ತಾಳವು ಒಂದು ಸಾಮಾನ್ಯ ಆನದ್ಧವಾದ್ಯವಾಗಿದೆ. ಹಲವುವೇಳೆ ಜೋಡಿಯಾಗಿ ಬಳಸಲ್ಪಡುವ ತಾಳವು ತೆಳ್ಳಗಿರುವ, ಸಾಮಾನ್ಯವಾಗಿ ವಿವಿಧ ಮಿಶ್ರ ಲೋಹಗಳ ದುಂಡನೆಯ ತಟ್ಟೆಗಳನ್ನು ಹೊಂದಿರುತ್ತದೆ. ಬಹುಪಾಲು ತಾಳಗಳು ಅನಿರ್ದಿಷ್ಟ ಶ್ರುತಿಯದ್ದಾಗಿರುತ್ತವೆ, ಆದರೆ ಪ್ರಾಚೀನ ವಿನ್ಯಾಸಗಳನ್ನು ಆಧರಿಸಿದ ಸಣ್ಣ, ಬಿಲ್ಲೆಯಾಕಾರದ ತಾಳಗಳು ನಿರ್ದಿಷ್ಟ ಸ್ವರಚಿಹ್ನೆಯ ಶಬ್ದಮಾಡುತ್ತವೆ. == ಇತಿಹಾಸ == ಭಾರತದಲ್ಲಿ, ತಾಳಗಳು ಅತಿ ಪ್ರಾಚೀನ ಕಾಲದಿಂದ ಬಳಕೆಯಲ್ಲಿವೆ ಮತ್ತು ಎಲ್ಲ ಪ್ರಮುಖ ದೇವಾಲಯಗಳು ಹಾಗೂ ಬೌದ್ಧ ಸ್ಥಳಗಳುದ್ದಕ್ಕೆ ಈಗಲೂ ಬಳಸಲ್ಪಡುತ್ತವೆ. ಗಂಗಾ ನದಿಯ ದಂಡೆಯಲ್ಲಿ ಆಗುವ ಬೃಹತ್ ಆರತಿಗಳು ದೊಡ್ಡ ತಾಳಗಳಿಲ್ಲದೇ ಅಪೂರ್ಣವಾಗಿವೆ. ಇವನ್ನು ವಿಶ್ವದ ಎಲ್ಲೆಡೆಯ ಹಿಂದೂಗಳು ಭಯಭಕ್ತಿಯಿಂದ ಕಾಣುತ್ತಾರೆ. == ಬಾಹ್ಯ ಸಂಪರ್ಕಗಳು == . , , 3D