ದೃಢನಿಶ್ಚಯವು (ಛಲ) ಒಂದು ಧನಾತ್ಮಕ ಭಾವನೆಯಾಗಿದ್ದು, ಅಡೆತಡೆಗಳ ಹೊರತಾಗಿಯೂ ಒಂದು ಕಷ್ಟಕರ ಗುರಿಯತ್ತ ಪಟ್ಟು ಹಿಡಿದು ಮುಂದುವರಿಯುವ ಕೌಶಲ್ಯವನ್ನು ಒಳಗೊಂಡಿರುತ್ತದೆ. ದೃಢನಿಶ್ಚಯವು ಗುರಿ ಸಾಧನೆಯ ಮೊದಲು ಅಸ್ತಿತ್ವದಲ್ಲಿರುತ್ತದೆ ಮತ್ತು ಒಬ್ಬರ ಗುರಿಯನ್ನು ಸಾಧಿಸಲು ನೆರವಾಗಬಲ್ಲ ವರ್ತನೆಯನ್ನು ಪ್ರೇರೇಪಿಸುವ ಕಾರ್ಯನಿರ್ವಹಿಸುತ್ತದೆ. ಜನರು ದೃಢನಿಶ್ಚಯವನ್ನು ಒಂದು ಭಾವನೆಯೆಂದು ಪರಿಗಣಿಸುತ್ತಾರೆ ಎಂದು ಅನುಭವಾತ್ಮಕ ಸಂಶೋಧನೆಯು ಸೂಚಿಸುತ್ತದೆ; ಬೇರೆ ರೀತಿಯಲ್ಲಿ ಹೇಳುವುದಾದರೆ, ದೃಢನಿಶ್ಚಯವು ಕೇವಲ ಅರಿವು ಸಂಬಂಧಿ ಸ್ಥಿತಿಯಲ್ಲ, ಬದಲಾಗಿ ಭಾವಾತ್ಮಕ ಸ್ಥಿತಿಯಾಗಿರುತ್ತದೆ. ಮನೋವಿಜ್ಞಾನದ ಸಾಹಿತ್ಯದಲ್ಲಿ, ಸಂಶೋಧಕರು ದೃಢನಿಶ್ಚಯವನ್ನು ಸವಾಲು ಮತ್ತು ನಿರೀಕ್ಷಣಾತ್ಮಕ ಉತ್ಸಾಹ ಸೇರಿದಂತೆ, ಇತರ ಪದಗಳಡಿ ಅಧ್ಯಯನ ಮಾಡಿದ್ದಾರೆ; ಇದು ಇತರ ಧನಾತ್ಮಕ ಭಾವನೆಗಳಿಗೆ ಹೋಲಿಸಿದರೆ ದೃಢನಿಶ್ಚಯದ ಬಗ್ಗೆ ಸಂಶೋಧನೆಯ ತುಲನಾತ್ಮಕ ಕೊರತೆಯ ಒಂದು ಕಾರಣವನ್ನು ವಿವರಿಸಬಹುದು. == ಉಲ್ಲೇಖಗಳು ==