ದ್ವಾರಕೀಶ್ ಎಂಬ ಹೆಸರಿನಿಂದ ಗುರುತಿಸಲ್ಪಡುವ ಬಂಗ್ಲೆ ಶಾಮಾರಾವ್ ದ್ವಾರಕಾನಾಥ (೧೯ ಆಗಸ್ಟ್ ೧೯೪೨ - ೧೬ ಏಪ್ರಿಲ್ ೨೦೨೪) ಕನ್ನಡ ಚಲನಚಿತ್ರ ನಟ, ನಿರ್ದೇಶಕ ಮತ್ತು ನಿರ್ಮಾಪಕ. == ಬಾಲ್ಯ ಮತ್ತು ಶಿಕ್ಷಣ == ದ್ವಾರಕೀಶ್ ಆಗಸ್ಟ್ ೧೯, ೧೯೪೨ರಂದು ಹುಣಸೂರು ನಲ್ಲಿ ಶಾಮರಾವ್ ಮತ್ತು ಜಯಮ್ಮರವರಿಗೆ ಜನಿಸಿದರು. ಶಾರದಾ ವಿಲಾಸ ಮತ್ತು ಬನುಮಯ್ಯ ಶಾಲೆಯಲ್ಲಿ ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ನಂತರ ಪಾಲಿಟೆಕ್ನಿಕ್ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್ ಮುಗಿಸಿದರು. ನಂತರ ಅವರ ಸೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಶುರುಮಾಡಿದರು.೧೯೬೩ರಲ್ಲಿ. ಅವರು ವ್ಯಾಪಾರ ಬಿಟ್ಟು ಸಿನೆಮಾ ನಟನೆಯನ್ನು ಆಯ್ದುಕೊಂಡರು. ಕನ್ನಡದ ಪ್ರಮುಖ ನಟರಾದ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿ ಕಳ್ಳ-ಕುಳ್ಳ ಜೋಡಿ ಎಂದು ಪ್ರಸಿದ್ಧವಾಗಿತ್ತು. == ಚಲನಚಿತ್ರಗಳು == === ನಿರ್ಮಾಪಕರಾಗಿ ಮತ್ತು ನಿರ್ದೇಶಕರಾಗಿ === === ನಟರಾಗಿ (ಪಟ್ಟಿ ಅಪೂರ್ಣ) === == ನಿಧನ == ೧೬ ಏಪ್ರಿಲ್ ೨೦೨೪ರಂದು ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ ೮೧ ವರ್ಷ ವಯಸ್ಸಾಗಿತ್ತು. == ಉಲ್ಲೇಖಗಳು ==