ತೈವಾನ್ ಪೂರ್ವ ಏಷ್ಯಾ ಭಾಗದಲ್ಲಿರುವ ಒಂದು ದೇಶ. ತೈವಾನಿನ ಹಳೆಯ ಹೆಸರು ಫಾರ್ಮೋಸಾ ಎಂಬುದಾಗಿದೆ. ಈ ದೇಶದ ವಾಯುವ್ಯಕ್ಕೆ ಚೀನಾ, ಈಶಾನ್ಯಕ್ಕೆ ಜಪಾನ್ ಮತ್ತು ದಕ್ಷಿಣಕ್ಕೆ ಫಿಲಿಪ್ಪೀನ್ಸ್ ದೇಶಗಳಿವೆ. ಒಟ್ಟು ೩೫,೮೦೮ ಚದರ ಕಿಮೀ ವಿಸ್ತಾರವಾದ ಭೂಪ್ರದೇಶವನ್ನು ಹೊಂದಿರುವ ತೈವಾನ್, ಪೂರ್ವದಲ್ಲಿ ಮೂರನೇ ಎರಡು ಭಾಗದಷ್ಟು ಪರ್ವತ ಶ್ರೇಣಿಗಳಿಂದ ಆವೃತವಾಗಿದೆ. ತೈಪೆ ತೈವಾನಿನ ರಾಜಧಾನಿ.