ದೇರಳಕಟ್ಟೆ, ಭಾರತದ, ಕರ್ನಾಟಕ ರಾಜ್ಯದ, ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ಹೊರವಲಯದಲ್ಲಿರುವ ಒಂದು ಚಿಕ್ಕ ಹಳ್ಳಿ. ಈ ಹಳ್ಳಿಯು ಒಂದು ಸಣ್ಣ ಜನಸಂಖ್ಯೆಯೊಂದಿಗೆ ಕೂಡಿದ ಒಂದು ಗುಡ್ಡವಾಗಿತ್ತು. ಈ ಹಳ್ಳಿಯು ಮಂಗಳೂರಿನ ಹೃದಯ ಭಾಗದಿಂದ ಮಂಗಳೂರು ವಿಶ್ವವಿದ್ಯಾನಿಲಯ, ಕೊಣಾಜೆಗೆ ಹೊಗುವ ದಾರಿಯಲ್ಲಿ ಇದೆ. ನಿಟ್ಟೆ ಎಜುಕೇಶನ್ ಟ್ರಸ್ಟ್ ಮತ್ತು ಯೆನೆಪೋಯಾ ಸಮೂಹದಂತ ಹಲವಾರು ಶೈಕ್ಷಣಿಕ ಸಂಸ್ಥೆಗಳ ಸಹಾಯದಿಂದ ಈ ಗ್ರಾಮ ನಿಧಾನವಾಗಿ ಒಂದು ಪಟ್ಟಣಕ್ಕೆ ರೂಪಾಂತರಗೊಂಡಿದೆ. ಈ ಹಳ್ಳಿಯು ಈಗ ಮಂಗಳೂರಿನ ಒಂದು ಶಿಕ್ಷಣ ಕೇಂದ್ರವಾಗಿದೆ. == ಉನ್ನತ ಶಿಕ್ಷಣ ಸಂಸ್ಥೆಗಳು == === ನಿಟ್ಟೆ ಎಜುಕೇಶನ್ ಟ್ರಸ್ಟ್ === ನಿಟ್ಟೆ ವಿಶ್ವವಿದ್ಯಾನಿಲಯವು ದೇರಳಕಟ್ಟೆಯಲ್ಲಿರುವ ಒಂದು ಪರಿಗಣಿತ ವಿಶ್ವವಿದ್ಯಾನಿಲಯವಾಗಿದೆ. ಈ ಸಂಸ್ಥೆಯು ನಿಟ್ಟೆ ವಿಶ್ವವಿದ್ಯಾನಿಲಯ ಟ್ರಸ್ಟಿನ ಅಡಿಯಲ್ಲಿ ಸ್ಥಾಪಿಸಲಾಗಿದೆ. ನಿಟ್ಟೆ ವಿಶ್ವವಿದ್ಯಾನಿಲಯ ಟ್ರಸ್ಟನ್ನು, ನಿಟ್ಟೆ ಎಜುಕೇಶನ್ ಟ್ರಸ್ಟ್ ಪ್ರಾಯೋಜಿಸಿದೆ. ಈ ಟ್ರಸ್ಟ್ 31 ಸಂಸ್ಥೆಗಳನ್ನು ನಿಟ್ಟೆಯ 3 ಕ್ಯಾಂಪಸ್ ಹಾಗು ಮಂಗಳೂರು ಮತ್ತು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ. ದೇರಳಕಟ್ಟೆ ನಿಟ್ಟೆ ವಿಶ್ವವಿದ್ಯಾನಿಲಯದ ಸಂಸ್ಥೆಗಳು ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯು ಎಂದೂ ಕರೆಯಲ್ಪಡುತ್ತದೆ. ಎ.ಬಿ ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜು. ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ. ನಿಟ್ಟೆ ಉಷಾ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್. ನಿಟ್ಟೆ ಆರ್ಕಿಟೆಕ್ಚರ್ ಕಾಲೇಜು. === ಯೆನಪೊಯಾ ವಿಶ್ವವಿದ್ಯಾಲಯ === ಯೆನಪೊಯಾ ವಿಶ್ವವಿದ್ಯಾನಿಲಯವು ಯು.ಜಿ.ಸಿ ಕಾಯಿದೆ, 1956 ರ ಸೆಕ್ಷನ್ 3 ರಡಿಯಲ್ಲಿ ವಿಶ್ವವಿದ್ಯಾಲಯವೆಂದು ಘೋಷಿಸಲ್ಪಟ್ಟಿದೆ . ಈ ವಿಶ್ವವಿದ್ಯಾನಿಲಯಕ್ಕೆ ನಿಂದ '' ಶೇಣಿಯ ಮಾನ್ಯತೆ ಪಡೆದಿದೆ. ಈ ವಿಶ್ವವಿದ್ಯಾನಿಲಯವು ೨೦೦೮ ರಲ್ಲಿ ಸ್ಥಾಪಿಸಲಾಯಿತು. ದೇರಳಕಟ್ಟೆ ಯುನಪೊಯಾ ವಿಶ್ವವಿದ್ಯಾನಿಲಯದ ಸಂಸ್ಥೆಗಳು ಯೆನಪೊಯಾ ಮೆಡಿಕಲ್ ಕಾಲೇಜು. ಯೆನಪೊಯಾ ದಂತ ವೈದ್ಯಕಿಯ ಕಾಲೇಜು ಮತ್ತು ಆಸ್ಪತ್ರೆ. ಯನಪೊಯಾ ಫಿಸಿಯೋಥೆರಪಿ ಕಾಲೇಜು. ಯೆನಪೊಯಾ ನರ್ಸಿಂಗ್ ಕಾಲೇಜು. ಯೆನಪೊಯಾ ಸೆಂಟರ್ ಫಾರ್ ಎಥಿಕ್ಸ್. === ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ === ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಯ ಒಂದು ಸಂಸ್ಥೆಯಾಗಿದೆ. ಈ ಕಾಲೇಜಿಗೆ ನಿಂದ '' ಶೇಣಿಯ ಮಾನ್ಯತೆ ಪಡೆದಿದೆ. === ಕಣಚೂರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ === ಕಣಚೂರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಕಣಚೂರು ಇಸ್ಲಾಮಿಕ್ ಶಿಕ್ಷಣದ ಒಂದು ಸಂಸ್ಥೆಯಾಗಿದೆ. ಕಣಚೂರು ನರ್ಸಿಂಗ್ ಕಾಲೇಜು, ಕಣಚೂರು ಫಿಸಿಯೋಥೆರಫಿ ಕಾಲೇಜು. ಕಣಚೂರು ಫಾರಮೆಡಿಕಲ್ ಕಾಲೇಜು. ಕಣಚೂರು ಪದವಿ ಕಾಲೇಜು ಕಣಚೂರು ಸಿಬಿಎಸ್ಇ ಶಾಲೆ. == ಉಲ್ಲೇಖಗಳು == == ಬಾಹ್ಯಕೊಂಡಿಗಳು == ನಿಟ್ಟೆ ಎಜುಕೇಶನ್ ಟ್ರಸ್ಟ್ ಯೆನಪೊಯ ವಿಶ್ವವಿದ್ಯಾನಿಲಯ 2018-03-22 ವೇಬ್ಯಾಕ್ ಮೆಷಿನ್ ನಲ್ಲಿ. ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕಣಚೂರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