ಟೆಲ್ಲುರಿಯಮ್ ಒಂದು ಲೋಹಾಭ ಮೂಲಧಾತು. ಇದು ಸುಲಭವಾಗಿ ಒಡೆಯುವ, ಬೆಳ್ಳಗಿನ ಧಾತು. ಇದನ್ನು ಪ್ರಮುಖವಾಗಿ ಅರೆವಿದ್ಯುದ್ವಾಹಕಗಳಲ್ಲಿ ಬಳಸಲಾಗುತ್ತದೆ. ಮಿಶ್ರಲೋಹಗಳ ತಯಾರಿಕೆ ಇದರ ಇನ್ನೊಂದು ಉಪಯೋಗ. ಇದನ್ನು ಹಂಗೆರಿಯ ಫ್ರಾನ್ಜ್-ಜೊಸೆಫ್ ಮ್ಯುಲರ್ ವಾನ್ ರೈಕೆನ್‍ಸ್ಟೈನ್ ಎಂಬಾತ ೧೭೮೨ರಲ್ಲಿ ಪರಿಶೋಧಿಸಿದನು. ಇದರ ಹೆಸರು ಲ್ಯಾಟಿನ್ ಭಾಷೆಯಲ್ಲಿ ಭೂಮಿ ಎಂಬ ಅರ್ಥ ಕೊಡುವ "ಟೆಲ್ಲಸ್" ಪದದಿಂದ ಬಂದಿದೆ.