ದೇವಪ್ರಯಾಗ ಭಾರತದ ಉತ್ತರಾಖಂಡ ರಾಜ್ಯದ ಟಿಹ್ರಿ ಗಢ್‌ವಾಲ್ ಜಿಲ್ಲೆಯಲ್ಲಿನ ಒಂದು ಪಟ್ಟಣ. ರಿಷಿಕೇಶದಿಂದ ಸುಮಾರು ೭೦ ಕಿ.ಮೀ. ದೂರದಲ್ಲಿರುವ ದೇವಪ್ರಯಾಗವು ಭಾಗೀರಥಿ ಮತ್ತು ಅಲಕನಂದಾ ನದಿಗಳ ಸಂಗಮಸ್ಥಾನವಾಗಿದೆ. ಈ ಸ್ಥಳದಿಂದ ಮುಂದೆ ನದಿಯು ಗಂಗಾನದಿ ಎಂಬ ಹೆಸರು ಪಡೆದಿದೆ. ದೇವಪ್ರಯಾಗವು ಹಿಮಾಲಯದ ಐದು ಪವಿತ್ರ ಸಂಗಮಕ್ಷೇತ್ರಗಳಲ್ಲಿ ಒಂದಾಗಿದ್ದು ಹಿಂದೂ ಧರ್ಮೀಯರು ಇದನ್ನು ಪಾವನಕ್ಷೇತ್ರವೆಂದು ಪರಿಗಣಿಸುತ್ತಾರೆ. ಇತರ ನಾಲ್ಕು ಪ್ರಯಾಗಗಳೆಂದರೆ ರುದ್ರಪ್ರಯಾಗ, ಕರ್ಣಪ್ರಯಾಗ, ನಂದಪ್ರಯಾಗ ಮತ್ತು ವಿಷ್ಣುಪ್ರಯಾಗ. == ಬಾಹ್ಯ ಸಂಪರ್ಕಗಳು == , 2007-12-10 ವೇಬ್ಯಾಕ್ ಮೆಷಿನ್ ನಲ್ಲಿ.