ಟಂಗ್ಸ್ಟನ್ (ಅಥವಾ ವುಲ್ಫ್ರಾಮ್) ಒಂದು ಸಂಕ್ರಮಣ ಲೋಹ ಮೂಲಧಾತು. ಅತಿ ಗಡುಸಾದ, ಭಾರವಾದ ಇದು ಮಿಶ್ರಲೋಹಗಳನ್ನು ಹೊರತುಪಡಿಸಿದಾಗ ಅತ್ಯಂತ ಹೆಚ್ಚು ಕರಗುವ ತಾಪಮಾನವನ್ನು ಹೊಂದಿರುವ ಲೋಹ. ಈ ಕರಗುವ ತಾಪಮಾನ ೩,೪೨೨ ° ಆಗಿದ್ದು, ಮೂಲಧಾತುಗಳಲ್ಲಿ ಇಂಗಾಲದ ನಂತರದ ಅತಿ ಹಚ್ಚಿನದಾಗಿದೆ. ಇದರ ಪ್ರಮುಖ ಉಪಯೋಗಗಳು ವಿದ್ಯುದೀಪಗಳ ವಿದ್ಯುದ್ವಾಹಕದಲ್ಲಿ, ಕ್ಷ-ಕಿರಣ ಯಂತ್ರದಲ್ಲಿ ಮತ್ತು ಅತ್ಯಂತ ಗಡುಸಾದ ಮಿಶ್ರಲೋಹಗಳ ತಯಾರಿಕೆಯಲ್ಲಿ. ಇದರ ಹೆಸರು ಸ್ವೀಡಿಷ್ ಭಾಷೆಯಲ್ಲಿ "ಭಾರವಾದ ಕಲ್ಲು" ಎಂಬುದರಿಂದ ಬಂದಿದೆ. ಇದನ್ನು ೧೭೮೩ರಲ್ಲಿ ಸ್ಪೇನ್ನ ಎಲ್ಹುಯಾರ್ ಸಹೋದರರು ಮೊದಲು ಪ್ರತ್ಯೇಕಿಸಿದರು.