ಡಾ ಕ್ಟರ್ ಬರ್‌ ಮನ್ ಪದದಿಂದ ಹುಟ್ಟಿದ ಡಾಬರ್ (ದೇವನಾಗರಿ: ಡಾಬರ್) ಭಾರತದ ಬೃಹತ್ ಆಯುರ್ವೇದ ಔಷಧ ತಯಾರಿಕಾ ಕಂಪನಿಯಾಗಿದೆ. ಡಾಬರ್‌ನ ಆಯುರ್ವೈದ್ಯ ವೈಶಿಷ್ಟ್ಯತೆಗಳ ಘಟಕವು ಸಾಮಾನ್ಯ ಶೀತದಿಂದ ಹಿಡಿದು ಗಂಭೀರ ಸ್ವರೂಪದ ಪಕ್ಷವಾತ ಖಾಯಿಲೆ ಮತ್ತು ಇತರ ದೈಹಿಕ ಅಸ್ವಸ್ಥತೆಗಳ ಚಿಕಿತ್ಸೆಗಾಗಿ ಸುಮಾರು ೨೬೦ಕ್ಕೂ ಹೆಚ್ಚಿನ ಔಷಧಗಳನ್ನು ಹೊಂದಿದೆ. == ಇತಿಹಾಸ == ೧೮೮೪ರಲ್ಲಿ ವೈದ್ಯಕೀಯ ಪದವಿ ಪಡೆದು ಜನತೆಯ ಏಳಿಗೆಗಾಗಿ ದುಡಿಯುವ ಉತ್ಕಟ ಬಯಕೆಯನ್ನು ಹೊತ್ತಿದ್ದ ಓರ್ವ ತರುಣ ವೈದ್ಯನಿಂದ ಡಾಬರ್‌ನ ಕಥೆಯು ಆರಂಭಗೊಂಡಿತು. ಈ ತರುಣ, ಡಾಕ್ಟರ್. ಎಸ್.ಕೆ. ಬರ್ಮನ್ ಇಂದು ವಿಶ್ವವಿಖ್ಯಾತಿ ಪಡೆದ ಡಾಬರ್ ಇಂಡಿಯಾ ಲಿಮಿಟೆಡ್‌ ಗೆ ತಳಪಾಯ ಹಾಕಿದ್ದನು. ಬಹುಬೇಡಿಕೆಯ ಮುದ್ರೆ ಹೊಂದಿದ ಈ ಡಾಬರ್ ಕಂಪನಿಯ ಹೆಸರು ಡಾಕ್ಟರ್ ಪದದ "ಡಾ" ಮತ್ತು ಬರ್ಮನ್ ಪದದ "ಬರ್" ಎಂಬ ಎರಡು ಪದಗಳಿಂದ ಹುಟ್ಟಿಕೊಂಡಿತು. ಇಂತಹ ಸಾಮಾನ್ಯಗತಿಯಿಂದ ಆರಂಭ ಹೊಂದಿದ ಈ ಕಂಪನಿಯು ಇಂದು ಬಳಕೆದಾರರ ಆರೋಗ್ಯರಕ್ಷಣೆ, ವೈಯಕ್ತಿಕ ರಕ್ಷಣೆ ಮತ್ತು ಆಹಾರ ಪದಾರ್ಥಗಳ ಭಾರತದ ಪ್ರಧಾನ ತಯಾರಕರಾಗಿ ಬೆಳೆದಿದೆ. ಸ್ಥಾಪನೆಗೊಂಡ ೧೨೫ ವರ್ಷಗಳಲ್ಲಿ ಡಾಬರ್ ಮುದ್ರಾಂಕಿತ ಕಂಪನಿಯು ತನ್ನ ನೈಸರ್ಗಿಕ ಜೀವನವಿಧಾನದ ಬಳಕೆಯಿಂದ "ಉತ್ತಮವಾದದ್ದು" ಎಂಬ ಖ್ಯಾತಿಯನ್ನು ಹೊತ್ತಿದೆ. ಡಾಬರ್ ಎಂಬ ಒಂದೇ ಸೂರಿನಡಿ ಕೇಶರಕ್ಷಣೆಯಿಂದ ಹಿಡಿದು ಜೇನಿನವರೆಗೆ ಹತ್ತು