನು ಅನಾವರಣಗೊಳಿಸಿದರು. === ಸಿನಿಮಾ ಚಿತ್ರಣ === ಮಣಿಕರ್ಣಿಕಾ (೨೦೧೯), ಅಂಕಿತಾ ಲೋಖಂಡೆ ಝಲ್ಕರಿಬಾಯಿಯ ಪಾತ್ರದಲ್ಲಿ ನಟಿಸಿರುವ ಹಿಂದಿ ಚಲನಚಿತ್ರವಾಗಿದೆ. ಬ್ರಿಟೀಷ್ ಅವಧಿಯ ನಾಟಕ ದಿ ವಾರಿಯರ್ ಕ್ವೀನ್ ಆಫ್ ಜಾನ್ಸಿ (೨೦೧೯) ನಲ್ಲಿ ಝಲ್ಕರಿಬಾಯಿ ಪಾತ್ರವನ್ನು ಔರೋಶಿಖಾ ಡೇ ನಿರ್ವಹಿಸಿದ್ದಾರೆ. == ಸಹ ನೋಡಿ == == ಉಲ್ಲೇಖಗಳು == == ಮೂಲಗಳು == , (1999). : , 1757–1961. . . . 978-81-87100-16-4. (2006). : , . . 978-0-7619-3537-7. , ; , (2001). , . . 978-81-87100-54-6. , (2004). ' : planète à ' : maîtriser ( ಫ್ರೆಂಚ್). . 978-2-84377-094-4. , (1989). . . 0-19-561322-8. , ; , ; , (1990). . . 0-333-90298-. , (2009). ( ಹಿಂದಿ). . 978-81-263-1734-9. " " ( , , ) (2010)