ತಾನರೂಪಿ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ಆರನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ತನುಕೀರ್ತಿ ಎಂದು ಹೆಸರಿಸಿದ್ದಾರೆ. == ರಾಗ ಲಕ್ಷಣ ಮತ್ತು ಸ್ವರೂಪ == ಇದು ಪ್ರಥಮ "ಇಂದು" ಚಕ್ರದ ಆರನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ. ಆರೋಹಣ ಸ ರಿ೧ ಗ೧ ಮ೦ ಪ ದ೩ ನಿ೩ ಸ ಅವರೋಹಣ ಸ ನಿ೩ ದ೩ ಪ ಮ೧ ಗ೧ ರಿ೧ ಸ ಇದು ಒಂದು ಸಂಪೂರ್ಣ ರಾಗವಾಗಿದೆ. == ಜನ್ಯ ರಾಗಗಳು == ಈ ರಾಗದ ಜನ್ಯ ರಾಗಗಳು ಹೆಚ್ಚು ಪ್ರಚಲಿತದಲ್ಲಿಲ್ಲ. == ಜನಪ್ರಿಯ ರಚನೆಗಳು == ಈ ರಾಗದಲ್ಲಿ ಪ್ರಚಲಿತದಲ್ಲಿರುವ ರಚನೆಗಳು ವಾ ವೇಲವ ವಾ - ಕೊಟೀಶ್ವರ ಅಯ್ಯರ್ ಶ್ರೀ ರಾಮ ಸದಾ ಭಜೇಹಮ್ - ಬಾಲಮುರಳಿ ಕೃಷ್ಣ ಹೆಚ್ಚಾಗಿ ಕಛೇರಿಗಳಲ್ಲಿ ಹಾಡಲ್ಪಡುತ್ತವೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಯೂ ಟ್ಯೂಬ್ ನಲ್ಲಿ ಮೇಳಕರ್ತ ರಾಗಗಳು