ಧನಾಶ್ರೀ ಒಂದು ಭಾರತೀಯ ಶಾಸ್ತ್ರೀಯ ಪದ್ಧತಿಯ ಸಂಗೀತದ ರಾಗ.ಇದು ಸಂಪ್ರದಾಯದ ಗುರು ಗ್ರಂಥ ಸಾಹಿಬ್‍ನಲ್ಲಿ ಉಲ್ಲೇಖಿತವಾಗಿದೆ. ಗುರು ನಾನಕ್, ಗುರು ಅಮರದಾಸ,ಗುರು ರಾಮದಾಸ, ಗುರು ಅರ್ಜುನ್, ಗುರು ತೇಜ್ ಬಹಾದೂರ್ ಈ ರಾಗದಲ್ಲಿ ೧೦೧ ಸ್ತುತಿಗಳ ರಚನೆಯನ್ನು ಮಾಡಿದ್ದಾರೆ. == ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿ == ರಾಗ ಧನಾಶ್ರೀ ರಾಗಮಾಲಾದಲ್ಲಿ ಮಾಲ್‍ಕೌನ್ಸ್ ರಾಗದ ರಾಗಿಣಿ ಎಂದು ಪರಿಗಣಿತವಾಗಿದೆ. ಇದು ಕಾಫಿ ಥಾಟ್‍ಗೆ ಸೇರಿದ ರಾಗ. ಇದು ರಾಗ ಬೀಮ್‍ಪಲಾಸಿಗೆ ನಿಕಟವಾಗಿ ಹೋಲುತ್ತಿದ್ದರೂ ಇದರ ವಾದಿ ಮತ್ತು ಭಾವ ಭಿನ್ನವಾಗಿದೆ.ಇದು ಮುಸ್ಸಂಜೆಯ ವೇಳೆಯಲ್ಲಿ ಹಾಡಲ್ಪಡುವ ರಾಗ. ಇದರ ಭಾವ ಸಂತೋಷ. == ಆರೋಹ ಮತ್ತು ಅವರೋಹ == ಈ ರಾಗದ ಆರೋಹ ಮತ್ತು ಅವರೋಹಗಳು ಇಂತಿವೆ. ಆರೋಹ: ಸ ಗ ಮ ಪ ನಿ ಸಾ ಅವರೋಹ: ಸ ನಿ ಧ ಪ ಮ ಪ ಗ ರಿ ಸ ವಾದಿ: ಪ ಸಂವಾದಿ: ಸ ಈ ರಾಗದಲ್ಲಿ ಪ ಸ್ವರಕ್ಕೆ ಹೆಚ್ಚಿನ ಒತ್ತು ಕೊಡುತ್ತಾರೆ. ಇದರಲ್ಲಿ ಹಲವಾರು ಮಾಧುರ್ಯಭರಿತ ಹಾಡುಗಳಿವೆ. == ಇದನ್ನೂ ನೋಡಿ == == ಬಾಹ್ಯ ಕೊಂಡಿಗಳು == : [೧]