ಧರ್ಮವತಿ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೫೯ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ಧಾಮಾವತಿ ಎಂದು ಹೆಸರಿಸಿದ್ದಾರೆ. ಈ ರಾಗವು ಹಿಂದೂಸ್ತಾನಿ ಸಂಗೀತ ಪದ್ದತಿಯಲ್ಲಿ ಮಧುವಂತಿ ಎಂಬ ಹೆಸರಿನಲ್ಲಿ ಬಳಕೆಯಲ್ಲಿದೆ. == ರಾಗ ಸ್ವರೂಪ ಮತ್ತು ಲಕ್ಷಣ == ಇದು ಹತ್ತನೆಯ ದಿಸಿ ಚಕ್ರದ ಐದನೆಯ ರಾಗ.ಇದರ ನೆನೆಪಿನ ಹೆಸರು ದಿಸಿ-ಮಾ ನೆನಪಿನ ನುಡಿಕಟ್ಟು:ಸ ರಿ ಗಿ ಮಿ ಪ ಧಿ ನು ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ. ಆರೋಹಣ ಸ ರಿ೨ ಗ೨ ಮ೨ ಪ ದ೨ ನಿ೩ ಸ ಅವರೋಹಣ ಸ ನಿ೩ ದ೨ ಪ ಮ೨ ಗ೨ ರಿ೨ ಸ ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ. 'ಷಡ್ಜ, ಚತುಶ್ರುತಿ ರಿಷಭ,ಸಾಧಾರಣ ಗಾಂಧಾರ,ಪ್ರತಿಮಧ್ಯಮ,ಪಂಚಮ,ಚತುಶೃತಿ ಧೈವತಮತ್ತು ಕಾಕಲಿ ನಿಷಾಧ.ಇದು ೨೩ನೆಯ ಮೇಳಕರ್ತ ರಾಗವಾದ ಗೌರಿಮನೋಹರಿಗೆ ಸಮಾನವಾದ ಪ್ರತಿಮಧ್ಯಮವನ್ನು ಹೊಂದಿದೆ. == ಜನ್ಯ ರಾಗಗಳು == ಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ.ಇವುಗಳಲ್ಲಿ ಮಧುವಂತಿ, ಶ್ರೀ ತ್ಯಾಗರಾಜ, ರಂಜನಿ ಮತ್ತು ವಿಜಯನಗರಿ ಹೆಚ್ಚು ಬಳಕೆಯಲ್ಲಿವೆ. == ಜನಪ್ರಿಯ ರಚನೆಗಳು == ಧರ್ಮವತಿ ರಾಗದಲ್ಲಿ ಹೆಚ್ಚು ಪ್ರಚಲಿತವಿರುವ ಕೆಲವು ಕೃತಿಗಳು ಪರಂದಾಮವತಿ ಜಯತಿ- ಮುತ್ತುಸ್ವಾಮಿ ದೀಕ್ಷಿತ ಓಡೋಡಿ ವಂದೆನ್ ಕಣ್ಣ- ಅಂಬುಜಮ್ ಕೃಷ್ಣ ಭಜನ ಸೇಯದ ರಾದ - ಮೈಸೂರು ವಾಸುದೇವಾಚಾರ್ಯ ವಾಶಮ ನೀ- ಎಂ.ಬಾಲಮುರಳಿಕೃಷ್ಣ == ಸಂಬಂಧಿತ ರಾಗಗಳು == ಗ್ರಹಭೇದಮ್ ಸೂತ್ರವನ್ನು ಧರ್ಮವತಿ ರಾಗಕ್ಕೆ ಅನ್ವಯಿಸಿದಾಗ ೨ ರಾಗಗಳು ದೊರೆಯುತ್ತದೆ.ಅವುಗಳು ಚಕ್ರವಾಕ ಮತ್ತು ಕೋಸಲ == ಉಲ್ಲೇಖಗಳು ==