ತ್ರೇತಾಯುಗ - ಹಿಂದೂ ಧರ್ಮದ ಮಹಾಕಾವ್ಯಗಳಲ್ಲೊಂದಾದ ರಾಮಾಯಣದಲ್ಲಿನ ಘಟನಾವಳಿಗಳು ಸಂಭವಿಸಿದ ಯುಗ ಎಂದು ಹಿಂದೂ ಪುರಾಣಗಳಲ್ಲಿ ನಂಬಲಾಗಿದೆ. ವೈಕುಂಠದ ಅಧಿಪತಿಯಾದ ಮಹಾವಿಷ್ಣುವು ದುಷ್ಟಶಕ್ತಿಗಳನ್ನು ಸಂಹರಿಸಲು ರಾಮನ ಅವತಾರ ಎತ್ತಿದ ಯುಗವೆಂದು ಹೇಳಲಾಗುತ್ತದೆ. ಯುಗಗಳ ಗಣಿತವು ಎರಡು ಮಾನಗಳಿಂದ ಮಾಡಬಹುದಾಗಿದೆ ದೇವತಾಮಾನ ಮತ್ತು ಮನುಷ್ಯಮಾನ. ಪುರಾಣಗಳು ದೇವತಾಮಾನದ ಎಣಿಕೆಯನ್ನು ಹೇಳಿವೆ. ನಾಲ್ಕು ಪ್ರಕಾರದ ದಿವಸಗಳ ಜ್ಞಾನ ಈ ಮಾನದ ತಿಳುವಳಿಕೆಗೆ ಅವಶ್ಯಕ, ಆದ್ದರಿಂದ ಈ ಮಾನದ ಎಣಿಕೆಯ ಪದ್ಧತಿಯನ್ನು ಮುಂದಿನ ಲೇಖನಗಳಲ್ಲಿ ಹೇಳಲಿದ್ದೇನೆ, ಪ್ರಸಕ್ತ ನಾವು ಸುಲಭವಾದ ಮನುಷ್ಯಮಾನವನ್ನು ನೋಡೋಣ. == ನಾಲ್ಕು(೪)ಯುಗಗಳು == ಯುಗ ಪ್ರಾರಂಭಸಂಧಿ + ನಿಜವರ್ಷ + ಅಂತ್ಯಸಂಧಿ = ಒಟ್ಟು ಕೃತಯುಗ 144000+1440000+144000 = 1728000 ತ್ರೇತಾಯುಗ 108000+1080000+108000 = 1296000 ದ್ವಾಪರಯುಗ 72000+720000+72000 = 864000 ಕಲಿಯುಗ 36000+360000+36000 = 432000 ೧.ಕೃತಯುಗ ಅಥವಾ ಸತ್ಯ ಯುಗ-ಈ ಕಾಲದಲ್ಲಿ ಧರ್ಮ ನಾಲ್ಕೂ(೪) ಕಾಲುಗಳ ಮೇಲೆ ನಿಂತಿತ್ತು. ೨.ತ್ರೇತಾಯುಗ-ಈ ಕಾಲದಲ್ಲಿ ಧರ್ಮ ಮೂರು(೩) ಕಾಲುಗಳ ಮೇಲೆ ನಿಂತಿತ್ತು. ೩.ದ್ವಾಪರಯುಗ-ಈ ಕಾಲದಲ್ಲಿ ಧರ್ಮ ಎರಡು(೨) ಕಾಲುಗಳ ಮೇಲೆ ನಿಂತಿತ್ತು. ೪.ಕಲಿಯಗ-ಈ ಕಾಲದಲ್ಲಿ ಧರ್ಮ ಒಂದು(೧) ಕಾಲ ಮೇಲೆ ನಿಂತಿದೆ. ತ್ರೇತಾಯುಗವು ಮಹಾಭಾರತ ನಡೆದ ದ್ವಾಪರಯುಗಕ್ಕಿಂತಲೂ ಹಿಂದಿನದು. == ಇವನ್ನೂ ನೋಡಿ == ರಾಮ ರಾಮಾಯಣ ಮಹಾಭಾರತ ದ್ವಾಪರಯುಗ ಕಲಿಯುಗ