ತಾಯಿಬೇರು ಎಂದರೆ ಒಂದು ದೊಡ್ಡ, ಮಧ್ಯದಲ್ಲಿರುವ ಮತ್ತು ಪ್ರಧಾನವಾದ ಬೇರಾಗಿರುತ್ತದೆ. ಇದರಿಂದ ಇತರ ಬೇರುಗಳು ಪಾರ್ಶ್ವಕ್ಕೆ ಅಂಕುರಿಸುತ್ತವೆ. ಸಾಮಾನ್ಯವಾಗಿ ತಾಯಿಬೇರು ಸ್ವಲ್ಪಮಟ್ಟಿಗೆ ನೆಟ್ಟಗಿದ್ದು ಬಹಳ ದಪ್ಪವಾಗಿರುತ್ತದೆ, ಮತ್ತು ಕ್ರಮೇಣ ಮೊನಚಾಗುವ ಆಕಾರವನ್ನು ಹೊಂದಿದ್ದು ನೇರವಾಗಿ ಕೆಳಮುಖವಾಗಿ ಬೆಳೆಯುತ್ತದೆ. ಗಜ್ಜರಿಯಂತಹ ಕೆಲವು ಸಸ್ಯಗಳಲ್ಲಿ, ತಾಯಿಬೇರು ಬಹಳ ಅಭಿವೃದ್ಧಿಗೊಂಡ ಒಂದು ಶೇಖರಣಾ ಅಂಗವಾಗಿರುತ್ತದೆ. ಹಾಗಾಗಿ ಅದನ್ನು ತರಕಾರಿಯಾಗಿ ಕೃಷಿಮಾಡಲಾಗುತ್ತದೆ. == ಉಲ್ಲೇಖಗಳು ==