ತೋಕ್ಯೋ (東京), ಅಧಿಕೃತವಾಗಿ ತೋಕ್ಯೋ ಮಹಾನಗರ(東京都, とうきょうと, ತೋಕ್ಯೋತೊ), ಜಪಾನ್ ದೇಶದ ರಾಜಧಾನಿ ಮತ್ತು ಜಪಾನಿನ ೪೭ ರಾಜ್ಯ (都道府県, ತೊದೋಫುಕೆನ್) ಗಳಲ್ಲಿ ಅತೀದೊಡ್ಡದಾದದ್ದು. ಜಪಾನಿನ ಮುಖ್ಯ ದ್ವೀಪವಾಗಿರವ ಹೋಂಶು (本州) ವಿನ ಪೂರ್ವಭಗದಲ್ಲಿರುವ ಕಾನ್ತೋ(関東) ಉಪರಾಜ್ಯ(地方, ಚಿಹೋ)ದಲ್ಲಿ ಟೋಕ್ಯೊ ಸ್ಥಿತವಾಗಿದೆ. ಟೋಕ್ಯೊ ನಗರದ ೨೩ ವಿಶೇಷ ವಾರ್ಡ್ ಗಳಲ್ಲಿ ೧೪ ದಶಲಕ್ಷಕಿಂತಲೂ ಹೆಚ್ಚು ಜನರು ವಾಸವಾಗಿದ್ದು, ನಗರದ ಹೊರಭಾಗಗಳನ್ನು ಸೇರಿಸಿ ಒಟ್ಟು ೩೮ ದಶಲಕ್ಷಕಿಂತಲೂ ಹೆಚ್ಚು ಜನರು ತೋಕ್ಯೋ ರಾಜ್ಯದಲ್ಲಿ ವಾಸವಾಗಿದ್ದಾರೆ. == ಹೆಸರು == ತೋಕ್ಯೋವು ಮೆಯ್ಜಿ (明治) ಪುನಃಸ್ಥಾಪನೆಯ ಮೊದಲು ಎದೊ (江戸) ಎಂದು ಹೆಸರಾಗಿತ್ತು. ಎದೊ(江戸) ಎಂಬ ಪದವು 江(ಎ, ಖಾರಿ) ಮತ್ತು 戸(ತೊ, ಬಾಗಿಲು) ಕಾನ್ಜಿಗಳ ಸಂಧಿಯಿಂದ ಬಂದಿರುವುದಾಗಿದ್ದು ಇದರ ಅರ್ಥವು ತೋಕ್ಯೋ ಖಾರಿಯಲ್ಲಿ ಪೆಸಿಫಿಕ್ ಮಹಾಸಾಗರಕ್ಕೆ ಸೇರುವ ಸುಮಿದ ನದೀಯ (隅田川, ಸುಮಿದ ಕವ) ನದೀಮುಖವನ್ನು ಸೂಚಿಸುತ್ತದೆ. ವರ್ಷ ೧೮೬೮ ರ ಮೆಯ್ಜಿ ಪುನಃಸ್ಥಾಪನೆಯಾದ ಮೇಲೆ ನಿಹೋನಿನ ರಾಜಮನೆತನವು ಕ್ಯೋತೊವನ್ನು ಬಿಟ್ಟು ಅಂದಿನ ತೋಕುಗಾವ-ರಾಜಧಾನಿಯಾಗಿದ್ದ ಎದೊವಿನಲ್ಲಿ ನೆಲೆಯನ್ನು ಹೂಡಿದರು; ಇದರ ನಂತರ ಎದೊವಿನ ಹೆಸರನ್ನು ತೋಕ್ಯೋವಿಗೆ (東京, 東 "ತೋ" ಪೂರ್ವ, 京 "ಕ್ಯೋ" ರಾಜಧಾನಿ) ಬದಲಾಯಿಸಲಾಯಿತು. ಮೆಯ್ಜಿ ಕಾಲದ ಹೊಸತರಲ್ಲಿ '東京' ಪದದ ಉಚ್ಛಾರಣೆಯನ್ನು 'ತೋಕೆಯಿ' ಎಂದು ಕೂಡ ಮಾಡಲಾಗುತ್ತಿತ್ತು; ಆ ಕಾಲದ ಹಲವು ಆಂಗ್ಲ ದಾಖಲೆಗಳಲಿ '' ಎಂಬ ಬಳಿಕೆಯೂ ಇತ್ತು; ಆದರೆ ಈ ಉಚ್ಛಾರಣೆಯು ಇಂದು ಬಳಿಕೆಯಲ್ಲಿಲ್ಲ. == ಭೂಗೋಳ ಮತ್ತು ಆಡಳಿತ ವಿಭಾಗಗಳು == ತೋಕ್ಯೋವಿನ ೨೩ ವಿಶೇಷ ವಾರ್ಡ್‍ಗಳು ಇಂತಿವೆ: ==== ನಗರಗಳು ==== ತೋಕ್ಯೋವಿನಲ್ಲಿ ಇರುವ ೨೬ ನಗರಗಳು: == ನಗರನೋಟ == == ಸಹೋದರಿ ನಗರಗಳು == ಟೋಕ್ಯೊ ಮಹಾನಗರವು ೧೧ ಸಹೋದರಿ ನಗರಗಳನ್ನು ಹೊಂದಿದೆ. == ಉಲ್ಲೇಖಗಳು == == ಹೊರಗಿನ ಸಂಪರ್ಕಗಳು == ಟೋಕ್ಯೊ ಮಹಾನಗರ ಸರ್ಕಾರದ ಅಧ್ಹಿಕೃತ ತಾಣ ವಿಕಿಟ್ರಾವೆಲ್ ನಲ್ಲಿ ಟೋಕ್ಯೊ ಟೋಕ್ಯೊ ನಗರದ ಭೂಪಟ 2008-12-16 ವೇಬ್ಯಾಕ್ ಮೆಷಿನ್ ನಲ್ಲಿ. ಟೋಕ್ಯೊ ನಗರದ ಪ್ರವಾಸ ಮಾರ್ಗದರ್ಶಕ ಮತ್ತು ಚಿತ್ರಗಳು