ಡೊಮಿನಿಕ ಕಾಮನ್‌ವೆಲ್ತ್ ( ಸಾಮಾನ್ಯ ಹಸರು ಡೊಮಿನಿಕ ) ಕೆರಿಬ್ಬಿಯನ್ ಸಮುದ್ರದಲ್ಲಿನ ಒಂದು ದ್ವೀಪರಾಷ್ಟ್ರ. ಲ್ಯಾಟಿನ್ ಭಾಷೆಯಲ್ಲಿ ಡೊಮಿನಿಕ ಪದದ ಅರ್ಥ ಭಾನುವಾರ. ಕ್ರಿಸ್ಟೊಫರ್ ಕೊಲಂಬಸ್ ಈ ನಾಡನ್ನು ಅನ್ವೇಷಿಸಿದ ದಿನವು ಭಾನುವಾರವಾದ್ದರಿಂದ ಈ ಹೆಸರನ್ನು ಇಡಲಾಗಿದೆ. ಮೊದಲು ಫ್ರೆಂಚ್ ವಸಾಹತು ಆಗಿದ್ದ ಈ ನಾಡು ನಂತರ ಆಂಗ್ಲರ ಆಡಳಿತಕ್ಕೆ ಒಳಪಟ್ಟಿತು. ೧೯೭೮ರಲ್ಲಿ ಡೊಮಿನಿಕ ಸ್ವತಂತ್ರ ರಾಷ್ಟ್ರವಾಯಿತು.