ತರುವಾ ತೆಳುವಾಗಿ ಕತ್ತರಿಸಿದ ತರಕಾರಿಗಳನ್ನು ಅಕ್ಕಿ ಹಿಟ್ಟಿನಿಂದ ಲೇಪಿಸಿ ಎಣ್ಣೆಯಲ್ಲಿ ಕರಿದು ತಯಾರಿಸುವ ಭಕ್ಷ್ಯವಾಗಿದೆ. ಇದು ದಕ್ಷಿಣ ಏಷ್ಯಾದಲ್ಲಿ ಹುಟ್ಟಿಕೊಂಡಿತು ಮತ್ತು ಭಾರತ ಹಾಗೂ ನೇಪಾಳದ ಮೈಥಿಲರಲ್ಲಿ ಜನಪ್ರಿಯವಾಗಿದೆ. ಇದು ಮಿಥಿಲಾ ಪ್ರದೇಶದ ಜನಪ್ರಿಯ ಮತ್ತು ವಿಶೇಷ ಖಾದ್ಯವಾಗಿದೆ. ತರುವಾವನ್ನು ಬಡಿಸದೆ ಅತಿಥಿಯನ್ನು ಸ್ವಾಗತಿಸುವುದು ಅಸಾಧ್ಯವೆಂದು ನಂಬಲಾಗಿದೆ. == ತಯಾರಿಕೆ == ಹಸಿರು ತರಕಾರಿಗಳು ಮತ್ತು ತರಕಾರಿ ಎಲೆಗಳನ್ನು ವಿವಿಧ ಆಕಾರಗಳಲ್ಲಿ ಕತ್ತರಿಸಿ ತರುವಾವನ್ನು ತಯಾರಿಸಲಾಗುತ್ತದೆ. ಕಡಲೆ ಹಿಟ್ಟು ಅಥವಾ ಅಕ್ಕಿ ಹಿಟ್ಟಿನಿಂದ ತಯಾರಿಸಿದ ತೆಳು ಕಣಕದಲ್ಲಿ ಕರಿ ಮೆಣಸು, ಖಾರದ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಚೂರುಗಳನ್ನು ಮುಳುಗಿಸಿ ನಂತರ ಅವನ್ನು ಎಣ್ಣೆಯಲ್ಲಿ ಕರಿಯಲಾಗುತ್ತದೆ. == ವ್ಯತ್ಯಾಸಗಳು == ತರುವಾವನ್ನು ಯಾವುದೇ ಹಸಿರು ತರಕಾರಿಯಿಂದ ತಯಾರಿಸಬಹುದು. ತರುವಾದ ಅತ್ಯಂತ ಜನಪ್ರಿಯ ವಿಧಗಳಲ್ಲಿ ತೊಂಡೆ ಎಲೆಯ ತರುವಾ, ಮತ್ತು ಆಲೂಗಡ್ಡೆಯ ತರುವಾ ಸೇರಿವೆ. ತರುವಾದ ಇತರ ವಿಧಗಳಲ್ಲಿ ಬೆಂಡೆಕಾಯಿಯಿಂದ ತಯಾರಿಸಿದ ಭಿಂಡಿ ತರುವಾ, ಹೂಕೋಸಿನಿಂದ ತಯಾರಿಸಿದ ಗೋಬಿ ತರುವಾ, ಬದನೆಕಾಯಿಯಿಂದ ತಯಾರಿಸಿದ ಬೈಂಗನ್ ತರುವಾ, ಕುಂಬಳಕಾಯಿಯಿಂದ ತಯಾರಿಸಿದ ಕದಿಮಾ ತರುವಾ, ಸೋರೆಕಾಯಿಯಿಂದ ತಯಾರಿಸಿದ ಕದ್ದು ತರುವಾ, ಹಾಗಲಕಾಯಿಯಿಂದ ತಯಾರಿಸಿದ ಕರೇಲಾ ತರುವಾ, ಸುವರ್ಣ ಗೆಡ್ಡೆಯಿಂದ ತಯಾರಿಸಿದ ಓಳ್ ತರುವಾ, ಕೆಸುವಿನಿಂದ ತಯಾರಿಸಿದ ಔರಬಿ ತರುವಾ, ಬೂದುಗುಂಬಳದಿಂದ ತಯಾರಿಸಿದ ಕುಮಹರ್ ತರುವಾ, ಖಮ್‍ಹರುವಾ ತರುವಾ, ಮೊನಚಾದ ಸೋರೆಕಾಯಿಯಿಂದ ತಯಾರಿಸಿದ ಪರ್ವಲ್ ತರುವಾ ಸೇರಿವೆ. == ಉಲ್ಲೇಖಗಳು ==