ತಿಲಪುಷ್ಪವು ಒಂದು ಔಷಧೀಯ ಗುಣವುಳ್ಳ ಸಸ್ಯವಾಗಿದೆ. ಇದರ ವೈಜ್ಞಾನಿಕ ಹೆಸರು ಡಿಜಿಟೇಲಿಸ್ ಪರ್ಪುರಿಯ( ). ಲಾಮಿಯಲೆಸ್ ಎಂಬ ಗಣಕ್ಕೆ ಸೇರಿದ ತಿಲಪುಷ್ಪಿಯು ಪ್ಲಾಂಟಜಿನೇಸಿಯ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. == ಸಸ್ಯ ವಿವರಣೆ == ಇದರ ಹೂವು ಎಳ್ಳಿನ ಹೂವನ್ನು ಹೋಲುವುದರಿಂದ ಇದಕ್ಕೆ ತಿಲಪುಷ್ಪಿ ಎಂಬ ಹೆಸರು ಬಂದಿದೆ. ಇದನ್ನು ವಾರ್ಷಿಕ ಬೆಳೆಯಾಗಿ ಬೆಳೆಯಲಾಗುತ್ತದೆ. ಇದರ ಗಿಡವು ೧.೨ ಮೀಟರ್ ಎತ್ತರದವರೆಗೆ ಬೆಳೆಯುತ್ತದೆ. ಎಲೆಯು ೧೫-೨೦ ಸೆಂ.ಮೀ. ಉದ್ದವಾಗಿದ್ದು ಅಂಡಾಕಾರದಿಂದಿರುತ್ತದೆ. ಎಲೆಗಳು ರೋಮಗಳಿಂದ ಕೂಡಿರುತ್ತದೆ. == ಇತರ ಭಾಷೆಗಳಲ್ಲಿನ ಹೆಸರುಗಳು == ಸಂಸ್ಕೃತ: ಹೃತ್ಪತ್ರಿ, ತಿಲಪುಷ್ಪಿ ಹಿಂದಿ: ತಿಲಪುಷ್ಪಿ ಇಂಗ್ಲೀಷ್:ಫೊಕ್ಸ್‌ಗ್ಲೋವ್ (), , , ’ ಮಲಯಾಳಂ: ತಿಲಪುಷ್ಪಿ, ಹೃದ್ಪತ್ರಿ == ಉಪಯೋಗಗಳು == ತಿಲಪುಷ್ಪಿಯನ್ನು ಹೃದಯದ ಖಾಯಿಲೆಗಲ ನಿವಾರಣೆಗಾಗಿ ಉಪಯೋಗಿಸುತ್ತಾರೆ. ಇದರ ಎಲೆಯನ್ನು ಕತ್ತರಿಸಿ ನಂತರ ೬೦ಡಿಗ್ರಿ ಸೆ. ಉಷ್ಣಾಂಶದಲ್ಲಿ ಒಣಗಿಸಿ ಮಾಡಿದ ರಸವನ್ನು ಉಪಯೋಗಿಸಬೇಕು. ಈ ದ್ರವ್ಯವು ಹೃದಯದ ಕರೋನರಿ ಎಂಬ ನಾಳದಲ್ಲಿ ಹೆಚ್ಚು ರಕ್ತ ಪ್ರವಹಿಸುವಂತೆ ಮಾಡುತ್ತದೆ. ಇದರಿಂದಾಗಿ ಹೃದಯದ ಕ್ರಿಯೆಯು ಸರಿಯಾಗಿ ನಡೆಯುತ್ತದೆ. ಮೂತ್ರ ಜನಕಾಂಗದಲ್ಲಿ ಹೆಚ್ಚಿನ ಪ್ರಮಾಣದ ರಕ್ತವನ್ನು ಹರಿಯುವಂತೆ ಮಾಡುವ ತಿಲಪುಷ್ಪಿ ಮೂತ್ರಲ ಗುಣವನ್ನು ಹೊಂದಿದೆ. ಗಾಯಗಳಿಗೆ ಹಾಗೂ ಸುಟ್ಟ ಗಾಯಗಳಿಗೆ ಇದನ್ನು ಲೇಪಿಸಬಹುದಾಗಿದೆ. == ಉಲ್ಲೇಖಗಳು == == ಬಾಹ್ಯಸಂಪರ್ಕಗಳು == "". . . : - . . "" . ' . 1921. {{ }}: : |HIDE_PARAMETER10=, |HIDE_PARAMETER4=, |HIDE_PARAMETER8=, |HIDE_PARAMETER6=, |HIDE_PARAMETER9=, |HIDE_PARAMETER1=, |HIDE_PARAMETER5=, |HIDE_PARAMETER7=, |HIDE_PARAMETER3=, |HIDE_PARAMETER2= ()