ಹಲವು ಉತ್ಪನ್ನಗಳ ತಯಾರಿಕೆಯನ್ನು ನಡೆಸುತ್ತಿರುವ ಈ ಕಂಪನಿಯು ಭಾರತ ಉತ್ಕೃಷ್ಟ ದರ್ಜೆಯ ಮುದ್ರಾಂಕಿತ ಕಂಪನಿಗಳ ಸಾಲಿನಲ್ಲಿ ಸ್ಥಾನಪಡೆದಿದೆ. ಈ ಮುದ್ರೆಯನ್ನು ಹೊತ್ತ ಉತ್ಪನ್ನಗಳು ಯಾವುದೇ ದೈಹಿಕ ದುಷ್ಪರಿಣಾಮಗಳನ್ನು ಉಂಟುಮಾಡುವುದಿಲ್ಲ ಎಂಬ ಭದ್ರ ನಂಬಿಕೆಯನ್ನೇ ತಳಹದಿಯನ್ನಾಗಿಸಿ ತಯಾರಿಸಲ್ಪಟ್ಟಿದೆ. ಈ ಮುದ್ರಾಂಕಿತ ಕಂಪನಿಯು ಆನಂದಿಸುವ ಈ ನಂಬಿಕೆಯ ಸ್ಥಾನಮಾನಗಳು ತುಂಬಾ ಎತ್ತರದಲ್ಲಿವೆ. == ಔಷಧಿ ತಯಾರಿಕಾ ಸಂಸ್ಥೆ == ಡಾಬರ್ ಇಂಡಿಯಾ ಲಿಮಿಟೆಡ್ ನಾಲ್ಕನೆಯ ಬೃಹತ್ ಎಫ್‌ಎಮ್‌ಸಿಜಿ ಕಂಪನಿಯಾಗಿದೆ ಮತ್ತು ಅಂದಾಜು ಸುಮಾರು ೭೫೦ ಮಿಲಿಯನ್ ಅಮೇರಿಕನ್ ಡಾಲರ್‌ನಷ್ಟು (ರೂ. ೩೩೯೦.೯ ಕೋಟಿ, ಆರ್ಥಿಕ ವರ್ಷ ೦೯-೧೦) ವ್ಯವಹಾರಗಳನ್ನು ಹೊಂದಿದ್ದು ಡಾಬರ್ ಆಮ್ಲ, ಡಾಬರ್ ಚ್ಯವನಪ್ರಾಶ್, ವಾಟಿಕ, ಹಾಜ್‌ಮೋಲಾ ಮತ್ತು ರಿಯಲ್ ಮುದ್ರಾಂಕಿತ ಉತ್ಪನ್ನಗಳ ಜೊತೆಗೆ ಮಾರುಕಟ್ಟೆಯಲ್ಲಿ ಸುಮಾರು ೩.೫ ಬಿಲಿಯನ್ ಅಮೇರಿಕನ್ ಡಾಲರ್‌ನಷ್ಟು ಬಂಡವಾಳವನ್ನು ಹೊಂದಿದೆ. ಈ ಕಂಪನಿಯು ಹೊಸ ಜನಾಂಗದ ಬಳಕೆದಾರರ ಮೇಲೆಯೂ ತನ್ನ ದೃಷ್ಟಿಯನ್ನಿಟ್ಟಿದ್ದು, ಆಧುನಿಕ ಜೀವನವಿಧಾನಕ್ಕೆ ಅಗತ್ಯವಿರುವ ಉತ್ಪನ್ನಗಳನ್ನು ಹೊರತರುವುದರೊಂದಿಗೆ, ತನ್ನ ಹಳೆಯ ಬಳಕೆದಾರರರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ತನ್ನ ಗುಣಮಟ್ಟವನ್ನು ಕಾಯ್ದುಕೊಂಡಿದೆ. ಆರ್ಥಿಕ ನಿರ್ವಹಣೆಯ ದೃಷ್ಟಿಯಲ್ಲಿ ಡಾಬರ್ ಒಂದು