ತ್ರಿಪುರಾಂಬಾ (೧೯೧೦-೧೯೭೯) ರು ಕನ್ನಡ ಚಲನಚಿತ್ರಗಳಲ್ಲಿ ಕೆಲಸ ಮಾಡಿದ ಭಾರತೀಯ ರಂಗಭೂಮಿ ಹಾಗು ಚಲನಚಿತ್ರ ನಟಿ ಮತ್ತು ಗಾಯಕಿ. ೧೯೩೪ ರಲ್ಲಿ ಬಿಡುಗಡೆಯಾದ ಕನ್ನಡದ ಮೊದಲ ಟಾಕಿ ಸತಿ ಸುಲೋಚನಾದಲ್ಲಿ ಸುಲೋಚನಾ ಪಾತ್ರದಿಂದ ಉತ್ತಮವಾಗಿ ನೆನಪುಳಿದುಕೊಳ್ಳುತ್ತಾರೆ. ಇದೇ ಅವರನ್ನು ಕನ್ನಡ ಚಿತ್ರರಂಗದ ಮೊದಲ ನಾಯಕಿಯನ್ನಾಗಿ ಮಾಡಿತು. == ವೃತ್ತಿ == ತ್ರಿಪುರಾಂಬ ರಂಗಭೂಮಿಯಲ್ಲಿ ತೊಡಗಿಸಿಕೊಂಡರು ಹಾಗು ನಿಪುಣ ನಟಿ ಮತ್ತು ಗಾಯಕಿಯಾದರು. ಅವರು ಸುಬ್ಬಯ್ಯ ನಾಯ್ಡು ಅವರೊಂದಿಗೆ ಕನ್ನಡ ಚಿತ್ರರಂಗದ ಮೊದಲ ಟಾಕಿ ಚಿತ್ರ ಸತಿ ಸುಲೋಚನಾದಲ್ಲಿ ಇಂದ್ರಜಿತ್ ಅವರ ಪತ್ನಿ ಸುಲೋಚನಾ ಪಾತ್ರವನ್ನು ನಿರ್ವಹಿಸಿದರು. ಈ ಐತಿಹಾಸಿಕ ಸಿನಿಮಾ ಅವರನ್ನು ಕನ್ನಡದ ಮೊದಲ ನಾಯಕಿಯನ್ನಾಗಿ ಮಾಡಿತು. ಆಶ್ಚರ್ಯವೆಂದರೆ ತ್ರಿಪುರಾಂಬ ಹೆಚ್ಚು ಸಿನಿಮಾ ಮಾಡಲಿಲ್ಲ. ೧೯೩೭ ರಲ್ಲಿ ಅವರ ಮುಂದಿನ ಮತ್ತು ಕೊನೆಯ ಚಿತ್ರ ಪುರಂದರದಾಸ. ಅವರು ೧೯೭೯ ರಲ್ಲಿ ನಿಧನರಾದರು. == ಚಿತ್ರಕಥೆ == ಹಲವಾರು ರಂಗ ನಾಟಕಗಳ ಹೊರತಾಗಿ, ತ್ರಿಪುರಾಂಬಾ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ತ್ರಿಪುರಾಂಬಾ @ ಐ ಎಮ್ ಡಿ ಬಿ