ತಿಲಂಗ್ ಭಾರತೀಯ ಶಾಸ್ತ್ರೀಯ ಸಂಗೀತದ ಹಿಂದುಸ್ತಾನಿ ಶೈಲಿಯಲ್ಲಿ ಒಂದು ರಾಗವಾಗಿದೆ, ಅದು ಖಮಾಜ್ ಥಾಟ್‌ಗೆ ಸೇರಿದೆ. == ಸ್ವರ == ಆರೋಹಣ (ಆರೋಹಣ ಪ್ರಮಾಣ): ಸ ಗ ಮ ಪ ನಿ ಸ ಅವರೋಹಣ (ಅವರೋಹಣ ಪ್ರಮಾಣ): ಸ ನಿ ಪ ಮ ಗ ಸ ಈ ರಾಗವು ಅವರೋಹಣದಲ್ಲಿ ನಿ ಫ್ಲಾಟ್ (ನಿ ಕೋಮಲ್) ಅನ್ನು ಹೊಂದಿದೆ. === ವಾದಿ ಮತ್ತು ಸಂವಾದಿ === ವಾದಿ ಸ್ವರ: ಗ ಸಂವಾದಿ : ನಿ == ಕರ್ನಾಟಕ ಸಂಗೀತದಲ್ಲಿ == ಈ ರಾಗವು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಹುಟ್ಟಿಕೊಂಡಿತು ಮತ್ತು ಇದನ್ನು ಕರ್ನಾಟಕ ಸಂಗೀತದಲ್ಲೂ ಉಪಯೊಗದಲ್ಲಿದೆ. ಇದನ್ನು 28ನೇ ಮೇಳಕರ್ತ (ಪೋಷಕ ಮಾಪಕ) ಹರಿಕಾಂಭೋಜಿಯಿಂದ ಪಡೆಯಲಾಗಿದೆ. ಇದು ಕೆಳಗಿನ ರಚನೆಯೊಂದಿಗೆ ಔಡವ-ಔಡವ ರಾಗವಾಗಿದೆ (ಪೆಂಟಾಟೋನಿಕ್ ಅಸಮಪಾರ್ಶ್ವದ ಪ್ರಮಾಣ). ಆರೋಹಣ : ಸ ಗ₃ ಮ₁ ಪ ನಿ₃ ಸ ಅವರೋಹಣ : ಸ ನಿ₂ ಪ ಮ ಗ₃ ಸ === ಸಂಯೋಜನೆಗಳು === ಪಾಪನಾಸಂ ಶಿವನ್ ರಚಿಸಿದ ಶ್ರೀ ಗಣೇಶ ಚರಣಂ ಈ ರಾಗದಲ್ಲಿ ಜನಪ್ರಿಯ ಸಂಯೋಜನೆಯಾಗಿದೆ. ರಾಮಕೃಷ್ಣರು ಮನೆಗೆ, ತಾರಕ್ಕ ಬಿಂದಿಗೆ ಪುರಂದರ ದಾಸರಿಂದ ಸತ್ಯವಂತರ ಸಂಗವಿರಲು ಕನಕ ದಾಸರಿಂದ ರಚನೆಯಾದ ಕೆಲವು ದೇವರನಾಮಗಳು. == ಚಲನಚಿತ್ರ ಹಾಡುಗಳು == === ತಮಿಳು === === ಸ್ವರ ಹೋಲಿಕೆಗಳು === ಗಂಭೀರನಾಟ ರಾಗವು ಆರೋಹಣ ಮತ್ತು ಅವರೋಹಣ ಎರಡೂ ಮಾಪಕಗಳಲ್ಲಿ ನಿ3 (ಕಾಕಲಿ ನಿಷಾದ) ಜೊತೆಗೆ ಸಮ್ಮಿತೀಯ ರಾಗವಾಗಿದೆ, ತಿಲಾಂಗ್ ಅವರೋಹಣ ದಲ್ಲಿ ಕೈಸಿಕಿ ನಿಷಾದ (ನಿ2) ಅನ್ನು ಬಳಸುತ್ತಾರೆ. ಸಾವಿತ್ರಿ ರಾಗವು ಆರೋಹಣ ಮತ್ತು ಅವರೋಹಣ ಎರಡರಲ್ಲೂ ನಿ2 (ಕೈಸಿಕಿ ನಿಷಾದ) ಜೊತೆಗೆ ಸಮ್ಮಿತೀಯ ರಾಗವಾಗಿದೆ, ಆದರೆ ತಿಲಂಗ್ ಆರೋಹಣ ಪ್ರಮಾಣದಲ್ಲಿ ಕಾಕಲಿ ನಿಷಾದವನ್ನು (N3) ಬಳಸುತ್ತಾರೆ. ಆದ್ದರಿಂದ, ತಿಲಂಗ್‌ಗೆ ಗಂಭೀರನಟದ ಆರೋಹಣ ಮತ್ತು ಸಾವಿತ್ರಿಯ ಆರೋಹಣವಿದೆ. == ಟಿಪ್ಪಣಿಗಳು == == ಉಲ್ಲೇಖಗಳು ==