ದೇವಗಣಿಗಲು(ಗೋ ಸಂಪಿಗೆ) ಸಣ್ಣಪ್ರಮಾಣದ ಅಂಕು ಡೊಂಕು ಮರ. ಪರ್ಣಪಾತಿ ಮರ. ಅಮೆರಿಕ ಖಂಡದ ಉಷ್ಣವಲಯ ಪ್ರದೇಶ ಇದರ ತವರು. ಬಾಂಗ್ಲಾದೇಶದ ಸಂಸ್ಕೃತಿಯಲ್ಲಿ ಇದರ ಬಿಳಿ ಹೂಗಳು ಅಂತ್ಯಕ್ರಿಯೆಯ ಭಾಗವಾಗಿದೆ. ಇದು ನಿಕಾರಾಗುವ ದೇಶದ ರಾಷ್ಟ್ರೀಯ ಲಾಂಛನವಾಗಿದೆ. == ಸಸ್ಯಶಾಸ್ತ್ರೀಯ ವರ್ಗೀಕರಣ == ಇದು ಅಪೋಸಿನಾಸಿ ಕುಟುಂಬಕ್ಕೆ ಸೇರಿದೆ. ಇದರಲ್ಲಿ ಹಲವಾರು ಪ್ರಬೇಧಗಳಿದ್ದು, ಪ್ಲುಮೇರಿಯ ರುಬ್ರ, ಪ್ಲುಮೇರಿಯ ಅಲ್ಬ ಮುಂತಾದವು ಭಾರತದಲ್ಲಿ ಅಲ್ಲಲ್ಲಿ ಕಂಡು ಬರುತ್ತದೆ. == ಸಸ್ಯದ ಗುಣಲಕ್ಷಣಗಳು == ಸಣ್ಣಪ್ರಮಾಣದ ಅಂಕುಡೊಂಕು ಮರ. ಊತವಾದಂತೆ ಕಾಣುವ ರೆಂಬೆಗಳು. ಅಂದವಾದ ಹೂವುಗಳು. == ಉಪಯೋಗಗಳು == ಇದನ್ನು ಹೆಚ್ಚಾಗಿ ಅಲಂಕಾರಕ್ಕಾಗಿ ಬೆಳೆಸುತ್ತಾರೆ. ಗ್ರಾಮದ ತೋಪುಗಳಲ್ಲಿ, ದೇವಾಲಯಗಳ ಆಸುಪಾಸು ಬೆಳೆಸುತ್ತಾರೆ. == ಆಧಾರ == ೧.ವನಸಿರಿ:ಅಜ್ಜಂಪುರ ಕೃಷ್ಣಮೂರ್ತಿ == ==