ಠೇವಣಿ ಎಂದರೆ ಯಾವುದೇ ಸಂಸ್ಥೆಯಲ್ಲಿ ಇರಿಸಲಾದ ವಿತ್ತೀಯ ಮೊತ್ತ. ಠೇವಣಿಯು ಯಾರಿಂದ ಇರಿಸಲ್ಪಟ್ಟಿರುತ್ತದೆಯೊ ಆ ಪಕ್ಷದ (ವ್ಯಕ್ತಿ ಅಥವಾ ಸಂಸ್ಥೆ) ಜಮಾ ಆಗಿರುತ್ತದೆ, ಮತ್ತು ಅದನ್ನು ಹಿಂದೆ ತೆಗೆದುಕೊಳ್ಳಬಹುದು (ವಾಪಸು ತೆಗೆದುಕೊಳ್ಳುವುದು), ಯಾವುದೋ ಇತರ ಪಕ್ಷಕ್ಕೆ ಹಸ್ತಾಂತರಿಸಬಹುದು, ಅಥವಾ ಮುಂದಿನ ದಿನಾಂಕದಲ್ಲಿ ಖರೀದಿಗೆ ಬಳಸಬಹುದು. ಈ ಹಣಕಾಸು ಪರಿಕಲ್ಪನೆಯನ್ನು ಹಲವುವೇಳೆ ಬ್ಯಾಂಕ್‍ಗಳ ಸಂಬಂಧ ಬಳಸಲಾಗುತ್ತದೆ, ಏಕೆಂದರೆ ಬ್ಯಾಂಕ್‍ಗಳಲ್ಲಿ ಠೇವಣಿಗಳು ಸಾಮಾನ್ಯವಾಗಿ ಹಣ ಬರುವ ಮುಖ್ಯ ಮೂಲವಾಗಿರುತ್ತವೆ. == ಬಗೆಗಳು == ಠೇವಣಿಗಳ ಬಗೆಗಳೆಂದರೆ: ವಹಿವಾಟು ಖಾತೆ (ದೇಶದನುಸಾರ ಚೆಕಿಂಗ್ ಖಾತೆ ಅಥವಾ ಚಾಲ್ತಿ ಖಾತೆ), ಠೇವಣಿದಾರನಿಗೆ ಹಣವನ್ನು ಯಾವುದೇ ಸಮಯದಲ್ಲಿ ಬಳಸಲು ಹಕ್ಕಿರುತ್ತದೆ, ಕೆಲವೊಮ್ಮೆ ಅಲ್ಪ ನೋಟೀಸು ಅವಧಿಗಳಿಗೆ ಒಪ್ಪಲಾಗುತ್ತದೆ; ಕಾಲ್ ಡಿಪಾಸಿಟ್ ಅಥವಾ ಸೈಟ್ ಡಿಪಾಸಿಟ್ ಎಂದೂ ಕರೆಯಲ್ಪಡುತ್ತದೆ ಸ್ಥಿರಾವಧಿಯ ಠೇವಣಿ (ಅಥವಾ ಕಾಲ ಠೇವಣಿ), ಇವು ನಿಶ್ಚಿತ ಅವಧಿ ಮತ್ತು ನಿರ್ದಿಷ್ಟ ಬಡ್ಡಿ ದರವನ್ನು ಹೊಂದಿರುತ್ತವೆ ನಿಶ್ಚಿತ ಠೇವಣಿ (ಭಾರತದಲ್ಲಿ ಫಿಕ್ಸೆಡ್ ಡಿಪಾಸಿಟ್) ಠೇವಣಿ ಪ್ರಮಾಣಪತ್ರ ಅಮೇರಿಕಾ ಮತ್ತು ಕ್ಯಾನಡಾದಲ್ಲಿ ರಾತ್ರೋರಾತ್ರಿಯ ಸಾಲ, ಸಾಮಾನ್ಯವಾಗಿ ಮಧ್ಯಾಹ್ನದಿಂದ ಮಧ್ಯಾಹ್ನದ ವರೆಗೆ ನಡೆಯುತ್ತದೆ, ಮತ್ತು ವಿಶೇಷ ದರವನ್ನು ಬಳಸುತ್ತದೆ. ಇದರ ಮುಖ್ಯ ಉದ್ದೇಶ ಭದ್ರತೆಯಾಗಿ ಒದಗಿಸುವುದು ಅಥವಾ ಭಾಗಶಃ ಪಾವತಿಯಾಗಿ ಒದಗಿಸುವುದು. == ಉಲ್ಲೇಖಗಳು ==