ಟಿ.ಜಿ.ಮುಡೂರು ಎಂದೆ ಹೆಸರು ಪಡೆದಿರುವ ಇವರು ಕರಾವಳಿಯ ಹಿರಿಯ ಬರಹಗಾರರಲ್ಲಿ ಒಬ್ಬರು. ಇವರ ಪೂರ್ಣ ಹೆಸರು ತಮ್ಮಯ್ಯ ಗೌಡ ಮುಡೂರು == ಹುಟ್ಟು == ಕಾಸರಗೋಡು ಜಿಲ್ಲೆಯ ಅಡೂರು ಸಮೀಪ ಇರುವ ಮುಡೂರು ಎಂಬಲ್ಲಿ ೨೪-೧೧-೧೯೨೭ ರಲ್ಲಿ ಸುಬ್ಬಪ್ಪ ಗೌಡ ಮತ್ತು ಬಾಲಕ್ಕ ದಂಪತಿಗಳ ನಾಲ್ಕನೇ ಮಗನಾಗಿ ಜನಿಸಿದರು. == ವೃತ್ತಿ == ೧೯೪೬ರಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ನೇಮಕವಾದರು. ಕಲ್ಮಡ್ಕ,ಸುಬ್ರಹ್ಮಣ್ಯ, ಅಜ್ಜಾವರ , ಪ್ರೌಢಶಾಲಾ ಶಿಕ್ಷಕರಾಗಿ ಬೆಳ್ತಂಗಡಿ, ಪೂಂಜಾಲಕಟ್ಟೆ, ಪಂಜ ಪದವಿ ಪೂರ್ವ ವಿದ್ಯಾಲಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. == ಕೃತಿಗಳು == === ಕವನ ಸಂಕಲನಗಳು === ಕಾಡ ಮಲ್ಲಿಗೆ ಹೊಸತು ಕಟ್ಟು. ಕುಡಿಮಿಂಚು ಪ್ರಗತಿಗೆ ಕರೆ ಬೆಳ್ಳಿಬೆಳಕು === ಕಾದಂಬರಿ === ಅಬ್ಬಿಯ ಮಡಿಲು ಕಣ್ ಕನಸು ತೆರೆದಾಗ === ಗದ್ಯಾನುವಾದ === ಜೀವದಯಾಷ್ಟಮಿ === ಲೇಖನ === ಧಾರಾ ಪಯಸ್ವಿನಿ === ಜಾನಪದ ರೂಪಕ === ಹೊಸಕೆರೆಯ ಹೊನ್ನಮ್ಮ === ನಾಟಕ === ಶಿವಕುಮಾರಿ ಕೇರಳಕುಮಾರಿ ಸಖು ಅಚ್ಚರಿಯ ಅರಳೆಯ ಮಧ್ಯಮಾ ಇನ್ಸೂರಳಿಯ ==== ತುಳು ನಾಟಕ ==== ಜೋಕುಳೆ ಬುದ್ಧಿ. ==== ಬಾನುಲಿ ರೂಪಕ ==== ಹುತ್ತದಲ್ಲಿ ಹೂ ದಯೆಯ ದಾಂಗುಡಿ ಅಮರ ಕಲ್ಯಾಣ ಕ್ರಾಂತಿ ==== ಛಂದೊ ನಾಟಕ ==== ಮಕುಡೋರು ಭಂಗ ಸಾವೋಲಿದ ಸಾವಿತ್ರಿ ==== ಗೀತಾ ರೂಪಕ ==== ಗುರುವನಗುಡಿ ಸೊನ್ನೆಯಿಂದ ಸೊನ್ನೆಗೆ ಹೃದಯ ರೂಪಕ === ಖಂಡ ಕಾವ್ಯ === ಸಿಡಿಲಮರಿ ಅಶ್ವಥಾಮನ್ ಮೋಹನ ಮುರಲಿ === ಯಕ್ಷಗಾನ === ಪ್ರಥಮ ಸ್ವಾತಂತ್ರ್ಯ ಸಮರ ==== ತುಳು ಯಕ್ಷಗಾನ ಕೃತಿ ==== ಕೊಟಿ ಚೆನ್ನಯ್ಯ === ಸಂಪಾದಿತ ಕೃತಿ === ಸ್ಪಂದನ ಸ್ವರ್ಣಶಾರದೆ ರಜತ ರಶ್ಮಿ ಅಮೃತವಾಹಿನಿ === ಅರೆಗನ್ನಡ ಕೃತಿ === ಬೊಲ್ಪಾಕನ ಮುಕ್ತ್ === ಹವಿಗನ್ನಡ ಕೃತಿ === ಒಪ್ಪಕುಂಞಿ == ನಿರ್ವಹಿಸಿದ ಹುದ್ದೆಗಳು == ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅದ್ಯಕ್ಷ. ಅರಂತೋಡುವಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ == ಪ್ರಶಸ್ತಿ == ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ. ಅರೆಭಾಷೆ ಅಕಾಡೆಮಿ ಪ್ರಶಸ್ತಿ. == ಉಲ್ಲೇಖ ==