ತಿಲ್ಕುಟಮ್, ಗಜಕ್, ತಿಲ್‍ಪಟ್ಟಿ ಎಂದೂ ಕರೆಯಲ್ಪಡುವ ತಿಲ್‍ಕುಟ್ ಭಾರತದ ರಾಜ್ಯಗಳಾದ ಬಿಹಾರ, ಜಾರ್ಖಂಡ್‌ನಲ್ಲಿ ತಯಾರಿಸಲಾಗುವ ಸಿಹಿತಿನಿಸಾಗಿದೆ. ತಿಲ್‍ಕುಟ್‍ನ್ನು ವಿಶೇಷವಾಗಿ ಮಕರ ಸಂಕ್ರಾಂತಿ ಹಬ್ಬದ ಸಮಯದಲ್ಲಿ ತಯಾರಿಸಲಾಗುತ್ತದೆ ಮತ್ತು ತಿನ್ನಲಾಗುತ್ತದೆ. ಇದನ್ನು ಪುಡಿಮಾಡಿದ ಎಳ್ಳು ಬೀಜಗಳು ( ಸೆಸಮಮ್ ಇಂಡಿಕಮ್ ) ಮತ್ತು ಬೆಲ್ಲ ಅಥವಾ ಸಕ್ಕರೆಯಿಂದ ತಯಾರಿಸಲಾಗುತ್ತದೆ. ಅತ್ಯುತ್ತಮ ತಿಲ್‍ಕುಟ್ ಗಯಾದಿಂದ ಬರುತ್ತದೆ ಎಂದು ಹೇಳಲಾಗುತ್ತದೆ ಮತ್ತು ಇದು ಮಗಧ ಪ್ರದೇಶಕ್ಕೆ ಮಾತ್ರ ಸ್ಥಳೀಯವಾಗಿದೆ. ಈ ಒಣ ಸಿಹಿತಿನಿಸಿನ ಉಲ್ಲೇಖವು ಬೌದ್ಧ ಸಾಹಿತ್ಯದಲ್ಲಿ ಪಲಾಲಾ ಎಂದು ಕಂಡುಬರುತ್ತದೆ. ಸಾಮಾನ್ಯವಾಗಿ, ಮೂರು ವಿಧದ ತಿಲ್‍ಕುಟ್‍ಗಳು ಲಭ್ಯವಿವೆ- ಸಂಸ್ಕರಿಸಿದ ಸಕ್ಕರೆಯುಳ್ಳ ತಿಲ್‍ಕುಟ್ ಬಿಳಿ ಬಣ್ಣದ್ದಾಗಿರುತ್ತದೆ, ಶಕ್ಕರ್ ತಿಲ್‍ಕುಟ್ ಅನ್ನು ಸಂಸ್ಕರಿಸದ ಸಕ್ಕರೆಯಿಂದ ತಯಾರಿಸಲಾಗುತ್ತದೆ ಮತ್ತು ತಿಳಿ ಕಂದು ಬಣ್ಣವನ್ನು ಹೊಂದಿರುತ್ತದೆ ಮತ್ತು ಗುರ್ ತಿಲ್‍ಕುಟ್ ಬೆಲ್ಲದಿಂದ ಮಾಡಲ್ಪಟ್ಟಿರುತ್ತದೆ ಮತ್ತು ಗಾಢ ಕಂದು ಬಣ್ಣವನ್ನು ಹೊಂದಿರುತ್ತದೆ. ಈ ಪ್ರತಿಯೊಂದು ಪ್ರಭೇದವು ತನ್ನದೇ ಆದ ರುಚಿಯನ್ನು ಹೊಂದಿರುತ್ತದೆ. ವೃತ್ತಾಕಾರದ ತಿನಿಸನ್ನು ತಿಲ್‍ಕುಟ್ ಎಂದು ಕರೆಯಲಾಗುತ್ತದೆ ಮತ್ತು ಚಿಕ್ಕದಾದ ನಟ್ ಗಾತ್ರದವುಗಳನ್ನು ತಿಲ್ಲೌರಿ ಎಂದು ಕರೆಯಲಾಗುತ್ತದೆ. ಚಳಿಗಾಲದಲ್ಲಿ ಕಬ್ಬನ್ನು ಕಟಾವು ಮಾಡಲಾಗುತ್ತದೆ. ಆ ಅವಧಿಯಲ್ಲಿ ಅನೇಕ ಪಟ್ಟಣಗಳಲ್ಲಿ ಮತ್ತು ಹಳ್ಳಿಗಳಲ್ಲಿಯೂ ದೊಡ್ಡ ಪ್ರಮಾಣದಲ್ಲಿ ತಿಲ್‍ಕುಟ್‍ನ್ನು ತಯಾರಿಸಲಾಗುತ್ತದೆ. ಆದಾಗ್ಯೂ, ಬೇಡಿಕೆಯು ವರ್ಷವಿಡೀ ಉಳಿಯುವುದರಿಂದ, ವರ್ಷಪೂರ್ತಿ ಸಣ್ಣ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ. == ಪ್ರದೇಶಗಳು == ತಿಲ್‍ಕುಟ್ ಭಾರತೀಯ ರಾಜ್ಯಗಳಾದ ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳದಲ್ಲಿ ಬಳಸಲಾಗುವ ಕಾಲೋಚಿತ ಸಿಹಿತಿಂಡಿಯಾಗಿದೆ. ಡಿಸೆಂಬರ್ ಮತ್ತು ಜನವರಿ ಸಮಯದಲ್ಲಿ ಈ ಪ್ರದೇಶಗಳಲ್ಲಿ ತಿಲ್‍ಕುಟ್ ಅನ್ನು ವ್ಯಾಪಕವಾಗಿ ಮಾರಾಟ ಮಾಡಲಾಗುತ್ತದೆ ಮತ್ತು ಇದು ಎಲ್ಲಾ ವಯಸ್ಸಿನವರಿಗೆ ಅಚ್ಚುಮೆಚ್ಚಿನ ಸಿಹಿತಿಂಡಿಯಾಗಿದೆ. ಇದು ಗ್ರಹ ಮತ್ತು ನಕ್ಷತ್ರ ದೋಶಕ್ಕೆ ಕೂಡ ಸಂಬಂಧಿಸಿದೆ. == ಉಲ್ಲೇಖಗಳು ==