ಟುನೀಶಿಯ (تونس ಟುನಿಸ್), ಅಧಿಕೃತವಾಗಿ ಟುನೀಶಿಯ ಗಣರಾಜ್ಯ (الجمهورية التونسية), ಉತ್ತರ ಆಫ್ರಿಕಾದಲ್ಲಿ ಮೆಡಿಟರೇನಿಯ ಸಮುದ್ರದ ತಟದಲ್ಲಿರುವ ಒಂದು ದೇಶ. ಇದರ ಪಶ್ಚಿಮಕ್ಕೆ ಅಲ್ಜೀರಿಯ ಮತ್ತು ಆಗ್ನೇಯಕ್ಕೆ ಲಿಬ್ಯಾ ದೇಶಗಳಿವೆ. ಈ ದೇಶದ ಸುಮಾರು ೪೦% ಸಹಾರ ಮರುಭೂಮಿಗೆ ಸೇರಿದೆ. ಇತಿಹಾಸದಲ್ಲಿ ಈ ಪ್ರದೇಶ ಫೊನೀಶಿಯದ ಕಾರ್ಥೇಜ್ ನಗರವನ್ನು ಹೊಂದಿತ್ತು.