ದುಶಾಂಬೆ (ತಾಜಿಕ್ ಭಾಷೆ:Душанбе; ೧೯೨೯ರವರೆಗೆ ದ್ಯುಶಾಂಬೆ, ೧೯೬೧ರವರೆಗೆ ಸ್ಟಾಲಿನಾಬಾದ್ ), ತಾಜಿಕಿಸ್ಥಾನ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ಹಾಗು ಪ್ರಮುಖ ನಗರ. ಇದರ ಜನಸಂಖ್ಯೆ ೬೭೯,೪೦೦(೨೦೦೮ ಅಂದಾಜು). ದುಶಾಂಬೆ ಎಂದರೆ ತಾಜಿಕ್ ಭಾಷೆಯಲ್ಲಿ ಸೋಮವಾರ ಎಂದು ಅರ್ಥ. ಸೋಮವಾರದಂದು ಈ ನಗರದಲ್ಲಿ ನಡೆಯುತ್ತಿದ್ದ ಜಾತ್ರೆಯಿಂದಾಗಿ ದುಶಾಂಬೆ ಎಂದು ಹೆಸರಿಸಲಾಗಿದೆ. == ಉಲ್ಲೇಖಗಳು == == ಹೊರಗಿನ ಸಂಪರ್ಕಗಳು == ದುಶಾಂಬೆ ಮಾರ್ಗದರ್ಶಿ 2001-06-16 ವೇಬ್ಯಾಕ್ ಮೆಷಿನ್ ನಲ್ಲಿ. ಎನ್ಸೈಕ್ಲೋಪೀಡಿಯ ಇರಾನಿಕಾದಲ್ಲಿ ದುಶಾಂಬೆ 2012-01-12 ವೇಬ್ಯಾಕ್ ಮೆಷಿನ್ ನಲ್ಲಿ. ವಿಕಿಟ್ರಾವೆಲ್‌ನಲ್ಲಿ ದುಶಾಂಬೆ