[[: kara_10Feb2008.|||250px|ಸಮವಸರಣದಲ್ಲಿ ತೀರ್ಥಂಕರರು]] ತೀರ್ಥಂಕರ ಎನ್ನುವುದು ಜೈನ ಧರ್ಮದ ಒಂದು ಪಾರಿಭಾಷಿಕ orybisಶಬ್ದವಾಗಿದೆ.ಇವರನ್ನು ಜಿನ,ಕೇವಲಿಯೆಂದೂ ಕರೆಯುತ್ತಾರೆ. ಅದರ ಅರ್ಥವೆಂದರೆ "ಜಯಿಸಿದವನು" (ಆಸೆ,ಅಭಿಮಾನ,ಕ್ರೋದ ಮುಂತಾದವು...). ತೀರ್ಥಂಕರರು ಧರ್ಮ ತೀರ್ಥವನ್ನು ಮುನ್ನೆಡೆಸುವವರು ಅಥವಾ ಧರ್ಮ ಪ್ರವರ್ತಕರು. ತೀರ್ಥಂಕರರು ಕೇವಲ ಜ್ಞಾನವನ್ನು ಪಡೆದ ಮೇಲೆ ಇತರರಿಗೆ ಮೋಕ್ಷ ಮಾರ್ಗವನ್ನು ಉಪದೇಶಿಸುತ್ತಾರೆ.ಇವರ ಉಪದೇಶಗಳು ಜೈನ ಧರ್ಮದ ಮೂಲ ತಳಹದಿಯಾಗಿದೆ. ಇವರಿಗೆ ಸಮಸ್ತದ ಬಗ್ಗೆ ಸ್ಪಷ್ಟವಾದ ಅರಿವಿರುತ್ತದೆ. ಓಂಕಾರ ರೂಪದಲ್ಲಿರುವ ಇವರ ಉಪದೇಶವನ್ನು ಗಣಧರರು ತಿಳಿಯಪಡಿಸುವರು. ಈ ಓಂಕಾವೇ ಜಿನವಾಣಿ, ಸರಸ್ವತಿ ಯ ರೂಪದಲ್ಲಿ ಆರಾಧಿಸಲ್ಪಡುತ್ತದೆ. ಇವರು ಉಪದೇಶಗಳನ್ನು ಸಮವಸರಣದಲ್ಲಿ ನೀಡುವರು. ಮಾನವ ಜನ್ಮವು ಪೂರ್ಣವಾದ ನಂತರ ಇವರು ಮೋಕ್ಷವನ್ನು ಹೊಂದುತ್ತಾರೆ. == ೨೪ ತೀರ್ಥಂಕರ ಆಖ್ಯಾನ ಪಟ್ಟಿ ==