ಠಂಡಾಯಿ ಬಾದಾಮಿ, ಸೊಂಪು ಬೀಜಗಳು, ಕಲ್ಲಂಗಡಿ ಬೀಜ, ಗುಲಾಬಿ ಪಕಳಿಗಳು, ಕರಿಮೆಣಸು, ಲಾವಂಚದ ಬೀಜಗಳು, ಏಲಕ್ಕಿ, ಕೇಸರಿ, ಹಾಲು ಮತ್ತು ಸಕ್ಕರೆಯ ಮಿಶ್ರಣದಿಂದ ತಯಾರಿಸಲಾದ ಒಂದು ಭಾರತೀಯ ತಂಪು ಪಾನೀಯ. ಇದು ಭಾರತಕ್ಕೆ ಸ್ಥಳೀಯವಾಗಿದೆ ಮತ್ತು ಹಲವುವೇಳೆ ಮಹಾ ಶಿವರಾತ್ರಿ ಹಾಗೂ ಹೋಳಿ ಹಬ್ಬಗಳೊಂದಿಗೆ ಸಂಬಂಧಿಸಲ್ಪಡುತ್ತದೆ. ಈ ಠಂಡಾಯಿಯ ಗ್ರಾಹಕರು ಬಹುತೇಕವಾಗಿ ರಾಜಸ್ಥಾನ ಮತ್ತು ಉತ್ತರ ಭಾರತದವರಾಗಿದ್ದಾರೆ. ಠಂಡಾಯಿಯ ರೂಪಗಳಿವೆ ಮತ್ತು ಅತ್ಯಂತ ಸಾಮಾನ್ಯವಾದವುಗಳೆಂದರೆ ಬಾದಾಮ್ ಠಂಡಾಯಿ ಹಾಗೂ ಭಾಂಗ್ ಠಂಡಾಯಿ. ಭಾಂಗ್ ಠಂಡಾಯಿಯು ಭಾರತೀಯ ಉಪಖಂಡದ ಅನೇಕ ಭಾಗಗಳಲ್ಲಿ ಜನಪ್ರಿಯವಾಗಿರುವ ಗಾಂಜಾ ಸೇರಿಸಿದ ಪಾನೀಯ. ಇದನ್ನು ಸ್ವಲ್ಪ ಪ್ರಮಾಣದ ಭಾಂಗ್ ಅನ್ನು ಠಂಡಾಯಿಗೆ ಸೇರಿಸಿ ತಯಾರಿಸಲಾಗುತ್ತದೆ (ಕೊಬ್ಬು ತೆಗೆದಿರದ ಹಾಲನ್ನು ಬಳಸಲಾಗುತ್ತದೆ). ಹಾಲಿನ ಕೊಬ್ಬಿನಾಂಶ ಮತ್ತು ಕಡಲೇಕಾಯಿಗಳು ಕೊಬ್ಬಿನಲ್ಲಿ ಕೊಬ್ಬಿನಲ್ಲಿ ಕರಗಬಲ್ಲ ಕ್ಯಾನಬಿನಾಯ್ಡ್‌ಗಳು ಕರಗಲು ನೆರವಾಗುತ್ತವೆ. == ರೂಪಗಳು == == ಉಲ್ಲೇಖಗಳು ==