ತಾರಾ(ಜನನ 4 ಮಾರ್ಚ್ 1973) ಕನ್ನಡದ ಒಬ್ಬ ಪ್ರತಿಭಾವಂತ ನಟಿ. ತಾರ ಅವರು ತಮಿಳಿನ ಇಂಗೆಯುವ್ ಒರ ಗಂಗಲ್ ಚಿತ್ರದ ಮೂಲಕ ೧೯೮೪ರಲ್ಲಿ ತನ್ನ ಸಿನಿಮಾ ಬದುಕನ್ನು ಪ್ರಾರಂಭಿಸಿದರು. ಹಲವಾರು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಹಾಗೂ ನಾಯಕಿಯಾಗಿ ಅಭಿನಯಿಸಿದ್ದಾರೆ. ಕಾನೂರು ಹೆಗ್ಗಡತಿ, ಮುನ್ನುಡಿ, ಕಾರ್ಮುಗಿಲು, ಮುಂಜಾನೆಯ ಮಂಜು,ಕರಿಮಲೆಯ ಕಗ್ಗತ್ತಲು, ಮತದಾನ, ನಿನಗಾಗಿ, ಹಸೀನಾ . ಸೈನೈಡ್ ಚಿತ್ರಗಳು ಈಕೆಗೆ ಬಹಳ ಹೆಸರು ತಂದುಕೊಟ್ಟ ಚಿತ್ರಗಳು. ಹಸೀನಾ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದಾರೆ. ಇವರ ಮೂಲ ಹೆಸರು ಅನುರಾಧಾ. == ತಾರಾಗೆ ಬಂದ ಪ್ರಶಸ್ತಿಗಳು == ಅತ್ಯುತ್ತಮ ನಟಿ - ರಾಷ್ಟ್ರಪ್ರಶಸ್ತಿ. ಚಿತ್ರ: ಹಸೀನಾ ಅತ್ಯುತ್ತಮ ನಟಿ - ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ:ಕರಿಮಲೆಯ ಕಗ್ಗತ್ತಲು ಅತ್ಯುತ್ತಮ ನಟಿ - ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ:ಕಾನೂರು ಹೆಗ್ಗಡತಿ ಅತ್ಯುತ್ತಮ ಪೋಷಕ ನಟಿ - ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ:ಮುಂಜಾನೆಯ ಮಂಜು ಅತ್ಯುತ್ತಮ ಹಾಸ್ಯ ನಟಿ - ಚಿತ್ರ: ನಿನಗಾಗಿ == ರಾಜಕೀಯ ಜೀವನ == ತಾರಾ ಅನುರಾಧ ಅವರು ೨೦೦೯ರಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿದರು ಮತ್ತು ೨೦೧೨ರಿಂದ ಕರ್ನಾಟಕ ವಿಧಾನ ಪರಿಷತ್ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. == ತಾರಾ ಅನುರಾಧ ಅವರು ಅಭಿನಯಿಸಿದ ಚಿತ್ರಗಳು == == ಉಲ್ಲೇಖಗಳು ==