ದೃಷ್ಟಿರೇಖೆ ಎಂದರೆ ನೇರರೇಖೆಯಲ್ಲಿ ಯಾವುದೇ ಅಡಚಣಗಳಿಲ್ಲದೆ, ಕಣ್ಣಿಗೆ ಕಾಣುವಂತೆ ಇರುವುದು. ವಿದ್ಯುದಯಸ್ಕಾಂತೀಯ ಅಲೆಗಳು ಪಸರಿಸುವ ಒಂದು ವಿಧಕ್ಕೆ ದೃಷ್ಟಿರೇಖೆ ಪ್ರಸರಣ ಎಂದು ಕರೆಯಲಾಗುತ್ತದೆ. ವಿದ್ಯುದಯಸ್ಕಾಂತೀಯ ಅಲೆಗಳು ವಾತಾವರಣದಲ್ಲಿ ಸಾಗುವ ಹಾದಿಯಲ್ಲಿ ಅಡಚಣೆಗಳಿದ್ದರೆ ಈ ಅಲೆಗಳು ಪ್ರತಿಫಲನ ಅಥವಾ ಹೀರುವಿಕೆಗೊಳಗಾಗುತ್ತವೆ. ಇದರಿಂದಾಗಿ ದಿಗಂತದಿಂದಾಚೆಗೆ ಅವುಗಳ ಪ್ರಸರಣ ಸಾಧ್ಯವಾಗುವುದಿಲ್ಲ. ರೇಡಿಯೋ ಅಲೆಗಳು ಎಲ್ಲಾ ವಿದ್ಯುದಯಸ್ಕಾಂತೀಯ ಅಲೆಗಳಂತೆ ನೇರ ರೇಖೆಗಳಲ್ಲಿ ಸಾಗುತ್ತವೆ. ಅಲ್ಪ ತರಂಗಗಳ (, , ) ಅಲೆಗಳು ಭೂಮಿಯ ಮೇಲ್ಮೈಯನ್ನು ಸವರಿಕೊಂಡು ಪಯಣಿಸುತ್ತವೆ. ಉಚ್ಚ ತರಂಗಗಳ ()ಅಲೆಗಳು ವಾಯುಮಂಡಲಕ್ಕೆ ಬಡಿದು ಪ್ರತಿಫಲನಕ್ಕೊಳಕ್ಕಾಗಿ ಹಿಂದಿರುಗುತ್ತವೆ. ಆದರೆ ಅತಿ ಉಚ್ಚ ತರಂಗಗಳು (, ) ನೇರರೇಖೆಯಲ್ಲಿ ಸಾಗುತ್ತವೆ. ಪ್ರೇಷಕ ಹಾಗೂ ಅಭಿಗ್ರಾಹಕದ ನಡುವೆ ಯಾವುದೇ ಅಡಚಣೆಗಳಿದ್ದರೆ ಈ ಅಲೆಗಳು ಮುಂದೆ ಪಯಣಿಸಲು ಅಸಾಧ್ಯವಾಗುತ್ತದೆ.