ಟಿ.ಎಮ್.ಸೌಂದರ್‍ರಾಜನ್ (೨೪ ಮಾರ್ಚ್ ೧೯೨೨ -೨೫ ಮೇ ೨೦೧೩),ತಮಿಳು ಚಿತ್ರರಂಗದ ಜನಪ್ರಿಯ ಹಿನ್ನೆಲೆಗಾಯಕ.ತಮಿಳು ಚಿತ್ರರಂಗದಲ್ಲಿ ಸುಮಾರು ೬ ದಶಕಗಳ ಕಾಲ ಹಿನ್ನೆಲೆಗಾಯಕರಾಗಿದ್ದು, ದಕ್ಷಿಣ ಭಾರತದ ಬಹುತೇಕ ಎಲ್ಲಾ ಜನಪ್ರಿಯ ನಾಯಕ ನಟರಿಗೂ ಹಿನ್ನೆಲೆ ಗಾಯನ ಮಾಡಿದ್ದಾರೆ.ಸುಮಾರು ೫೦೦೦ ಚಿತ್ರಗಳಲ್ಲಿ ೨೦,೦೦೦ ಕ್ಕಿಂತಲೂ ಹೆಚ್ಚಿನ ಹಾಡುಗಳನ್ನು ಹಾಡಿದ್ದಾರೆ. ಇದಲ್ಲದೆ ಸುಮಾರು ೩೦೦೦ ಭಕ್ತಿಗೀತೆಗಳನ್ನೂ ಹಾಡಿದ್ದಾರೆ. ೧೯೪೫ರಿಂದಲೂ ಶಾಸ್ತ್ರೀಯ ಸಂಗೀತ ಕಛೇರಿಗಳನ್ನು ನೀಡುತ್ತಿದ್ದ ಇವರು ಸುಮಾರು ೧೧ ಭಾಷೆಗಳನ್ನು ಹಾಡಿದ್ದಾರೆ.೧೯೫೫ ರಿಂದ ೧೯೮೫ರ ವರೇಗೆ ಚಿತ್ರರಂಗದಲ್ಲಿ ಸಕ್ತ್ರಿಯರಾಗಿದ್ದ ಇವರು,೨೫ ಮೇ,೨೦೧೩ ರಂದು ತಮ್ಮ ೯೧ನೆಯ ವಯಸ್ಸಿನಲ್ಲಿ ನಿಧನಹೊಂದಿದರು. == ಉಲ್ಲೇಖಗಳು ==