ತೊಂಬಟ್ಟು, ಇದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಒಂದು ಗ್ರಾಮ. ಇದು ಉಡುಪಿ ಜಿಲ್ಲೆಯ ಉತ್ತರ ದಿಕ್ಕಿನಿಂದ ೪೫ ಕಿಲೋಮೀಟರ್, ಕುಂದಾಪುದಿಂದ ೨೬ ಕಿಲೋಮೀಟರ್ ಹಾಗೂ ಬೆಂಗಳೂರುನಿಂದ ೪೧೦ ಕಿಲೋಮೀಟರ್ ದೂರದಲ್ಲಿದೆ. ಕೋಟ, ಉಡುಪಿ, ಕಾರ್ಕಳ, ಸಾಗರ ಇವು ಈ ಸ್ಥಳಕ್ಕೆ ಹತ್ತಿರವಿರುವ ಪ್ರದೇಶವಾಗಿದೆ. ತೊಂಬಟ್ಟು ಜಲಪಾತವು ಅರಬ್ಬೀ ಸಮುದ್ರದ ಪಶ್ಚಿಮ ದಿಕ್ಕಿನಲ್ಲಿದೆ. ಇದರ ಪೂರ್ವ ದಿಕ್ಕಿನಲ್ಲಿ ಪಶ್ಚಿಮ ಘಟ್ಟಗಳಿವೆ. ತೊಂಬಟ್ಟು ಜಲಪಾತವು ಭತ್ತದ ಗದ್ದೆ ಮತ್ತು ತೆಂಗಿನ ತೋಟಗಳಿಂದ ಹಾಗೂ ದಟ್ಟವಾದ ಅರಣ್ಯ ಭೂಮಿ, ಗುಡ್ಡಗಾಡು ಪ್ರದೇಶಗಳಿಂದ ಕೂಡಿದೆ. ಪ್ರತಿ ವರ್ಷ ಈ ಸ್ಥಳದಲ್ಲಿ ಜೂನ್ ತಿಂಗಳಿನಿಂದ ಅಕ್ಟೋಬರ್ ತಿಂಗಳವರೆಗೆ ಅಧಿಕ ಮಳೆಯಾಗುತ್ತದೆ. == ಆರ್ಥಿಕತೆ == ಕೃಷಿ ತೊಂಬಟ್ಟು ಗ್ರಾಮದ ಜನರ ಪ್ರಮುಖ ಆರ್ಥಿಕತೆಯಾಗಿದೆ. ಅಕ್ಕಿ, ತೆಂಗಿನಕಾಯಿ, ಅಡಿಕೆ ಮತ್ತು ಗೇರುಬೀಜಗಳನ್ನು ಇಲ್ಲಿ ಬೆಳೆಸಲಾಗುತ್ತದೆ. ರಬ್ಬರ್ ಕೂಡ ಇಲ್ಲಿನ ಪ್ರಮುಖ ಬೆಳೆಯಾಗಿದೆ. == ವಾರಾಹಿ ನದಿ == ವಾರಾಹಿ ನದಿಯನ್ನು ಸ್ಥಳೀಯ ಜನರು ಬಾಗಿಮನೆ ನದಿ ಅಥವಾ ಮಚಟ್ಟು ನದಿ ಅಥವಾ ಹಾಲಾಡಿ ನದಿ ಎಂದು ಕರೆಯುತ್ತಾರೆ. ಈ ನದಿಯು ಗ್ರಾಮದ ಉತ್ತರ ದಿಕ್ಕಿನಲ್ಲಿ ಹರಿದು, ನದಿದಡದ ಅಡಿಕೆ ತೋಟಗಳಿಗೆ ನೀರಾವರಿಯ ಮೂಲವಾಗಿದೆ. ಬಸ್ರೂರು ಗ್ರಾಮವನ್ನು ಹಾದು ನಂತರ ಕುಂದಾಪುರದ ಬಳಿ ವಾರಾಹೀ ನದಿಯು ಅರಬ್ಬೀ ಸಮುದ್ರವನ್ನು ಸೇರುತ್ತದೆ. ಮಾಸ್ತಿಕಟ್ಟೆಯ ಬಳಿ ವಾರಾಹಿ ನದಿಗೆ ಅಡ್ಡಲಾಗಿ ಮಣಿ ಅಣೆಕಟ್ಟನ್ನು ನಿರ್ಮಿಸಿದ ನಂತರ ಈ ನದಿಯ ಹರಿವು ಬಹಳ ಕಡಿಮೆಯಾಗಿದೆ. ಈ ಅಣೆಕಟ್ಟು ತೊಂಬಟ್ಟು ಗ್ರಾಮಕ್ಕೆ ಸಮೀಪದಲ್ಲಿದೆ. == ಸಸ್ಯ ಮತ್ತು ಪ್ರಾಣಿ == ತೊಂಬಟ್ಟು ಜಲಪಾತವು ಪಶ್ಚಿಮ ಘಟ್ಟಗಳಿಂದ ಕೂಡಿದ್ದು ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿದೆ. ಈ ಸ್ಥಳದಲ್ಲಿ ವಿವಿಧ ರೀತಿಯ ಸಸ್ಯ ಮತ್ತು ಪ್ರಾಣಿ ಪಕ್ಷಿಗಳು ಕಂಡು ಬರುತ್ತದೆ. ಕೊಲ್ಲೂರು, ಅಮಾಸೆಬೈಲು ಇವು ಸುತ್ತಮುತ್ತಲಿನ ಪ್ರದೇಶಗಳಾಗಿವೆ. ಚಿರತೆ, ಹುಲಿ, ಕಾಡೆಮ್ಮೆ ಮತ್ತು ನಾಗರ ಹಾವುಗಳು ಈ ಕಾಡಿನಲ್ಲಿ ಕಂಡುಬರುತ್ತವೆ. ಅಪರೂಪದ ಬೀಟೆಮರ ಇಲ್ಲಿ ನೋಡಲು ಸಿಗುತ್ತದೆ. ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯವು ಜಲಪಾತದ ಪೂರ್ವದಿಕ್ಕಿನಲ್ಲಿದೆ. == ಕಲೆ ಮತ್ತು ಸಂಸ್ಕೃತಿ == ಯಕ್ಷಗಾನ ಇಲ್ಲಿನ ಮುಖ್ಯ ಕಲೆಯಾಗಿದೆ. ಇದು ನೃತ್ಯ-ನಾಟಕಗಳಿಂದ ಕೂಡಿದ್ದು ೬-೮ ಗಂಟೆಗಳ ಕಾಲ ನಡೆಯುತ್ತದೆ. ಪ್ರತಿವರ್ಷ ನವಂಬರ್ ನಿಂದ ಮೇ ತಿಂಗಳವರೆಗೆ ಉಡುಪಿಯ ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ಯಕ್ಷಗಾನ ನಡೆಯುತ್ತದೆ. ಇಲ್ಲಿ ಶ್ರೀ ಮಹಾಗಣಪತಿ ಭಜನಾ ಮಂಡಳಿ, ತೊಂಬಟ್ಟು ಎಂಬ ಭಜನಾ ಮಂದಿರವಿದ್ದು, ಅನೇಕ ಕಾರ್ಯಕ್ರಮಗಳು ನಡೆಯುತ್ತವೆ. == ಶಿಕ್ಷಣ ಸಂಸ್ಥೆ == ವರಸಿದ್ದಿವಿನಾಯಕ ಪದವಿಪರ್ವೂ ಕಾಲೇಜು, ಕೇರಾಡಿ ಕೆನರಾ ಕಾಲೇಜ್ ಅ‌ಫ್ ನರ್ಸಿಂಗ್ ಮೂಡಲಾಕಟ್ಟೆ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ ಮದರ್ ತೆರೆಸಾ ಸ್ಕೂಲ್ ಮತ್ತು ಶಂಕರನಾರಾಯಣ ಕಾಲೇಜು ಸರ್ಕಾರಿ ಪ್ರೌಢಶಾಲೆ, ಅಮಾವಾಸೆಬೈಲು == ಉಲ್ಲೇಖಗಳು ==