ಬಂಡವಾಳ-ಸ್ನೇಹೀ ಮುದ್ರಾಂಕಿತ ಕಂಪನಿಯಾಗಿದೆ. ಕಂಪನಿಯ ಅಭಿವೃದ್ಧಿಯ ದರವು ಶೇಕಡಾ ೧೦ ರಿಂದ ಶೇಕಡಾ ೪೦ಕ್ಕೆ ಏರಿದೆ. ಎರಡು ವರ್ಷಗಳಲ್ಲಿ ನಿರೀಕ್ಷಿತ ಬೆಳವಣಿಗೆಯ ದರವು ದ್ವಿಗುಣವಾಗಿತ್ತು. ಬಂಡವಾಳಗಾರರಿಗೆ ಭಾರೀ ಪ್ರಮಾಣದ ಮಾಹಿತಿಯು ಲಭ್ಯವಿದ್ದು, ದೈನಂದಿನ ಶೇರು ಬೆಲೆಯೂ ಸೇರಿದಂತೆ, ಕಂಪನಿಯ ಭವಿಷ್ಯಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಗಳು (ಕೇವಲ ಕೆಲವೇ ಭಾರತೀಯ ಕಂಪನಿಗಳು ಹೊಂದಿರುವಂತಹದು) ಸಹ ಲಭ್ಯವಾಗಿವೆ. ಯಾವುದೇ ದೃಷ್ಟಿಕೋನದಲ್ಲಿ ನೋಡಿದರೂ, ಇಲ್ಲಿ ಬಂಡವಾಳದಾರರ ನಿಧಿಯ ಮೇಲೆ ಹೆಚ್ಚಿನ ಜವಾಬ್ಧಾರಿಯನ್ನೇ ಹೊಂದಿರುವುದು ಕಂಡುಬರುತ್ತದೆ. ಇದು ಡಾಬರ್ ತನ್ನ ಪ್ರತಿಯೊಂದು ಘಟಕಗಳ ಮೇಲೆ ಕೈಗೊಂಡ ಜಾಗೃತಿ ತತ್ವದ ನೇರ, ವಿಸ್ತೃತ ಯೋಜನೆಯಾಗಿದೆ ಮತ್ತು ಇದು ಈ ಬ್ರಾಂಡ್ ಮೇಲಿನ ನಂಬಿಕೆಗೆ ಭದ್ರ ತಳಹದಿಯಾಗಿದೆ. ಡಾಬರ್ ಫಾರ್ಮಾ ಲಿಮಿಟೆಡ್ ಮೂಲಕ ಡಾಬರ್ ಕಂಪನಿಯು ವಿಷಶಾಸ್ತ್ರದ ವೈಜ್ಞಾನಿಕ ಪರೀಕ್ಷೆಗಳನ್ನೂ ನಡೆಸುತ್ತದೆ ಹಾಗೂ ಆಯುರ್ವೈದ್ಯ ಔಷಧಿಗಳನ್ನು ವೈಜ್ಞಾನಿಕ ವಿಧಾನದಲ್ಲಿ ಮಾರುತ್ತದೆ. ಅಲ್ಲದೇ ಇವರು ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಬಳಕೆಗೆ ಬರುವಂತಹ ಹೊಸ ಔಷಧಿಗಳನ್ನು ಸಂಶೋಧಿಸಿ ದೇಶದಾದ್ಯಂತ ಹೊಸ ಮಾರುಕಟ್ಟೆಯನ್ನೇ ನಿರ್ಮಿಸಿದ್ದಾರೆ. ಡಾಬರ್ ಆಹಾರ ಪದಾರ್ಥಗಳು, ಡಾಬರ್ ಇಂಡಿಯಾದ ಸಹ ವಾಣಿಜ್ಯ ಸಂಸ್ಥೆಯು ಸುಮಾರು ೨೫% ದರದಲ್ಲಿ ಬೆಳವಣಿಗೆಯನ್ನು ನಿರೀಕ್ಷಿಸುತ್ತಿದೆ. ಈ ಮುದ್ರೆಯ ಉತ್ಪನ್ನಗಳಾದ ರಿಯಲ್ ಮತ್ತು ಆಕ್ಟೀವ್ ಪಾನೀಯಗಳೆರಡೂ ಹಣ್ಣಿನ ಪಾನೀಯಗಳ ವಿಭಾಗಗಳಲ್ಲಿ ಮಾರುಕಟ್ಟೆಯಲ್ಲಿ ಈ ಕಂಪನಿಯನ್ನು ಅಗ್ರ ಸ್ಥಾನ ಪಡೆಯುವಂತೆ ಮಾಡಿವೆ. == ಘಟನೆಗಳು == == ವಿಸ್ತರಣೆ ಮತ್ತು ಹೂಡಿಕೆ == ಭಾರತದ ಹೊರಗಿನ ದೇಶಗಳಲ್ಲಿನ ಸಂಪಾದನೆ ಮತ್ತು ಮೈತ್ರಿಯನ್ನು ಗಮನದಲ್ಲಿರಿಸಿಕೊಂಡು ಇದು ಮುಂದಿನ ನಾಲ್ಕು ವರ್ಷಗಳಲ್ಲಿ ವಿದೇಶೀ ವ್ಯಾಪಾರವನ್ನು ೧೧.೪% ರಿಂದ ೧೫% ರಷ್ಟು ಅಭಿವೃದ್ಧಿಗೊಳಿಸುವ ಗುರಿಯನ್ನು ಹೊತ್ತಿರುವ ಡಾಬರ್ ದೇಶ ವಿದೇಶಗಳ ಮಾರುಕಟ್ಟೆಗಳಲ್ಲೂ ತನ್ನ ವಿಸ್ತರಣಾ ಯೋಜನೆಯನ್ನು ಹಮ್ಮಿಕೊಳ್ಳುವ ಕಾರ್ಯತಂತ್ರವನ್ನು ಡಾಬರ್ ರೂಪಿಸುತ್ತಿದೆ. ಪೆಪ್ಸಿ ಯ ಟ್ರೋಪಿಕಾನ ಮತ್ತು ಇತರ ಪಾನೀಯ ತಯಾರಿಕಾ ಬ್ರಾಂಡ್‌ಗಳ ಜೊತೆ ಸ್ಪರ್ಧಿಸುತ್ತಿರುವ ಡಾಬರ್ ೧೦೦ಕೋಟಿ ರೂಪಾಯಿಗಳನ್ನು ಸಂಸ್ಕರಣೆ ಮತ್ತು ಸಂಗ್ರಹಣೆಯಲ್ಲಿ ವಿನಿಯೋಗಿಸಿಕೊಳ್ಳುತ್ತಿದೆ. ಡಾಬರ್ ಐಪಿಎಲ್ ತಂಡ ಕಿಂಗ್ಸ್ ಪಂಜಾಬ್‌ನ ಸಹ-ಮಾಲೀಕರು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಡಾಬರ್ ಇಂಡಿಯಾ ಲಿಮಿಟೆಡ್ ಅಧಿಕೃತ ವೆಬ್‌ಸೈಟ್ 2009-09-17 ವೇಬ್ಯಾಕ್ ಮೆಷಿನ್ ನಲ್ಲಿ. ಡಾಬರ್ ಇಂಡಿಯಾ ಅನ್‌ವೀಲ್ಡ್ ದ ಬ್ರ್ಯಾಂಡ್ ನೇಮ್ - ನ್ಯೂ-ಯು - ಫಾರ್ ಇಟ್ಸ್ ಎಚ್&ಬಿ ಸ್ಟೋರ್ಸ್ ಸಸ್ಟೈನೆಬಲ್ ಡೆವಲಪ್‌ಮೆಂಟ್ ಸೊಸೈಟಿ(ಸಂದೇಶ್) डाबर