ದೊಡ್ಡಣ್ಣ (ಜನನ ೧೫ ನವೆಂಬರ್ ೧೯೪೯) ಸುಮಾರು ೫೦೦ ಚಿತ್ರಗಳಲ್ಲಿ ಅಭಿನಯಿಸಿದ್ದ ಕನ್ನಡ ಚಲನಚಿತ್ರೋದ್ಯಮದಲ್ಲಿ ಭಾರತೀಯ ನಟ. ಅವರು ತಮ್ಮ ವೃತ್ತಿಜೀವನವನ್ನು ರಂಗಭೂಮಿ ನಟನಾಗಿ ಪ್ರಾರಂಭಿಸಿದರು. ಈ ಸಮಯದಲ್ಲಿ ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಪಾತ್ರ ನಟನಾಗಿ ಪ್ರವೇಶಿಸಿದರು. === ಆರಂಭಿಕ ಜೀವನ === ದೊಡ್ಡಣ್ಣ ಅವರು ೧೧ ನವೆಂಬರ್ ೧೯೪೯ ರಂದು ಜನಿಸಿದರು. ಕುಟುಂಬದ ಕಿರಿಯ ಮಗನಿಗೆ ಅವರ ಅಜ್ಜ ಕಡಲೆ ದೊಡ್ಡಪ್ಪ ಎ೦ದು ಹೆಸರಿಡಲಾಗಿದತು. ಅವರು ಭದ್ರಾವತಿಯಲ್ಲಿ ವಿಗ್ನೇಶ್ವರರ ಕಲಾ ಸ೦ಗ ಎ೦ಬವುದರಲ್ಲಿ ತಮ್ಮ ವೃತ್ತಿಜೀವನವನ್ನು ರಂಗಭೂಮಿ ನಟನಾಗಿ ಪ್ರಾರಂಭಿಸಿದರು, ಆ ಸಮಯದಲ್ಲಿ ಅವರು ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡಿದರು. ಇವರು ಗಂಧರ್ವ ರಂಗ ಎಂಬ ಹೆಸರಿನ ರಂಗಭೂಮಿ ತಂಡವನ್ನು ತಮ್ಮ ಸ್ನೇಹಿತರೊಂದಿಗೆ ಪ್ರಾರ೦ಭಿಸಿದರು. ನಂತರ ಅವರು ಕನ್ನಡ ಮತ್ತು ತಮಿಳು ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಿದರು. === ವೃತ್ತಿಜೀವನ === ದೊಡ್ಡಣ್ಣ ಒಬ್ಬ ಬಹುಮುಖ ನಟ. ಅವರು ಖಳನಾಯಕರು, ಪೊಲೀಸ್ ಮತ್ತು ಇತರ ಪಾತ್ರಗಳನ್ನು ಚಿತ್ರಿಸಿದ್ದಾರೆ. ಹಾಸ್ಯ ನಟರಾಗಿ ಇವರು ವಿಶೇಷವಾಗಿ ಯಶಸ್ವಿಯಾಗಿದ್ದಾರೆ. === ಚಲಚಿತ್ರಗಳ ಪಟ್ಟಿ === === ಪ್ರಶಸ್ತಿಗಳು === ಅತ್ಯುತ್ತಮ ಪೋಷಕ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ -೧೯೯೮-೯೯ ಚಿತ್ರ ಟುವ್ವಿ ಟುವ್ವಿ ಟುವ್ವಿ. === ಉಲ್ಲೇಖಗಳು ===