== ಪೀಠಿಕೆ == ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ,ಅವರಿಗೆ ಕೆಲಸಗಳನ್ನು ವಹಿಸಿದ ನಂತರ ಅವರ ತರಬೇತಿ ಮತ್ತು ಅಭಿವೃದ್ಧಿಗೆ ಏರ್ಪಾಟು ಮಾಡುವುದು ಸಂಸ್ಥೆಯ ಜವಾಬ್ದಾರಿಯಾಗಿದೆ.ಒಟ್ಟಿನಲ್ಲಿ ಹೇಳುವುದಾದರೆ,ತರಬೇತಿಯು,ನೌಕರನ ಜ್ಞಾನ,ಸಾಮರ್ಥ್ಯ,ಕೌಶಲ್ಯತೆ,ವ್ಯಕ್ತಿತ್ವ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುವ ಸಂಘಟಿತ ಕಾರ್ಯಕ್ರಮವಾಗಿರುತ್ತದೆ. == ಅರ್ಥ == ಒಂದು ನಿರ್ದಿಷ್ಟ ಕೆಲಸವನ್ನು ಮಾಡಲು,ಒಬ್ಬ ನೌಕರನ ಜ್ಞಾನ ಮತ್ತು ಕೌಶಲ್ಯತೆಯನ್ನು ಹೆಚ್ಚಿಸುವ ಒಂದು ಕ್ರಯೆ ತರಬೇತಿ. == ವ್ಯಾಖ್ಯೆ == ಡೇಲ್ ಎಸ್.ಬೀಚ್ರವರ ಮಾತಿನಲ್ಲಿ,"ತರಬೇತಿಯು ಒಂದು ಸಂಘಟಿತ ಕಾರ್ಯಕ್ರಮವಾಗಿದ್ದು ಜನರ ಜ್ಞಾನ ಹಾಗೂ ಕೌಶಲ್ಯತೆಯನ್ನು,ನಿರ್ದಿಷ್ಟ ಉದ್ದೇಶಗಳಿಗಾಗಿ ವೃದ್ಧಿಸುವ ಪ್ರಕ್ರಿಯೆಯಾಗಿದೆ." == ತರಬೇತಿಯ ವಿಧಾನಗಳು ಮತ್ತು ವಿವರಗಳು == === ೧. ಕಾರ್ಯನಿರತ ತರಬೇತಿ === ಸಹಾಯಕನಾಗಿ ಕಲಿಯುವುದು ಪ್ರತ್ಯೇಕ/ವ್ಯಕ್ತಿಗತ ಶಿಕ್ಷಣ ನಿರ್ಬಂಧ ತರಬೇತಿ ಕಾರ್ಯ ಆವರ್ತನ/ಕಾರ್ಯ ಬದಲಾವಣೆ === ೨. ಕಾರ್ಯೇತರ ತರಬೇತಿ === ವಿಶೇಷ ತರಗತಿಗಳು ಹಾಗೂ ಉಪನ್ಯಾಸಗಳು ವಿದ್ಯಮಾನಗಳ ಅಧ್ಯಯನ/ಪ್ರಕರಣ ಅಧ್ಯಯನ ಮಾದರಿ ಮೂಲಕ ತರಬೇತಿ ಕಂಪ್ಯೂಟರ್ ಮಾದರಿ ಮೂಲಕ ತರಬೇತಿ