ಕನ್ನಡದ ಅಭಿಜಾತ ಖಳನಟ ದೇವರಾಜ್‌ 1960ನೇ ಇಸವಿ ಸೆಪ್ಟಂಬರ್‌ 20ರಂದು ಬೆಂಗಳೂರಿನ ಲಿಂಗರಾಜಪುರಂನಲ್ಲಿ ಜನಿಸಿದರು. ಇವರು ರಂಗಭೂಮಿಯ ನಂಟಿನಿಂದ ಚಿತ್ರರಂಗಕ್ಕೆ ಬಂದ ಕಲಾವಿದ. ಪ್ರಾರಂಭದಲ್ಲಿ ಬಿ ಜಯಶ್ರೀ ಅವರ "ಸ್ಪಂದನ" ರಂಗ ತಂಡದಲ್ಲಿದ್ದು ಬಳಿಕ ಶಂಕರನಾಗ್‌ ಅವರ "ಸಂಕೇತ್‌" ಕಲಾತಂಡದ ಸದಸ್ಯರಾದರು. ಎಚ್‌ಎಮ್‌ಟಿಯಲ್ಲಿ ಉದ್ಯೋಗಿಯಾಗಿದ್ದ ದೇವರಾಜ್‌ "ತ್ರಿಶೂಲ" ಚಿತ್ರದ ಮೂಲಕ ಖಳನಟರಾಗಿ ಬೆಳ್ಳಿ ಪರದೆಗೆ ಎಂಟ್ರಿ ಪಡೆದರು. ಆದರೆ ದೇವರಾಜ್‌ ನಟನೆಯಲ್ಲಿ ಬಿಡುಗಡೆಯಾದ ಪ್ರಥಮ ಚಿತ್ರ "27 ಮಾವಳ್ಳಿ ಸರ್ಕಲ್‌". ಇದು 1986ರಲ್ಲಿ ತೆರೆಗೆ ಬಂತು. ತನ್ನ ವಿಶಿಷ್ಟ ಹಾವ-ಭಾವ, ತೆರೆಯ ಮೇಲೆ ಖಳಪಾತ್ರಗಳಿಗೆ ಮೆರುಗು ನೀಡುವ ವಿಕೃತ ನಗು, ಅದಕ್ಕೆ ಸರಿಯಾಗಿ ಭೀತಿ ಹುಟ್ಟಿಸುವ ಮುಖಚರ್ಯೆ ಇವೆಲ್ಲದರ ಮೂಲಕ ಮೇರು ಖಳನಟ ವಜ್ರಮುನಿಯವರ ಗೆಟಪ್‌ಗೆ ಹೊಂದಿಕೆಯಾಗುತ್ತಿದ್ದ ದೇವರಾಜ್‌ 1980ರ ದಶಕದಲ್ಲಿ ಕನ್ನಡ ಚಿತ್ರರಸಿಕರ ಪಾಲಿನ ನೆಚ್ಚಿನ ಖಳನಟರಾದರು. ನಂತರ 1989 ರಲ್ಲಿ ಖಳನಟನ ಪಾತ್ರದಿಂದ ನಾಯಕ ನಟನ ಪಾತ್ರಕ್ಕೆ ಬಡ್ತಿ ಸಿಕ್ಕಿತು. ಲಾಕಪಡೇತ್, ಇಂದ್ರಜೀತ್ ಇಮೇಜ್ ತಂದುಕೊಟ್ಟಿತು ಆದರೆ ಪೂರ್ವಾದದಲ್ಲಿ (1989) ರಲ್ಲಿ 'ಹತ್ಯಾಕಾಂಡ' ಎಂಬ ಚಿತ್ರದಲ್ಲಿ ಪ್ರಪ್ರಥಮ ಬಾರಿಗೆ ನಾಯಕ ನಟನ ಪಾತ್ರ ಮಾಡಿದ್ದರು. ದೇವರಾಜ್‌ ಆರಂಭದಲ್ಲಿ ಖಳಪಾತ್ರಗಳಲ್ಲಿ ಮಿಂಚತೊಡಗಿದರೆ ಜೊತೆಜೊತೆಯಲ್ಲಿ ಪೊಲೀಸ್‌ ಪಾತ್ರಗಳೂ ಅವರನ್ನು ಹುಡುಕಿಕೊಂಡು ಬರಲಾರಂಭಿಸಿದವು. ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಪೊಲೀಸ್‌ ಪಾತ್ರಗಳು ದೇವರಾಜ್‌ ಅವರಿಗೆ ಖಾಯಂ ಆಗತೊಡಗಿದ ಉದಾಹರಣೆಗಳೂ ಸಿಗುತ್ತವೆ. ಲಾಕಪ್‌ಡೆತ್‌, ಗೋಲಿಬಾರ್‌, ಗ್ಯಾಂಗ್‌ ಲೀಡರ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ ಇವಿತ್ಯಾದಿಗಳು ದೇವರಾಜ್‌ ಅವರಿಗೆ ಹೆಸರು ತಂದುಕೊಟ್ಟ ಮತ್ತು ತಮ್ಮದೇ ಆದ ಅಭಿಮಾನಿ ಬಳಗ ಸೃಷ್ಟಿಯಾಗಲು ಕಾರಣವಾದ ಕೆಲವು ಪ್ರಮುಖ ಚಿತ್ರಗಳಾಗಿವೆ. ಕಾಡುಗಳ್ಳ ವೀರಪ್ಪನ್‌ ಕುರಿತಾಗಿ ಬಂದ "ವೀರಪ್ಪನ್‌" ಚಿತ್ರ ದೇವರಾಜ್‌ ಅವರ ಚಿತ್ರ ಜೀವನದಲ್ಲಿ ಪ್ರಮುಖವಾದುದಾಗಿದೆ. ದಂತಚೋರ ಜೀವಂತವಾಗಿದ್ದಾಗಲೇ ತೆರೆಕಂಡ ಈ ಚಿತ್ರ ಆ ದಿನಗಳಲ್ಲಿ ಬಹಳ ಸುದ್ದಿಗೆ ಕಾರಣವಾಗಿತ್ತು. ವೀರಪ್ಪನ್‌ ಚಿತ್ರದಲ್ಲಿನ ನಟನೆಗಾಗಿ ದೇವರಾಜ್‌ ಆ ಸಾಲಿನ ಉತ್ತಮ ನಟ ರಾಜ್ಯಪ್ರಶಸ್ತಿಗೂ ಪಾತ್ರರಾಗಿದ್ದರು. ದೇವರಾಜ್‌ ಅವರೊಳಗಿದ್ದ ನಟನಾ ಪ್ರತಿಭೆಯನ್ನು ಇನ್ನಷ್ಟು ಒರೆಗೆ ಹಚ್ಚಿದ ಚಿತ್ರಗಳೆಂದರೆ, ಕಂಬಾರಪಳ್ಳಿ, ಹುಲಿಯಾ, ಬಂಗಾರದ ಮನೆ, ಉತ್ಕರ್ಷ ಇತ್ಯಾದಿ. 2000ನೇ ಇಸವಿ ಬಳಿಕ ದೇವರಾಜ್‌ ಹೆಚ್ಚು ಹೆಚ್ಚು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದರು. ಇದೇ ಸಮಯದಲ್ಲಿ ಅವರು ತೆಲುಗು, ತಮಿಳು ಚಿತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡರು. ಡಾ. ವಿಷ್ಣುವರ್ಧನ್ ಅವರ ಚಿತ್ರಗಳಲ್ಲಿ ದೇವರಾಜ್‌ ಅವರಿಗೆ ಒಂದು ಪಾತ್ರ ಮೀಸಲಾಗಿರುತ್ತಿತ್ತು.ಹುಲಿಯಾ ಚಿತ್ರದಲ್ಲಿ ದೇವರಾಜ್ ಅವರ ಅಭಿನಯ ಕಂಡು ಸ್ವತಃ ವಿಷ್ಣುವರ್ಧನ್ ಅಚ್ಚರಿಪಟ್ಟು ಬೆನ್ನುತಟ್ಟಿದ್ದನ್ನು ಇಂದಿಗೂ ದೇವು ನೆನಪಿಸಿಕೊಳ್ಳುತ್ತಾರೆ. ಇದೀಗ ಅವರ ಪುತ್ರ ಪ್ರಜ್ವಲ್‌ ದೇವರಾಜ್‌ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡುತ್ತಿದ್ದಾರೆ. ಕನ್ನಡದ ಅಭಿಜಾತ ಕಲಾವಿದ, ನಮ್ಮೆಲ್ಲರ ಪಾಲಿನ ಪ್ರೀತಿಯ ದೇವು ಅವರ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನ ಉನ್ನತಕ್ಕೇರಲಿ ಎಂಬುದಾಗಿ ಶುಭ ಹಾರೈಕೆ. === ನಟಿಸಿದ ಚಿತ್ರಗಳು === (2016) ಸುಂದರಾಂಗ ಜಾಣ (2016) ಸಂತು ಸ್ಟ್ರೇಟ್ ಫಾರ್ವರ್ಡ್ (2016) ಮುಕುಂದ ಮುರಾರಿ 2 (2016) ಕೋಟಿಗೊಬ್ಬ 2 (2016) ಪ್ರೀತಿಯಲ್ಲಿ ಸಹಜ (2016) ನಿತ್ಯ ಜೊತೆ ಸತ್ಯ (2016) ರನ್ ಆಂಟೋನಿ (2016) ಕರ್ವ (2015) ರನ್ನ (2015) ಅರ್ಜುನ (2013) ಕಾವೇರಿ ನಗರ (2012) ದಶಮುಖ (2011) ಜರಾಸಂಧ (2011) ಆಚಾರ್ಯ (2011) ಐದೊಂದ್ಲ ಐದು (2011) ಪಂಚಾಮೃತ . (2011) ಮಿಸ್ಟರ್ ಡೂಪ್ಲಿಕೇಟ್ (2011) ಚಿನ್ನದ ತಾಳಿ (2011) ಜಾಲಿ ಬಾಯ್ -2 (2010) ಡೆಡ್ಲಿ-2 (2010) ಗ್ಯಾಂಗ್ ಲೀಡರ್ (2010) ಗಂಡೆದೆ (2010) ಮೇಷ್ಟ್ರು (2010) ಅಪರಾಧಿ (2010) ಪೊರ್ಕಿ (2010) ಸ್ಕೂಲ್ ಮಾಸ್ಟರ್ (2010) ಅನಿಶ್ಚಿತ 300 (2009) ಐಪಿಸಿ ಸೆಕ್ಷನ್ 300 (2009) ಈ ಶತಮಾನದ ವೀರ ಮದಕರಿ (2008) ನಂದಾ ದೀಪ (2008) ಪ್ರಚಂಡ ರಾವಣ (2008) ಗಜ (2007) ಭಾನಾಮತಿ (2006) ಕಲ್ಲರಳಿ ಹೂವಾಗಿ (2006) ಪಾಂಡವರು (2006) ಚೆಲ್ಲಾಟ (2006) ನಿಧಿ (2005) ಡೆಡ್ಲಿ ಸೋಮ (2004) ಜ್ಯೇಷ್ಟ (2004) ಮೌರ್ಯ (2004) ಗೌಡ್ರು (2004) ಕ್ರೈಂ ಸ್ಟೋರಿ (2004) ದೇವಾಸುರ (2004) ಅವಳೇ ನನ್ನ ಗೆಳತಿ (2003) ಖಾಕಿ (2003) ಇನ್ಸ್ಪಕ್ಟರ್ ಜಯಸಿಂಹ (2003) ಮಾರ್ಕೆಟ್ ರಾಜಾ (2003) ತಲ್ವಾರ್ (2003) ಪ್ರತಿಧ್ವನಿ (2003) ಟಾಡಾ ಕೈದಿ (2003) ಲಂಕೇಶ್ ಪತ್ರಿಕೆ (2003) ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ (2003) ಏಯ್ ನಾನ್ ಭೀಷ್ಮ ಕಣೋ (2002) ಕಂಬಾಲ ಹಳ್ಳಿ (2002) ಧರ್ಮ ದೇವತೆ (2001) ಹಾಲು ಸಕ್ಕರೆ (2001) ನೀಲಾಂಬರಿ (2001) ಕೋಟಿಗೊಬ್ಬ (2001) ಸತ್ಯಮೇವ ಜಯತೆ (2001) ಕಾನೂನು (2001) ಜೇನು ಗೂಡು (2001) ಪ್ರೇಮ ರಾಜ್ಯ (2001) ಮತದಾನ (2000) ನಕ್ಸಲೈಟ್ (2000) ಬಣ್ಣದ ಹೆಜ್ಜೆ (2000) ಬಿಲ್ಲಾ ರಂಗಾ (2000) ಭೂಮಿ (2000) ಅಸ್ತ್ರ (2000) ದಂಡನಾಯಕ (2000) ಮಿಂಚು (1999) ಓಂ ಶಕ್ತಿ (1999) ದುರ್ಗಾ ಶಕ್ತಿ (1999) ಆರ್ಯಭಟ (1999) ಗರುಡ (1999) ಹಬ್ಬ . (1999) ಮಿಸ್ಟರ್ ಎಕ್ಸ್ (1999) ತರೀಕೆರೆ ಏರಿಮೇಲೆ (1998) ಕರ್ನಾಟಕ ಪೊಲೀಸ್ (1998) ದಾಯಾದಿ (1998) ಅಗ್ನಿ ಸಾಕ್ಷಿ (1998) ಜೈ ಹಿಂದ್ (1998) ಹೈಕಮಾಂಡ್ ಮಾನವ 2022 (1997) ಸಾಂಗ್ಲಿಯಾನ ಭಾಗ-3 (1997) (1997) ಯುದ್ಧ (1997) ಗಂಡೆದೆ ಭೈರ (1997) ಛೂ ಬಾಣ (1996) ಕೆಂಪು ಮುಗಿಲು (1996) ಬಂಗಾರದ ಮನೆ (1996) ಸಿಂಹಾದ್ರಿ (1996) ಹುಲಿಯಾ (1996) ಸರ್ಕಲ್ ಇನ್ಸ್ಪೆಕ್ಟರ್ (1996) ವೀರಭದ್ರ (1995) ಎಮರ್ಜೆನ್ಸಿ (1995) ರಿವೇಂಜ್ (1995) ಪೊಲೀಸ್ ಪವರ್ (1995) ಸಮರ (1995) ಸ್ಟೇಟ್ ರೌಡಿ (1995) ಮದರ್ ಇಂಡಿಯಾ (1995) ಕಿಲ್ಲರ್ ಡೈರಿ (1995) ಕಿಡ್ನಾಪ್ (1994) ನ್ಯಾಯಕ್ಕಾಗಿ ಸವಾಲ್ (1994) ಇಂಡಿಯನ್ (1994) ಹೆತ್ತ ಕರುಳು (1994) ಕರ್ಫ್ಯೂ (1994) ವಿಜಯ ಕಂಕಣ (1994) ಲಾಕಪ್ ಡೆತ್ (1994) ಮೇಯರ್ ಪ್ರಭಾಕರ್ (1994) ಲೂಟಿ ಗ್ಯಾಂಗ್ (1994) ಗೋಲ್ಡ್ ಮೆಡಲ್ (1994) ಅಧಿಪತಿ (1994) ಟೈಂ ಬಾಂಬ್ (1993) ಹೊಸ ಲವ್ ಸ್ಟೋರಿ (1993) ಜೈಲರ್ ಜಗನ್ನಾಥ್ (1993) ಮೋಜಿನ ಮದುವೆ (1993) ವಿಜಯ ಕ್ರಾಂತಿ (1993) ಗೋಲಿಬಾರ್ (1993) ಆಭಿಜಿತ್ (1993) ಸಿಡುಕಬೇಡ ಸಿಂಗಾರಿ (1993) ರಾಜಕೀಯ (1993) ಬಹದ್ದೂರ್ ಹೆಣ್ಣು (1992) ಘರ್ಷಣೆ (1992) ಪ್ರಜೆಗಳು ಪ್ರಭುಗಳು (1992) ರೋಷಗಾರ (1992) ಭಲೇ ಕೇಶವ (1992) ಪೊಲೀಸ್ ಫೈಲ್ (1992) ನನ್ನ ತಂಗಿ (1992) ಗೂಂಡಾ ರಾಜ್ಯ (1992) ಪೃಥ್ವಿರಾಜ್ (1992) ಚಿತ್ರಲೇಖ (1991) ನಾಗಿಣಿ (1991) ಮಾತೃ ಭಾಗ್ಯ (1991) ಗೃಹ ಪ್ರವೇಶ (1991) ವೀರ ಧೀರ (1991) ಶ್ವೇತಾಗ್ನಿ (1991) ಅರಣ್ಯದಲ್ಲಿ ಅಭಿಮನ್ಯು (1991) ವೀರಪ್ಪನ್ (1991) ಎಸ್ಪಿ ಭಾರ್ಗವಿ (1991) ರೋಲ್ಕಾಲ್ ರಾಮಕೃಷ್ಣ (1991) ಇದೇ ಪೊಲೀಸ್ ಬೆಲ್ಟ್ (1991) ಕದನ (1991) ಸುಂದರ ಕಾಂಡ (1990) ಪೋಲಿ ಕಿಟ್ಟಿ (1990) ಕಾಲೇಜ್ ಹೀರೋ (1990) ಉತ್ಕರ್ಷ (1990) ಪ್ರತಾಪ್ (1990) ಪೊಲೀಸ್ನ ಹೆಂಡತಿ (1990) ಬಣ್ಣದ ಗೆಜ್ಜೆ (1990) ಆವೇಶ (1990) ತ್ರಿನೇತ್ರ -2 (1990) ಎಸ್ಪಿ ಸಾಂಗ್ಲಿಯಾನ ಭಾಗ-2 (1990) ರಣಭೇರಿ (1990) ನಮ್ಮೂರ ಹಮ್ಮೀರ (1989) ಪೋಲಿ ಹುಡುಗ (1989) ಇದು ಸಾಧ್ಯ (1989) ಸಿಬಿಐ ಶಂಕರ್ (1989) ಹೆಂಡ್ತಿಗ್ಹೇಳ್ಬೇಡಿ (1989) ದೇವ (1989) ಹತ್ಯಾಕಾಂಡ (1989) ಇಂದ್ರಜಿತ್ (1989) ಅವತಾರ ಪುರುಷ (1989) ಅಮಾನುಷ (1989) ಜಾಕಿ (1989) ಹೃದಯ ಗೀತೆ (1989) ತರ್ಕ (1989) ಯುದ್ಧ ಕಾಂಡ (1988) ಮೀನಾಕ್ಷಿ ಮನೆ ಮೇಷ್ಟ್ರು (1988) ನೀ ನನ್ನ ದೈವ (1988) ದಾದಾ (1988) ಕೃಷ್ಣ ರುಕ್ಮಿಣಿ (1988) ರಾಮಣ್ಣ ಶಾಮಣ್ಣ (1988) ಅಂಜದ ಗಂಡು (1988) ಸಾಂಗ್ಲಿಯಾನ (1988) ಜನ ನಾಯಕ (1988) ಸಂಯುಕ್ತ (1988) ಏಳು ಸುತ್ತಿನ ಕೋಟೆ (1988) ನವ ಭಾರತ (1988) ಸಂಭವಾಮಿ ಯುಗೇ ಯುಗೇ (1988) ಅರ್ಜುನ್ (1987) ಆಪತ್ಬಾಂಧವ (1987) ಸಂಗ್ರಾಮ (1987) ಬಂಧ ಮುಕ್ತ (1987) ಡ್ಯಾನ್ಸ್ ರಾಜಾ ಡ್ಯಾನ್ಸ್ (1987) ಕೆಂಡದ ಮಳೆ (1987) ರಾವಣ ರಾಜ್ಯ (1987) ಅಂತಿಮ ತೀರ್ಪು (1987) ಆಗಂತುಕ (1986) ಪ್ರೀತಿ 27 (1986) ಮಾವಳ್ಳಿ ಸರ್ಕಲ್ (1985) ತ್ರಿಶೂಲ