ಸುಪ್ರಸಿದ್ಧ ಹಿಂದೂಸ್ತಾನಿ ಗಾಯಕ ತಾನ್‌ಸೇನ್ ೧೫೦೬ರಲ್ಲಿ ಗ್ವಾಲಿಯರ್‌ನಲ್ಲಿ ಜನಿಸಿದರು.ಇವರ ತಂದೆ ಮುಕುಂದ ಮಿಶ್ರ ಒಬ್ಬ ಕವಿ.ಹರಿದಾಸ ಸ್ವಾಮಿ ಎಂಬುವರಲ್ಲಿ ತಾನ್‌ಸೇನ್‌ರ ಸಂಗೀತಾಭ್ಯಾಸ ನಡೆಯಿತು.ಕೆಲಕಾಲ ಇವರು ಮೇವಾಡದ ರಾಜ ರಾಮಚಂದ್ರನ ಆಸ್ಥಾನ ವಿದ್ವಾಂಸರಾಗಿದ್ದರು.ಅನಂತರ ಮೊಘಲ್ ಚಕ್ರವರ್ತಿ ಅಕ್ಬರ್‌ನ ಆಸ್ಥಾನದ ನವರತ್ನಗಳಲ್ಲೊಬ್ಬರಾದರು.ಅಕ್ಬರನು ಇವರಿಗೆ "ಮಿಯಾ" ಎಂಬ ಬಿರುದನ್ನು ನೀಡಿ ಗೌರವಿಸಿದ್ದನು.ಇವರ ಉತ್ತರಭಾರತೀಯ ಶೈಲಿಯ ಕೆಲವು ಶಾಸ್ತ್ರೀಯ ಸಂಗೀತದ ರಚನೆಗಳು ಇಂದಿಗೂ ಜನಪ್ರಿಯವಾಗಿವೆ.ತಾನ್‌ಸೇನ್‌ರು ೧೫೮೯ರ ಮೇ ೬ರಂದು ನಿಧನ ಹೊಂದಿದರು.