ತಾಳಗುಂದ ಒಂದು ಚಿಕ್ಕ ಹಳ್ಳಿಯಾಗಿದ್ದು ಇದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿದೆ. ಹಿಂದೆ ಈ ಊರನ್ನು ಸ್ಥಾನಗುಂಡೂರು ಎಂದೂ ಕರೆಯಲಾಗುತ್ತಿತ್ತು ಎಂದು ಹೇಳುತ್ತಾರೆ. ತಾಳಗುಂದವು ಕನ್ನಡದ ಮೊದಲ ರಾಜವಂಶವಾದ ಕದಂಬರ ಕಾರಣದಿಂದ ಪ್ರಖ್ಯಾತಿಯನ್ನು ಹೊಂದಿದೆ. == ಇತಿಹಾಸ == ತಾಳಗುಂದ ಹಿಂದೆ ಒಂದು ಅಗ್ರಹಾರ ಆಗಿದ್ದುದಾಗಿ ತಿಳಿದು ಬರುತ್ತದೆ. ಅಂತಹ ಒಂದು ಅಗ್ರಹಾರದಲ್ಲಿಯೇ ಕನ್ನಡದ ಮೊದಲ ರಾಜವಂಶ ಎಂದು ಹೇಳಲ್ಪಡುವ ಕದಂಬ ವಂಶಸ್ಥನಾದ ಮಯೂರವರ್ಮನು ಬೆಳೆಯುತ್ತಾನೆ. ಹಾಗೆಯೇ ಕರ್ನಾಟಕದಲ್ಲಿ ದೊರೆತ ಮೊದಲ ಸಂಸ್ಕೃತ ಶಾಸನ ಇಲ್ಲಿಯೇ ಸಿಕ್ಕಿರುವುದು. == ಈಗಿನದು == ನಾಲ್ಕನೇ ಶತಮಾನದಲ್ಲಿ ಕಟ್ಟಿದ ಪ್ರಣವೇಶ್ವರ ಮಂದಿರ ಇನ್ನೂ ಇಲ್ಲಿ ಇದೆ. ತಾಳಗುಂದ ಕಂಬ ಎಂದೇ ಹೆಸರುವಾಸಿಯಾದ ಕಲ್ಲಿನ ದೊಡ್ಡ ಕಂಬವೂ ಇಲ್ಲಿದೆ. ೧೬ ಶತಮಾನದ ಕೆಳದಿ ಚೆನ್ನಮ್ಮನ ಕಾಲದ ಶಾಸನವೂ ಇಲ್ಲಿ ಪತ್ತೆಯಾಗಿದೆ. == ವಿಶೇಷತೆ == ಇಲ್ಲಿ ದೊರೆತಿರುವ ಕಲ್ಲಿನ ಶಾಸನವನ್ನು ಕನ್ನಡದ ಮೊತ್ತಮೊದಲ ಶಾಸನವೆಂದು ಭಾರತೀಯ ಪುರಾತತ್ವ ಇಲಾಖೆಯಿಂದ ಅಧಿಕೃತವಾಗಿ ಹೇಳಲಾಗಿದೆ. == ಉಲ್ಲೇಖಗಳು == == ಇವನ್ನೂ ನೋಡಿ == ತಾಳಗುಂದ ಶಾಸನ