ಧನುರ್ವಾತ ಬ್ಯಾಕ್ಟೀರಿಯಾದಿಂದ ಹರಡುವ ರೋಗ. ಇದು ಕ್ಲಾಸ್ಟ್ರಿಡಿಯಮ್ ಟೆಟಾನೆ ಹೆಸರಿನ ಬ್ಯಾಕ್ಟೀರಿಯಾ ಉಂಟಾಗುವ ಬ್ಯಾಕ್ಟೀರಿಯ ಸೋಂಕು. ದವಡೆಯ ಸ್ನಾಯು ಸೆಳೆತ ಈ ಕಾಯಿಲೆಯ ಮುಖ್ಯ ಲಕ್ಷಣ. ಸಾಮಾನ್ಯವಾಗಿ ಸೆಳೆತವು ದವಡೆಯಲ್ಲಿ ಪ್ರಾರಂಭವಾಗುತ್ತದೆ ಮತ್ತು ನಂತರ ದೇಹದ ಉಳಿದ ಭಾಗಗಳಿಗೆ ಹರಡುತ್ತದೆ. == ಲಕ್ಷಣಗಳು == ಮೊದಲನೆಯದಾಗಿ ವ್ಯಕ್ತಿಯ ದವಡೆಯ ಮಾಂಸಖಂಡ ಬಿಗಿದುಕೊಂಡು, ಬಾಯಿಯನ್ನು ತೆಗೆಯಲು ಅಶಕ್ತನಾಗುತ್ತಾನೆ. ಯಾರಿಗಾದರೂ ಗಾಯವಿಲ್ಲದೆ ಬಾಯಿ ಸರಿಯಾಗಿ ತೆರೆಯಲಾಗದಿದ್ದಲ್ಲಿ, ಧನುರ್ವಾತದ ಲಕ್ಷಣ ಎಂದು ತಿಳಿಯಬೇಕು. ಬೆನ್ನು,ಹೊಟ್ಟೆ,ಇತರೆ ಮಾಂಸಖಂಡಗಳು ಬಿಗಿದುಕೊಳ್ಳುವವು. ನಾಡಿವೇಗ ಹೆಚ್ಚುವುದು. ಸ್ವಲ್ಪ ಜ್ವರ ಬರುವುದು. ಉಗುಳು-ಬೆವರು ಬರುವುದು. == ಅವಧಿ == ಸಾಮಾನ್ಯವಾಗಿ ೬ರಿಂದ ೧೫ದಿನಗಳ ಒಳಗಾಗಿ ರೋಗದ ಚಿಹ್ನೆಹಗಳು ಕಾಣಿಸಿಕೊಳ್ಳುತ್ತವೆ. ಕಡಿಮೆ ಅವಧಿಯಲ್ಲಿ ಲಕ್ಷಣಗಳು ಗೋಚರವಾದರೆ ರೋಗ ತೀವ್ರವಾಗಿದೆಯಿಂದರ್ಥ. ಮಾಂಸಖಂಡಗಳು ಬಿಗಿದುಕೊಂಡಿರುವು ಸಾಮಾನ್ಯವಾಗಿ ೨-೩ ವಾರದವರೆಗೂಇರೆಬಹುದು' ಒಂದು ತಿಂಗಳಿನತನಕ ಕೆಲವು ಮಾಂಸಖಂಡಗಳು ಬಿಗಿದುಕೊಂಡಿರಬಹುದು. == ಕಾರಣಗಳು == ಎನ್ನುವ ಸೂಕ್ಷ್ಮಜೀವಾಣುಗಳೇ ಇದಕ್ಕೆ ಕಾರಣ == ಜಟಿಲತೆಗಳು == ಶ್ವಾಸಕೋಶಗಳು ಸ್ಥಗಿತವಾಗುವುದು ನ್ಯುಮೋನಿಯಾ == ಮುನ್ನೆಚ್ಚರಿಕೆಗಳು ಮತ್ತು ಜಾಗರೂಕತೆ == ಡಿಪಿಟಿ ಎಂದು ಕರೆಯಲ್ಪಡುವ ಲಸಿಕೆಯನ್ನು ಮಕ್ಕಳಿಗೆ ಮೊದಲನೆಯದನ್ನು ಮೂರನೇ ವರ್ಷದಲ್ಲಿ, ಎರಡನೆಯದನ್ನು ೪ನೇ ವರ್ಷದಲ್ಲಿ ಮತ್ತು ಮೂರನೆಯದನ್ನು ೫ನೇ ವರ್ಷದಲ್ಲಿ ನೀಡಬೇಕು. ಗಾಯವಾಗಲಿ, ಆಗದಿರಲಿ ಪ್ರತಿ ೫ವರುಷಕ್ಕೊಮ್ಮೆ ಟಿಟಿ ಇಂಜೆಕ್ಷನ್ ತೆಗೆದುಕೊಳ್ಳಲೇಬೇಕು. ಗಾಯವಾಗಿದ್ದು ಅದರಲ್ಲಿ ಮಣ್ಣು, ಧೂಳಿದ್ದರೆ, ಕೂಡಲೆ ಗಾಯವನ್ನುಸೋಪಿನಿಂದ ತೊಳೆದು ಸ್ವಚ್ಛಗೊಳಿಸಿ, ಟಿಟಿ ಇಂಜೆಕ್ಷನ್ ತೆಗೆದುಕೊಳ್ಳಬೇಕು. == ಉಲ್ಲೇಖ == < />