ಝಳಕಿ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿದೆ. ಝಳಕಿ ಗ್ರಾಮವು ವಿಜಯಪುರ - ಸೋಲ್ಲಾಪೂರ ರಾಷ್ಟ್ರೀಯ ಹೆದ್ದಾರಿ - ೧೩ ರಲ್ಲಿದೆ. ತಾಲ್ಲೂಕು ಕೇಂದ್ರ ಇಂಡಿಯಿಂದ ೨೦ ಕಿ.ಮೀ. ದೂರ, ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು ೫೦ ಕಿ. ಮಿ. ದೂರ, ಚಡಚಣದಿಂದ ೨೦ ಕಿ.ಮೀ. ದೂರ ಅದರಂತೆ ಹಿಂದೂ ಧಾರ್ಮಿಕ ಕೇಂದ್ರವಾದ ಪಂಢರಪುರದಿಂದ ೭೦ ಕಿ.ಮೀ. ದೂರದಲ್ಲಿದೆ. == ಭೌಗೋಳಿಕ == ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦" ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ. == ಹವಾಮಾನ == ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ. ಬೇಸಿಗೆಕಾಲ - ೩೫°-೪೨° ಡಿಗ್ರಿ ಸೆಲ್ಸಿಯಸ್ ಚಳಿಗಾಲ ಮತ್ತು ಮಳೆಗಾಲ - ೧೮°-೨೮° ಡಿಗ್ರಿ ಸೆಲ್ಸಿಯಸ್. ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ. ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ. == ಜನಸಂಖ್ಯೆ == ಗ್ರಾಮದಲ್ಲಿ ಜನಸಂಖ್ಯೆ(2011) ಸುಮಾರು 2686 ಇದೆ. ಅದರಲ್ಲಿ 1370 ಪುರುಷರು ಮತ್ತು 1316 ಮಹಿಳೆಯರು ಇದ್ದಾರೆ. == ಸಾಂಸ್ಕೃತಿಕ == ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ. == ಕಲೆ ಮತ್ತು ಸಂಸ್ಕೃತಿ == ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ. == ಧರ್ಮ == ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ. == ಭಾಷೆ == ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ ಹಾಗೂ ಮರಾಠಿ ಭಾಷೆಗಳನ್ನು ಮಾತನಾಡುತ್ತಾರೆ. == ದೇವಾಲಯ == ಶ್ರೀ ಮಹಾಲಕ್ಷ್ಮಿ ದೇವಾಲಯ ಶ್ರೀ ದುರ್ಗಾದೇವಿ ದೇವಾಲಯ ಶ್ರೀ ಮಲ್ಲಿಕಾರ್ಜುನ ದೇವಾಲಯ ಶ್ರೀ ಬಸವೇಶ್ವರ ದೇವಾಲಯ ಶ್ರೀ ವೆಂಕಟೇಶ್ವರ ದೇವಾಲಯ ಶ್ರೀ ಪಾಂಡುರಂಗ ದೇವಾಲಯ ಶ್ರೀ ಹಣಮಂತ ದೇವಾಲಯ ಶ್ರೀ ಭೀರಲಿಂಗೆಶ್ವರ ದೇವಾಲಯ == ಮಸೀದಿ == ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ. == ನೀರಾವರಿ == ಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ. == ಕೃಷಿ ಮತ್ತು ತೋಟಗಾರಿಕೆ == ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ. == ಆರ್ಥಿಕತೆ == ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ. == ಉದ್ಯೋಗ == ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪಕಸುಬುಗಳಾಗಿವೆ. == ಬೆಳೆ == ಆಹಾರ ಬೆಳೆಗಳು ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ, ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ ವಾಣಿಜ್ಯ ಬೆಳೆಗಳು ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ(ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ. ತರಕಾರಿ ಬೆಳೆಗಳು ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ. == ಸಸ್ಯ == ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ. == ಪ್ರಾಣಿ == ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ ಹಾಗೂ ಕೋಗಿಲೆ ಇತ್ಯಾದಿ. == ಹಬ್ಬ == ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ. == ಶಿಕ್ಷಣ == ಬ್ರಿಲಿಯಂಟ್ ಕಿರಿಯ ಪ್ರಾಥಮಿಕ ಶಾಲೆ, ಝಳಕಿ ಹಾವ ಮಲ್ಲಿನಾಥ ಕಿರಿಯ ಪ್ರಾಥಮಿಕ ಶಾಲೆ, ಝಳಕಿ ಪ್ರಾರ್ಥನಾ ಕಿರಿಯ ಪ್ರಾಥಮಿಕ ಶಾಲೆ, ಝಳಕಿ ಶ್ರೀ ಗುರು ಚಂದ್ರಶೇಖರ ಕಿರಿಯ ಪ್ರಾಥಮಿಕ ಶಾಲೆ, ಝಳಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಝಳಕಿ ಸರಕಾರಿ ಪ್ರೌಢ ಶಾಲೆ, ಝಳಕಿ ಸರಕಾರಿ ಪದವಿಪೂರ್ವ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಝಳಕಿ ಬಸವ ಪದವಿಪೂರ್ವ ಮಹಾವಿದ್ಯಾಲಯ, ಝಳಕಿ ಡಾ. ಸಿಂಪಿ ಲಿಂಗಣ್ಣ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ, ಝಳಕಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಝಳಕಿ ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ಝಳಕಿ. ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ಝಳಕಿಯ ಅಂತರಜಾಲ ತಾಣ 2018-07-04 ವೇಬ್ಯಾಕ್ ಮೆಷಿನ್ ನಲ್ಲಿ. ಬಸವ ತಾಂತ್ರಿಕ ಮಹಾವಿದ್ಯಾಲಯ, ಝಳಕಿ. == ಆರೋಗ್ಯ == ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. == ಆರಕ್ಷಕ (ಪೋಲಿಸ್) ಠಾಣೆ == ಗ್ರಾಮದ ಪೋಲಿಸ್ ಠಾಣೆಯು ಸುತ್ತಲಿನ ಸುಮಾರು ೩೦ಕ್ಕೂ ಹೆಚ್ಚು ಹಳ್ಳಿಗಳ ವಾಪ್ತಿ ಹೊಂದಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿಯಲ್ಲಿದ್ದು ಆರ್.ಟಿ.ಓ. ಚೆಕ್ ಪೊಸ್ಟ ಹೊಂದಿದೆ. == ಸಾಕ್ಷರತೆ == ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ. == ರಾಜಕೀಯ == ಗ್ರಾಮವು ವಿಜಯಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. == ಸಾರಿಗೆ ಕಚೇರಿ == ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಝಳಕಿ. == ಮಳೆ ಮಾಪನ ಕೇಂದ್ರ == ಮಳೆ ಮಾಪನ ಕೇಂದ್ರ, ಝಳಕಿ == ಬ್ಯಾಂಕ್ == ಡಿ.ಸಿ.ಸಿ.ಬ್ಯಾಂಕ, ಝಳಕಿ == ಗ್ರಾಮ ಪಂಚಾಯತಿ == ಗ್ರಾಮ ಪಂಚಾಯತಿ ಕಾರ್ಯಾಲಯ, ಝಳಕಿ == ದೂರವಾಣಿ ವಿನಿಮಯ ಕೇಂದ್ರ == ದೂರವಾಣಿ ವಿನಿಮಯ ಕೇಂದ್ರ, ಝಳಕಿ == ಅಂಚೆ ಕಚೇರಿ == ಅಂಚೆ ಕಚೇರಿ, ಝಳಕಿ == ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ == ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಝಳಕಿ == ಹಾಲು ಉತ್ಪಾದಕ ಸಹಕಾರಿ ಸಂಘ == ಹಾಲು ಉತ್ಪಾದಕ ಸಹಕಾರಿ ಸಂಘ, ಝಳಕಿ == ಪಶು ಚಿಕಿತ್ಸಾಲಯ == ಪಶು ಚಿಕಿತ್ಸಾಲಯ, ಝಳಕಿ == ವಿದ್ಯುತ್ ಪರಿವರ್ತನಾ ಕೇಂದ್ರ == 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಝಳಕಿ == ಹೆದ್ದಾರಿಗಳು == ರಾಷ್ಟ್ರೀಯ ಹೆದ್ದಾರಿ - 13 => ಸೋಲಾಪುರ - ವಿಜಯಪುರ - ಇಲಕಲ್ಲ - ಹೊಸಪೇಟೆ - ಚಿತ್ರದುರ್ಗ - ಶಿವಮೊಗ್ಗ - ಮಂಗಳೂರ. ರಾಜ್ಯ ಹೆದ್ದಾರಿ - 41 => ಶಿರಾಡೋಣ - ಚಡಚಣ - ಝಳಕಿ - ಇಂಡಿ - ದೇವರ ಹಿಪ್ಪರಗಿ - ಹೂವಿನ ಹಿಪ್ಪರಗಿ - ಮುದ್ದೇಬಿಹಾಳ - ನಾರಾಯಣಪುರ - ಲಿಂಗಸಗೂರ. == ಸರಕಾರಿ ವಾಹನ ನಿಲ್ದಾಣ == ಸರಕಾರಿ ವಾಹನ ನಿಲ್ದಾಣ, ಝಳಕಿ ಬಿಜಾಪುರ ಕರ್ನಾಟಕ